ಯಾದಗಿರಿ ವಿಧಾನಸಭಾ ಕ್ಷೇತ್ರ ಅಹಿಂದ ವರ್ಗ ಪರಿಗಣಿಸಿದರೆ ಕಾಂಗ್ರೆಸ್ ಪಕ್ಷದಿಂದ ಡಾ:ಭೀಮಣ್ಣ ಮೇಟಿ ಯವರಿಗೆ ಟಿಕೆಟ್ ಪಿಕ್ಸ್ ?

ಬಸವರಾಜ ಕರೇಗಾರ
basavarajkaregar@gmail.com

ಯಾದಗಿರಿ: ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ.ಶಹಾಪುರ,ಯಾದಗಿರಿ,ಗುರುಮಿಠಕಲ್ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಶಾಸಕರು, ಸುರುಪುರು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವಾಗಿದೆ.ಶಹಾಪುರ ಗುರುಮಿಟ್ಕಲ್ ಯಾದಗಿರಿಯಲ್ಲಿ ಲಿಂಗಾಯಿತ ಸಮಾಜದ ಶಾಸಕರು ಪ್ರಭಾವಿಗಳಾಗಿದ್ದರೂ,ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅವರವರ ಪಕ್ಷದ ಪರ ಟಿಕೆಟ್ ನೀಡುವ ಸಂಭವವಿದೆ.ಇಡೀ ಜಿಲ್ಲೆಯಲ್ಲಿಯೇ ಅಹಿಂದ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ ವಿಧಾನಸಭೆಯ ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಾಮಾಜಿಕ ಸಮತೋಲನದಡಿಯಲ್ಲಿ ಸಮಾನತೆಗಾಗಿ ಅಹಿಂದ ವರ್ಗದವರಿಗೆ ಯಾದಗಿರಿ ಕ್ಷೇತ್ರಕ್ಕೆ ಟಿಕೆಟ್ ಕೊಡಬೇಕು ಎಂದಾಗ ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಬ್ಬರ ಹೆಸರು ಚಾಲ್ತಿಗೆ ಬರುತ್ತವೆ.ಡಾ. ಭೀಮಣ್ಣ ಮೇಟಿ ಮತ್ತು A.C. ಕಾಡ್ಲೂರು.ಇವರಿಬ್ಬರಿಗೂ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದು ಹೈಕಮಾಂಡ್ ನಿರ್ಧಾರವಾಗಿರುತ್ತದೆ.ಯುವಕರು ಗೆಲುವಿನ ಹಾದಿಗೆ ಸಮೀಪವಾಗಿರುವ ವ್ಯಕ್ತಿ ಎಂದರೆ ಡಾ.ಭೀಮಣ್ಣ ಮೇಟಿ.ಸದಾ ಪಕ್ಷದ ಮತ್ತು ಕಾರ್ಯಕರ್ತರ ಸಮೀಪವಿರುವ ನಾಯಕ.ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಚಿಂತನೆಗಳನ್ನು, ಚಟುವಟಿಕೆಗಳಿಂದ ಕೂಡಿರುವಂತಹ ವ್ಯಕ್ತಿಯೆಂದರೆ ಭೀಮಣ್ಣ ಮೇಟಿ.

ಶೈಕ್ಷಣಿಕವಾಗಿ ಕಲ್ಯಾಣ ಕರ್ನಾಟಕದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಹಗಲಿರುಳು ಶ್ರಮಿಸುತ್ತಿರುವ, ಬೇಸಿಗೆ ದಿನಗಳಲ್ಲಿಯೂ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅದರ ಮುಖಾಂತರ ಉನ್ನತ ಶಿಕ್ಷಣಕ್ಕಾಗಿ ಬಡವರ್ಗದ ಜನರಿಗೆ ಹಣಕಾಸು ವ್ಯವಸ್ಥೆಯನ್ನು ಮಾಡುತ್ತಾರೆ.ನೀಟ್ ಪ್ರವೇಶ ಪರೀಕ್ಷೆಗಳಿಗಾಗಿ ತರಬೇತಿ ಶಿಬಿರಗಳನ್ನು ನಡೆಸಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಬೆನ್ನೆಲುಬಾಗಿರುವ ವ್ಯಕ್ತಿಯೆಂದರೆ ಭೀಮಣ್ಣ ಮೇಟಿ.ಕೊರೊನಾ ಸಂದರ್ಭದಲ್ಲಿ ಹಲವಾರು ಜನಹಿತ ಕಾರ್ಯಗಳನ್ನು ಕೈಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ವಸತಿರಹಿತರಿಗೆ ಧನ ಸಹಾಯವನ್ನು ಮಾಡಿದ್ದು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಜಿಲ್ಲೆಯಲ್ಲಿ ಅಹಿಂದ ಸಂಘಟನೆಯ ಮೂಲಕ ಮಂಚೂಣಿಯಲ್ಲಿರುವ ನಾಯಕ.ಎಲ್ಲ ಸಮಾಜದವರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ ?.ಇನ್ನೂ A.C.ಕಾಡ್ಲೂರು ರವರನ್ನು ಹೈಕಮಾಂಡ್ ಪರಿಗಣಿಸಿದಾಗ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆ ಗೊಂಡ ಅವರು ಅಪಾರ ಅಲ್ಪಸಂಖ್ಯಾತ ಮತಗಳನ್ನು ಹೊಂದಿದ್ದು,ವಯಸ್ಸನ್ನು ಕೂಡ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

ಯಾದಗಿರಿ ಜಿಲ್ಲೆಯಲ್ಲಿ ಅಹಿಂದ ವರ್ಗದವರೆಲ್ಲರೂ ಕೂಡಿ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಾದರೂ ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ಅಹಿಂದ ವರ್ಗದ ವ್ಯಕ್ತಿಗೆ ಬೆಂಬಲಿಸೋಣ ಎನ್ನುವ ತೀರ್ಮಾನಕ್ಕೆ ಬಂದಿರುವುದರಿಂದ ಕ್ಷೇತ್ರದಲ್ಲಿ ಇತರರಿಗೆ ನಡುಕ ಉಂಟಾಗಿದೆ ಎಂದು ಹೇಳಲಾಗುತ್ತಿದೆ.ಇದು ಸಾಧ್ಯವಾದರೆ, ಅಹಿಂದ ವರ್ಗವು ಒಗ್ಗಟ್ಟಾಗಿ ಬೆಂಬಲಿಸಿದರೆ ಭೀಮಣ್ಣ ಮೇಟಿಯವರು ಶಾಸಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

About The Author