ಮರಿಯಾಗುತ್ತಿರುವರೊ ಇಲ್ಲಾ ಮರೆಮಾಡುತ್ತಿಯರೊ ಜನಪ್ರೀಯ ಅಹಿಂದ ನಾಯಕರನ್ನು ?

 

ಅಯ್ಯಪ್ಪ ಕನ್ನಾಕೊಳುರು ಶರಣಪ್ಪ ಸಲಾದಪೂರ ಜನಮಾನಸದಲ್ಲಿ ಹೆಸರು ಮಾಡಿದ ಜನಪ್ರಿಯ ಸ್ವಾಭಿಮಾನಿ ಜನ ನಾಯಕರು.90 ರ ದಶಕದಲ್ಲಿ ಶಹಾಪೂರಿನ ವಿಧಾನಸಭೆಗೆ ಸ್ಪರ್ದಾಳುಗಳಾಗಿ ಎದುರಾಳಿಗಳಿಗೆ ಅಕ್ಷರಶಃ ನಡುಕ ಹುಟ್ಟಿಸಿದ ನೇರ ನಿಷ್ಠುರ ವಾದಿಗಳು,ತತ್ವ ಸಿದ್ದಾಂತಗಳಲ್ಲಿ ಬದ್ಧತೆಯನ್ನು ಹೊಂದಿರುವ ನಿಜವಾದ ಶಹಾಪೂರಿನ ಜನ ನಾಯಕರು,ಬದಲಾದ ಜಾತಿ ಮತ್ತು ಹಣಬಲದ ರಾಜಕೀಯಕ್ಕೆ ಬಲಿಯಾದರೊ,ಬಲಿಮಾಡಿದರೊ ತಿಳಿಯದು. ಆದರೆ ನಿಜವಾದ ಶಹಾಪೂರಿನ ಜನ ನಾಯಕರಿವರೆಂದು ಅವರ ಸಮಕಾಲಿನ ಹಿರಿಯರು ಮತ್ತು ಅವರ ಹೋರಾಟಗಳಲ್ಲಿ ತೊಡಗಿದ ಅಂದಿನ ಅನೇಕ ಯುವಕರು ನೆಪಿಸಿಕೊಳ್ಳುತ್ತಾರೆ. ತಮ್ಮ ನಾಲ್ಕು ದಶಮಾನದ ರಾಜಕಾರಣದಲ್ಲಿ ಯಾವೊಂದು ರಾಜಕೀಯ ಹುದ್ದೆಯನ್ನು ಪಡೆಯದಿದ್ದರೂ, ಇಂದಿಗೂ ಜನರ ಹೃದಯದ ನಾಯಕರಾಗಿದ್ದಾರೆಂದು ರೈತಾಪಿವರ್ಗ ಮತ್ತು ಪ್ರಜ್ಞಾವಂತ ಅಹಿಂದ ಜನರು ನೆನಪಿಸಿಕೊಳ್ಳುತ್ತಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಕಛೇರಿಯನ್ನು ಭೀಮರಾಯನ ಗುಡಿಗೆ ತರುವುದಕ್ಕೆ ಶ್ರಮವಹಿಸಿ ಈ ಭಾಗದ ನೀರಾವರಿಯ ಅಭಿವೃದ್ಧಿಗೆ ಕಾರಣಿ ಬೂತರಾದ ದಿವಂಗತ ಬಾಪುಗೌಡ ದರ್ಶನಾಪೂರ ಮರಣದ ನಂತರ ಜನತಾಪಕ್ಷದ ಟಿಕೆಟ್ ಅಯ್ಯಪ್ಪ ಕನ್ಯಾಕೊಳುರವರಿಗೆ ದೊರೆಯುತ್ತದೆ.ಅದೇ ಸಂದರ್ಭದಲ್ಲಿ ಪ್ರೋಪೆಸರ್ ನಂಜುಂಡ ಸ್ವಾಮಿಯವರ ರೈತ ಹೋರಾಟದಲ್ಲಿ ಸಕ್ರಿಯರಾಗಿದ್ದ ಬಿಸಿನೆತ್ತರಿನ ನವತರುಣ ಸರ್ಕಾರಿ ನೌಕರಿಯ ಆಮಿಷ್ಯಕ್ಕು ಒಳಗಾಗದೆ ಶರಣಪ್ಪ ಸಲಾದಪೂರ ರೈತ ಸಂಘದಿಂದ ಸ್ಪರ್ದೆಗಿಳಿಯುತ್ತಾರೆ. ತ್ರೀಕೊನ ಸ್ಪರ್ದೆ ಏರ್ಪಟ್ಟರೂ ಸಹ ಅಹಿಂದ ಮತದಾರರು ತಮ್ಮ ರಾಜಕೀಯ ಅಜ್ಞಾನದಿಂದಾಗಿ ಮತ್ತು ಮತದಾನದ ಮೌಲ್ಯವರಿಯದೆ ಇರುವ ಕಾರಣಕ್ಕಾಗಿ ಅಹಿಂದ ನಾಯಕರು ಸೋತು ಶಿವಶೇಖರಪ್ಪಗೌಡ ಶಿರವಾಳ ಗೆಲುವನ್ನು ಸಾಧಿಸುತ್ತಾರೆ.

ಇದಾದ ನಂತಲ ಇವರಿರ್ವರ ಶಕ್ತಿ ಸಾಮರ್ಥ್ಯವನ್ನು ಅರ್ಥಮಾಡಿಕೊಂಡ ಮೇಲ್ವರ್ಗದ ಜನನಾಯಕರು ತಮ್ಮ ಭವಷ್ಯದ ರಾಜಕೀಯ ಅಧಿಕಾರದ ವಿರೋಧಿ ಶಕ್ತಿ ಇವರೆಂದು ಭಾವಿಸಿಕೊಂಡು ಇವರಿರ್ವರನ್ನು ರಾಜಕೀಯವಾಗಿ ಶಕ್ತಿವಂತರಾಗಬಾರದೆಂದು ನಿಶ್ಚಯಿಸಿ ಒಬ್ಬರಿಗೆ ಮಾಡದ ಕೊಲೆ ಆರೋಪವನ್ನು ಹೊರಿಸಿ ಊರು ತೊರೆಯುವಂತೆ ಮಾಡಿದರೆ,ಮತ್ತೊರ್ವರಿಗೆ ಜಿಲ್ಲಾ ಪಂಚಾತಿಯಲ್ಲಿ ಸೋಲಿಸಿ ಶಕ್ತಿಗುಂದದಂತೆ ಮಾಡಿದರು.ಆದರೂ ಇವರು ಇಂದಿೂ ನ್ಯಾಯ ನೀತಿ ಮತ್ತು ನಿಯತ್ತಿನಿಂದಲೆ ಜೀವಿಸುತ್ತಿರುವ ತತ್ವ ಬದ್ದ ರಾಜಕಾರಣದ ಅನುಭವ ಇಂದಿನ ಯುವ ಪಿಳಿಗೆಗೆ ಹಾಗೂ ಪ್ರಜಾಪ್ರಭುತ್ವದ ನಾಗರಿಕ ಸಮಾಜಕ್ಕೆ ಮಾರ್ಗದರ್ಶನವಾಗಿದ್ದಾರೆಂದು ಹೇಳುತ್ತಾರೆ ಅವರ ಒಡನಾಡಿಗಳು.

ಸಾಮಾನ್ಯವಾಗಿ ಪ್ರಭಾವಿ ನಾಯಕರ ಮರಣದ ನಂತರ ಅವರ ಮಕ್ಕಳಿಗೆ ಇಲ್ಲಾ ಮನೆಯವರಿಗೆ ಟಿಕೆಟ್ ನೀಡುವದು ಸಂಪ್ರದಾಯವಾಗಿದೆ. ಇಂತಹ ಸಂಪ್ರದಾಯವನ್ನು ಮುರಿದು ದಿವಗಂತ ಬಾಪುಗೌಡರ ಮರಣದ ನಂತರ ರಾಷ್ಟ್ರೀಯ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ಕಣಕ್ಕಿಳಿದ ನಾಯಕರನ್ನು ಜನ ಬೆಂಬಲಿಸಿದರು. ಆದರೆ ಮತ ನೀಡದೆ ಸೋಲಿಸಿದ್ದು ಸಾಲದೆಂದು ಸಗರ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿಯೂ ಸೋಲಿಸಿ. ಸೋತಿತು ಅಹಿಂದ ಸಮುದಾಯ, ರಾಜ್ಯದ ಅಹಿಂದ ನೇತಾರ ಸಿದ್ದರಾಮಯ್ಯ ನವರು ಸಹ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ತಮ್ಮ ಪಕ್ಷದ ಸ್ಪರ್ಧಿಸಿ ಸೋತವರನ್ನು ತಮ್ಮ ಒಡನಾಡಿ ಬೆಂಬಲಿಗ ಈ ಅಹಿಂದ ನಾಯಕನ ಕೈಹಿಡಿದು ಸರ್ಕಾರ ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದೆ ವಂಚಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದರೆಂದು ಅನೇಕ ಅಹಿಂದ ಮತದಾರ ಪ್ರಭುಗಳು ದೂರುತ್ತಾರೆ. ಆದರು ಅವರು ಇಂದಿಗೂ ಪ್ರಮಾಣಿಕವಾಗಿ ಜನರ ನೋವು ನಲಿವಿಗೆ ಸ್ಪಂದಿಸಿ ಸದಾ ಜನರ ಮದ್ಯೆ ಬದುಕುವ ಜನಪ್ರಿಯ ನಾಯಕ. ಇವತ್ತು ಪಕ್ಷದೊಳಗೆ ಸಾಮಾನ್ಯ ಕಾರ್ಯಕರ್ತನಾಗುವಂತಾದದ್ದು ಸ್ವಾಭಿಮಾನಿ ಅಹಿಂದ ಜನರ ರಕ್ತ ಕುದಿಯುವದು. ಆದರೆ ಅಹಿಂದ ರಾಜಕಾರಣಿಗಳ ರಕ್ತ ಕುದಿಯದಿರುವದು ವಿಪರ್ಯಾಸವಾಗಿದೆಯೆಂದು ಕ್ಷೇತ್ರದ ಅನೇಕ ಪ್ರಜ್ಞಾವಂತ ಮತದಾರರು ಮಾತನಾಡುತ್ತಾರೆ.ಕಾಲೇಜು ಜೀವನದಲ್ಲಿಯೆ ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ರೈತ ಚಳವಳಿಯ ಮೂಲಕ ರಾಜಕಾರಣಕ್ಕೆ ಬಂದ ರೈತ ಹೋರಾಟಗಾರ ಶರಣಪ್ಪ ಸಲಾದಪೂರ ಎರಡೂ ಬಾರಿ ರೈತ ಸಂಘದಿಂದ, ಒಮ್ಮೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆಮಾಡಿ ಸೊತರು.

ಘಟಾನುಘಟಿಗಳಿಗೆ ನಡುಕ ಹುಟ್ಟಿಸಿ ಪ್ರಭಾವಿಗಳ ಸೋಲು ಗೆಲುವಿನ ಲೆಕ್ಕಾಚಾರ ಬದಲಾಯಿಸಿ, ಅಹಿಂದ ಜನಗಳ ಶಕ್ತಿಯನ್ನು ಜೀವಂತವಾಗಿಟ್ಟಿದ್ದಾರೆ.1989ರ ಚುನಾವಣೆ ನಾಮಿನೇಷನ್ ಪೈಲ್ ಮಾಡುವಾಗ ಬೆಂಬಲ ಸೂಚಿಸಲು ಬಂದ ಸುಮಾರು 500 ಕ್ಕೂ ಹೆಚ್ಚು ಜೊಡೆತ್ತು ಬಂಡಿಗಳ ಹಸಿರು ಶಲ್ಲೆಯ ನೇಗಿಲಯೋಗಿ, ಬಾರಕೋಲ್ ವೀರ ರೈತರ ದಂಡು ಸೋಲರಿಯದ ಸರ್ದಾರ್ ಮಲ್ಲಿಕಾರ್ಜುನ ಖರ್ಗೆ ಯವರ ಕಾರು ಕೂಡ ಸುಮಾರು ಮುಕ್ಕಾಲು ಗಂಟೆ ಟ್ರಾಫಿಕ್ ನಲ್ಲಿ ನಿಲ್ಲುವಂತಾಗಿ, ಯಾರಪ್ಪಾ ಇವರು ಇಷ್ಟೊಂದು ಸಂಘಟನೆ ಮಾಡಿದ್ದಾನೆಂದು,ಮೆಚ್ಚುಗೆವ್ಯಕ್ತಪಡಿದರು. ಚುನಾವಣೆಯ ನಂತರ ಸ್ವತಹ ಅವರೆ ಕರಿಸಿಕೊಂಡು ಮಾತನಾಡಿ ಅಭಿನಂದನೆಗಳು ಹೇಳಿ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರೆಂದು ಅವರ ಒಡನಾಡಿಗಳು ಸ್ಮರಿಸಿಕೊಳ್ಳುತ್ತಾರೆ.

