ಜಿಲ್ಲಾ ಪಂಚಾಯಿತ ಪುನರ್ವಿಂಗಡಣೆಯಲ್ಲಿ ರದ್ದಾದ ಹಯ್ಯಳ ಬಿ,ನಾಯ್ಕಲ್ ಕ್ಷೇತ್ರಗಳು

ಬಸವರಾಜ ಕರೇಗಾರ
basavarajkaregar@gmail.com

ಮುಖ್ಯಾಂಶಗಳು

* ರದ್ದಾದ ಹಯ್ಯಳ ಬಿ,ನಾಯ್ಕಲ್ ಜಿಲ್ಲಾ ಪಂಚಾಯತ್ ಕ್ಷೇತ್ರಗಳು.
* ಹೊಸದಾಗಿ ಸೃಷ್ಟಿಯಾದ ಕುರಕುಂದಿ ಜಿಪಂ.ಕ್ಷೇತ್ರ.
* ಹಯ್ಯಳ ಬಿ ಜಿಪಂ.ಕ್ಷೇತ್ರವನ್ನು ರದ್ದು ಮಾಡದಂತೆ  ಮನವಿ
     ರಾಜ್ಯ ಸರಕಾರ ಜಿಲ್ಲಾ ಪಂಚಾಯಿತಿ ಪುನರ್ ವಿಂಗಡನೆ ನೆಪದಲ್ಲಿ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್,ಹಯ್ಯಳ ಬಿ,ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ರದ್ದು ಮಾಡಿ, ತಾಲೂಕಿಗೆ ಕುರುಕುಂದಿ, ವಡಗೇರಾ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿಸಿದೆ.ಹಳೆಯ ಜಿಲ್ಲಾ ಪಂಚಾಯಿತಿಗಳಾದ ನಾಯ್ಕಲ್, ಹಯ್ಯಳ ಬಿ, ಕ್ಷೇತ್ರಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ   ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂದು ಹೇಳಲಾಗಿದ್ದು ?,ಮೊದಲ ಬಾರಿ ಪುನರ್ ವಿಂಗಡಣೆಯಾದಾಗ ಹಯ್ಯಳ ಬಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ತಡಿಬಡಿ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನಾಗಿ ಮಾಡಿದರೆ, ಎರಡನೇ ಸಾರಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ತಡಿಬಿಡಿಯನ್ನು ತೆಗೆದು ಕುರಕುಂದಿಯನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಮಾಡಿದೆ.
        ರಾಜಕೀಯ ನಾಯಕರಂತೆ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಕಂದಾಯ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಮಗಿಷ್ಟ ಬಂದ ಹಾಗೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನಾಗಿ ಮಾಡಿಕೊಂಡಿರುವರೆನೋ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.ಇದರಿಂದ ತಮಗಿಷ್ಟ ಬಂದಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಲಾಗಿದೆ ?.
      ಹಯ್ಯಳ ಬಿ ಗ್ರಾಮದಲ್ಲಿ ರಾಜಕೀಯ ಇಚ್ಛಾಶಕ್ತಿಯ ಮುಖಂಡರ ಕೊರತೆಯಿಂದ ಯಾರೂ ಕೂಡ ವಿರೋಧಿಸುತ್ತಿಲ್ಲ. ಗ್ರಾಮದ ರಾಜಕೀಯ ನೇತಾರರಾದ ಬಸವರಾಜಪ್ಪ ಸಾಹುಕಾರ  ಮರಣದ ನಂತರ ಹಯ್ಯಳ ಬಿ ಗ್ರಾಮ ಅನಾಥವಾಗಿದೆ.ಮಕ್ಕಳು ಕೂಡ ಗ್ರಾಮವನ್ನು ತೊರೆದು ಪಟ್ಟಣ ಸೇರಿರುವುದರಿಂದ ರಾಜಕೀಯ ಮುಖಂಡರ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಅಂದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಇಡೀ ಜಿಲ್ಲೆಯಲ್ಲಿಯೇ ಹಯ್ಯಳ ಬಿ ರಾಜಕೀಯ ಕೇಂದ್ರ ಬಿಂದುವಾಗಿತ್ತು.
    ಇತ್ತೀಚಿಗೆ  ಕುರುಕುಂದಿಗೆ ವರ್ಗಾವಣೆಯಾದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿರುದ್ಧ ತಡಿಬಿಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ.
      ಯಾವ  ಆಧಾರವನ್ನಿಟ್ಟುಕೊಂಡು ಹಯ್ಯಳ ಬಿ,ನಾಯ್ಕಲ್ ಜಿಲ್ಲಾ ಪಂಚಾಯತಿ ಕ್ಷೇತ್ರಗಳನ್ನು ರದ್ದು ಮಾಡಿದರು ಎಂದು ತಿಳಿಯುತ್ತಿಲ್ಲ ಎಂದು ಆ ಕ್ಷೇತ್ರದ ಮತದಾರರು ಅಂದುಕೊಳ್ಳುತ್ತಿದ್ದಾರೆ ?,ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸುವುದಾಗಿ ಹೇಳುತ್ತಿದ್ದಾರೆ.
ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಕ್ಷೇತ್ರ ಪುನರ್ವಿಂಗಡನೆಯ ಅಧಿಕಾರ ಇರುವುದು ಚುನಾವಣಾ ಅಧಿಕಾರಿಗಳಿಗೆ,ಚುನಾವಣಾಧಿಕಾರಿಗಳು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರ ಪುನರ್ವಿಂಗಡಣೆಮಾಡಿರುತ್ತಾರೆ.ಹಯ್ಯಳ ಬಿ  ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ರದ್ದು ಮಾಡಿರುವುದು ಒಳಿತಲ್ಲ. ಮುಂದುವರಿಸಿಕೊಂಡು ಹೋಗಬಹುದಿತ್ತು.
ಶರಣಗೌಡ ಐಕೂರು
ಅಧ್ಯಕ್ಷರು
 ಬಿಜೆಪಿ ಜಿಲ್ಲಾ ಯುವ ಮೋರ್ಚಾ ಯಾದಗಿರಿ
ಹಯ್ಯಳ ಬಿ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ರದ್ದು ಮಾಡಿರುವುದು ಖಂಡನಿಯ.ಕ್ಷೇತ್ರದ ವಿಂಗಡನೆ ಯಾವ ಆಧಾರವಾಗಿಟ್ಟುಕೊಂಡು ಮಾಡಿದರೂ ಗೊತ್ತಾಗುತ್ತಿಲ್ಲ. ನಾವು ಚುನಾವಣಾಧಿಕಾರಿಗಳಿಗೆ ರದ್ದು ಮಾಡದಂತೆ ಮೇಲ್ಮನವಿ  ಸಲ್ಲಿಸುತ್ತೇವೆ.
ಮೌನೇಶ್ ಪೂಜಾರಿ
 ಪ್ರಧಾನ ಕಾರ್ಯದರ್ಶಿಗಳು
 ಜಿಲ್ಲಾ ಕಾಂಗ್ರೆಸ್ ಘಟಕ ಯಾದಗಿರಿ

About The Author