ಕೆಪಿಸಿಸಿ ವೈದ್ಯ ಕೋಶದ ಯಾದಗಿರಿ ಜಿಲ್ಲಾಧ್ಯಕ್ಷರಾದ ಡಾ.ಕೃಷ್ಣಮೂರ್ತಿಯವರಿಂದ ರಾಷ್ಟ್ರೀಯ ವೈದ್ಯಕೀಯ ದಿನಾಚರಣೆ ಶುಭಾಶಯಗಳು

ಶಹಾಪೂರ:ಇಂದು ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯಾಗಿದ್ದು ರಾಜ್ಯ, ಜಿಲ್ಲೆ ಮತ್ತು ಶಹಾಪುರ ತಾಲೂಕು ವೈದ್ಯರಿಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವೈದ್ಯಕೀಯ ಘಟಕದ ರಾಜ್ಯ ಅಧ್ಯಕ್ಷರಾದ ಡಾ.ಬಿ.ಕೆ.ಮಧುಸೂಧನ ಅವರನ್ನೋಳಗೊಂಡು, ಜಿಲ್ಲೆ, ತಾಲೂಕು ಘಟಕದ ಎಲ್ಲಾ ಸದಸ್ಯರಿಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಯಾದಗಿರಿ ಜಿಲ್ಲಾ ವೈದ್ಯಕೀಯ ಘಟಕದ ಜಿಲ್ಲಾಧ್ಯಕ್ಷರಾದ ಡಾ.ಕೃಷ್ಣಮೂರ್ತೀಯವರು ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಡಾ.ಬಿಧಾನ್ ಚಂದ್ರರಾಯ್ ರವರ ನೆನಪಿಗೋಸ್ಕರವಾಗಿ ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು,ಅವರ ಜನನ ಮತ್ತು ಮರಣ ಒಂದೇ ದಿನವಾಗಿದೆ. ಅವರ ನೆನಪಿಗಾಗಿ ಈ ದಿನವನ್ನು ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಪಾಟ್ನಾದ ಬಂಕಿಪುರ ಗ್ರಾಮದಲ್ಲಿ ಜುಲೈ 01, 1882 ರಲ್ಲಿ ಜನಿಸಿದ
ಡಾ.ಬಿಧಾನ್ ಚಂದ್ರರಾಯ್ ಜುಲೈ 01,1962 ರ ಕೋಲ್ಕತ್ತಾದಲ್ಲಿ ಮೃತರಾದರು.
ಎರಡು ಬಾರಿ ಪಶ್ಚಿಮ ಬಂಗಾಳ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.ವೈಧ್ಯರಾಗಿದ್ದರೂ
ಸ್ವಾತಂತ್ರ ಹೋರಾಟಗಾರರಾಗಿ ಹೋರಾಡಿದರು ಎಂದು ಹೇಳಿದರು.

ಕೋವೀಡ್ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು “ಆರೋಗ್ಯ ಹಸ್ತ” ಎನ್ನುವ ಕಾರ್ಯಕ್ರಮವನ್ನು ರೂಪಿಸಿ, ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಕಾಂಗ್ರೆಸ್ ವೈದ್ಯಕೀಯ ಘಟಕದವರಿಗೆ ನೆರವಾಗಲು ತಿಳಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವೈದ್ಯಕೀಯ ಘಟಕದ ವೈದ್ಯರೆಲ್ಲರೂ ರಾಜ್ಯಾದ್ಯಂತ ಹಗಲು ರಾತ್ರಿ ಎನ್ನದೆ ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನೇ ಬದಿಗೊತ್ತಿ ಕಾರ್ಯ ಪ್ರವೃತ್ತರಾಗಿ ಸೇವೆ ಸಲ್ಲಿಸಿದ್ದಾರೆ.ಇದು ರಾಜ್ಯಾದ್ಯಕ್ಷರ ಉತ್ತಮ ಕಾರ್ಯವಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ವೈದ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

About The Author