೧೦೧ ಸಸಿ ನೆಟ್ಟು  ಕಂದಾಯ ದಿನಾಚರಣೆ ಆಚರಣೆ.

ಶಹಾಪುರ:ಶಹಾಪುರ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ವಿಶೇಷವಾಗಿ ಸಸಿ ನೆಡುವುದರ ಮುಖಾಂತರ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ಅಧಿಕಾರಿಗಳು ಕಚೇರಿಯ ಕರ್ತವ್ಯದಲ್ಲಿ  ನಿಷ್ಠೆ ಪ್ರಾಮಾಣಿಕೆತೆಯಿಂದ ಹಾಗೂ ಜವಾಬ್ದಾರಿಯಿಂದ  ಕಾರ್ಯಪ್ರವೃತ್ತರಾಗಿ ಎಂದು ತಹಸೀಲ್ದಾರ್ ಮಧುರಾಜ್ ಕೂಡಲಗಿ ಸಲಹೆ ನೀಡಿದರು.

ಶಹಾಪುರ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ದಾವಣಗೆರೆ ಹಾಗೂ ತಾಲ್ಲೂಕು ಘಟಕ ಶಹಾಪುರ ವತಿಯಿಂದ ವಸುಂಧರೆಗೊಂದು ದಿನ ಶೀರ್ಷಿಕೆಯಡಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ 101 ಗಿಡಗಳನ್ನು ನೆಟ್ಟು ಮಕ್ಕಳಂತೆ ನಾವು ನೀವೆಲ್ಲರೂ ಪೋಷಿಸೋಣ ಎಂದು ಪ್ರತಿಜ್ಞೆ ಮಾಡಿದರು.ಈ ಸಂದರ್ಭದಲ್ಲಿ ಸೇತು ಮಾಧವ್, ಸಂಗಮೇಶ್ ನಾಯಕ್, ಗುಂಜಪ್ಪ ನಾಯಕ್, ಉಪಾಧ್ಯಕ್ಷರಾದ ರಮೇಶ ರಾಠೋಡ್,ವಿಜಯ ರಾಠೋಡ,ಖಜಾಂಚಿ ತಾನಾಜಿ, ವೆಂಕಟೇಶ್,ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *