ಜಿಲ್ಲಾಧಿಕಾರಿಗಳಿಂದ ಸಾರ್ವತ್ರಿಕ ಅಹವಾಲು | ಸಮರ್ಪಕ ಕರ್ತವ್ಯ ನಿರ್ವಹಣೆಗೆ ತಾಖೀತು

” ಶಹಾಪುರ ತಾಲೂಕಿನ ತಹಶೀಲ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್  ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿರುವುದು”

ಶಹಾಪುರ:ಇಲಾಖಾ ವ್ಯಾಪ್ತಿಯಲ್ಲಿ ಬರುವ  ಸಮಸ್ಯೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್, ತಾಕೀತು ಮಾಡಿದರು.

ಸರ್ಕಾರದನಿರ್ಧೇಶನದಂತೆ ಜಿಲ್ಲೆಯ ಪ್ರತಿ ಮಂಗಳವಾರ ತಾಲುಕಾ ಕೇಂದ್ರಕ್ಕೆ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಸ್ವೀಕರಿಸಿ ಪರಿಹರಿಸುವುದಾಗಿ ತಿಳಿಸಿದರು.ಇಂದು ನಗರಸಭೆ ತಾಲೂಕು,ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತೆ  17 ಅರ್ಜಿಗಳು ಬಂದಿದ್ದು,ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲಾಗುವುದು.ತಹಸಿಲ್ದಾರರು ಸಂಭಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ವಿಲೆವಾರಿ ಮಾಡುತ್ತಾರೆ ಎಂದು ತಿಳಿಸಿದರು.ತಾಲುಕಾ ಭೂಮಾಪನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆಯನ್ನು ಮನವರಿತ ಜಿಲ್ಲಾಧಿಕಾರಿಗಳು ಪ್ರತಿ ದಿನ 20 ಅರ್ಜಿಗಳೊಂದಿಗೆ ಭೂ ಸರ್ವೆ ಕಾರ್ಯ ಮಾಡಬೇಕು ಎಂದರು.

” ತಾಲೂಕಿನ ವಿವಿಧ ಗ್ರಾಮಗಳಿಂದ ಸಮಸ್ಯೆಗಳನ್ನು ಹೊತ್ತು ತಂದ ಸಾರ್ವಜನಿಕರು”

ಅಪರ ಜಿಲ್ಲಾಧಿಕಾರಿಗಳಾದ ಶಂಕರಗೌಡ ಸೊಮನಾಳ. ಸಹಾಯಕ ಆಯುಕ್ತರಾದ ಶಮ್ ಶಾಲಂ ಹುಸೇನಿ ಜಿಲ್ಲಾ ನಗರ ಯೋಜನೆ ನಿರ್ಧೇಶಕರಾದ ಶಿವಶರಣಪ್ಪ ನಂದಗಿರಿ, ತಹಿಸಲ್ದಾರರಾದ ಮದುರಾಜ ಕೂಡಲಗಿ, ತಾಪಂ.ಕಾನಿ ಅಧಿಕಾರಿ ಸೋಮಶೇಖರ ಬಿರಾದಾರ್. ನಗರಸಭೆ ಪೌರಾಯುಕ್ತರಾದ ಓಂಕಾರ ಪೂಜಾರಿ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ವಿವಿಧ ಹಳ್ಳಿಗಳಿಂದ ನೂರಾರು ಜನ ಆಗಮಿಸಿದ್ದರು.

About The Author