ಸೋಲರಿಯದ ನಾಯಕನ ಮನಗೆದ್ದ ನಾಯಕನ ಬೆಂಬಲಿಗನಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ತಮ್ಮ ಬೆವರನ್ನು ಸುರಿಸಿದರು. ‘ಕಾರ್ಮಿಕರ ಶ್ರಮದ ಬೆವರು ಆರುವ ಮುನ್ನವೆ ಕಾರ್ಮಿರ ಕೂಲಿ ಕೊಡಬೇಕು ‘ಎನ್ನುವದು ಕೇವಲ ಮಾರ್ಕ್ಸ್ ವಾದವಲ್ಲ. ಪ್ರತಿ ಶ್ರಮಿಕನವಾದುವು ಆಗಿದೆ.ಆದರೆ ರೈತ ಹೋರಾಟಗಾರನ ಶ್ರಮಕ್ಕೆ ಫಲಕೊಡುವ ವಿಚಾರದಲ್ಲಿ ಪಕ್ಷ ಮತ್ತು ಪಕ್ಷದ ನೇತಾರ ಖರ್ಗೆಯವರ ಶ್ರಮವು ಪಟ್ಟಭದ್ರ ಇತಾಸಕ್ತಿ ಶಕ್ತಿಗಳಿಗೆ ಸೋತ ಪರಿಣಾಮವಾಗಿ 2013 ಚುನಾವಣೆಯಲ್ಲಿ ಪಕ್ಷ ತೋರೆದ ರೈತನಾಯಕ ಜೆಡಿಎಸ್ ನಿಂದ ಕಣಕ್ಕಿಳಿದು ಗೆಲ್ಲದಿದ್ದರು ಪಕ್ಷದ ಸೋಲಿಗೆ ಕಾರಣಿಭೂತರಾದರು. ಈ ಸತ್ಯವನ್ನು ಅರಿತವರು 2018ರಲ್ಲಿ ಮತ್ತೆ ರೈತ ಹೋರಾಟಗರನಿಗೆ ಸೂಕ್ತ ಸ್ಥಾನಮಾನದ ಭರವಸೆಯನ್ನು ಕೊಟ್ಟು ಮರಳಿ ಪಕ್ಷಕ್ಕೆ ಕರೆದುಕೊಂಡು ಗೆಲುವನ್ನು ಸಾಧಿಸಿದರು. ಆದರೆ ಮರಳಿ ಚುನಾವಣೆ ಸಮಿಪ ಬಂದರು ಯಾವ ಭರವಸೆಯು ಈಡೇರಿಸದಿರುವದು ಕಂಡು ಕೊತಕೊತ ಕುದಿಯುತ್ತಿದೆ ರೈತ ನಾಯಕನ ಅಭಿಮಾನಿಗಳ ಹೃದಯಂತರಾಳವು.

ಮುಂಬರುವ ಚುನಾವಣೆಯಲ್ಲಿ ಅದು ಜ್ವಾಲಾಮುಖಿಯಾಗಿ ಸ್ಪೋಟವಾದರೆ ಪಕ್ಷದ ಗೆಲುವಿನ ಕುಸುಮವು ಮುದುಡಿ ಮುಳುಗ ಬಹುದೆಂದು ಕಾಂಗ್ರೆಸ್ ಪಕ್ಷದ ಬಹುತೇಕ ಕಾರ್ಯಕರ್ತರು ಕ್ಷೇತ್ರದಲ್ಲಿ ಮಾತನಾಡುತ್ತಿದ್ದಾರೆ.ಈ ಮಾತುಗಳು ರೈತ ನಾಯಕ ಮತ್ತವರ ಅಭಿಮಾನಿಗಳ ಮನ ತಲುಪಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಕ್ಷೇತ್ರದಲ್ಲಿ ಮತ್ತೊಮ್ಮೆ ರಾಜಕೀಯ ಕ್ರಾಂತಿಯ ಜ್ವಾಲೆ ಉದಯಿಸಿದರೆ ಆಚ್ಚರಿ ಇಲ್ಲಾ ಎಂದು ಹಲವರು ಮಾತನಾಡುತ್ತಾರೆ.ಹೀಗಾಗಿ ರೈತನಾಯಕರಿಗೆ ಸೂಕ್ತಸ್ಥಾನಮಾನ ನೀಡುವದು ಪಕ್ಷದ ಹಿತದೃಷ್ಟಿಯಿಂದ ಸೂಕ್ತವಾಗಿದೆ.ಕೆಲವು ತಿಂಗಳಗಳ ಹಿಂದೆ ನಡೆದ ಸ್ಥಳಿಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಇವರನ್ನು ಕಣಕ್ಕಿಳಿಸಿದರೆ ಭವಷ್ಯ ಗೆಲುವು ಸುಲಭವಿತ್ತು. ಆದರೆ ಕೇವಲ ಹಣವಿಲ್ಲವೆಂಬ ಕಾರಣದಿಂದ ಅವರನ್ನು ತಿರಸ್ಕಾರ ಮಾಡಿದ ಪಕ್ಷದ ನೇತಾರರು ಮುಂಬರುವ ಚುನಾವಣೆಯಲ್ಲಿ ಹಣದ ಹೊಳೆಯು ಹರಿಸಿದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವದು ಸುಲಭವಲ್ಲವೆಂಬ ಸತ್ಯವರಿಯದೆ ಹೋದರೆಂದು ಕಾಂಗ್ರಸ್ ನ ಕಾರ್ಯಕರ್ತರು ಮಾತನಾಡುತ್ತಾರೆ,

ಒಟ್ಟಾರೆ ಹೇಳುವದಾದರೆ ಇವರಿರ್ವರು ಕ್ಷೇತ್ರದಲ್ಲಿ ಅಹಿಂದ ನಾಯಕರಾಗಿ ಪ್ರಗತಿಪರ ಚಿಂತಕರಾಗಿ, ರೈತ ಹೋರಾಟಗಾರರಾಗಿ ನಾಲ್ಕು ದಶಮಾನಗಳ ಕಾಲ ಕ್ಷೇತ್ರದಲ್ಲಿ ಅಹಿಂದ ಜನಗಳ ಸಾಕ್ಷಿ ಪ್ರಜ್ಞೆಯಾಗಿ ಜೀವಂತಾವಾಗಿದ್ದಾರೆ, ಇಂದಿಗೂ ಜನರ ಮಧ್ಯೆಯೆ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯುತ್ತಿರುವದು ಕಂಡು ಇದು ಪ್ರಜಾಪ್ರಭುತ್ವವೆ?, ನಿಜವಾಗಿ ಅಂಬೇಡ್ಕರ್ ಸಂವಿಧಾನವೆ?, ಆಡಳಿತ ಗ್ರಂಥವಾಗಿದೆಯೆ? ಎಂಬ ಪ್ರಶ್ನೆಗಳು ಮೂಡಿವೆ. ನಿಜವಾದ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಹೋರಾಟಗಾರರು ಮತ್ತು ನಿಜವಾದ ಅರ್ಹತೆಯಿರುವರಿಗೆ ರಾಜಕೀಯ ಅಧಿಕಾರ ದೊರೆಯದಿರುವದು ಸಂವಿಧಾನದ ಸೋಲೆ ಅಲ್ಲವೆ?. ಸಂವಿಧಾನ ಬರೆದು ಎಲ್ಲರಿಗೂ ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಸೋಲು ಇನ್ನೆಷ್ಟು ದಿನ ಮುಂದುವರಿಯುವುದು ಎಂಬ ಕಲ್ಪನೆಯು ಅಹಿಂದ ನಾಯಕರಿಗೂ ಮತ್ತು ಮತದಾರಿಗೂ ಇನ್ನು ಬಂದಿಲ್ಲ ಅಲ್ಲವೆ?

ಶರಣು ಪೂಜಾರಿ ಹುರಸಗುಂಡಗಿ
8217054492

About The Author