ಗ್ಯಾಂಗ್ರೀನ್ ಕಾಯಿಲೆಯನ್ನು ಹೊಮಿಯೋಪತಿ ಔಷಧಿಗಳಿಂದ ಗುಣಪಡಿಸಲು ಸಾಧ್ಯ:ಡಾ.ಕೃಷ್ಣಮೂರ್ತಿ

ಶಹಾಪುರ:ಗ್ಯಾಂಗ್ರೀನ್ ಎನ್ನುವ ಕಾಯಿಲೆ ಮನುಷ್ಯನ ಯಾವುದೇ ಭಾಗಗಳಿಗೆ ಬಂದರೆ ಆ ಭಾಗವನ್ನು ಕಡಿದು ಹಾಕಬೇಕು ಅಥವಾ ಇಲ್ಲ ಕತ್ತರಿಸಬೇಕು. ಇಲ್ಲದಿದ್ದರೆ ಮನುಷ್ಯನ ದೇಹದೊಳಗೆ ಪಸರಿಸಿ ಮನುಷ್ಯ ಸಾಯುತ್ತಾನೆ ಎನ್ನುವುದು ಹಲೋಪತಿ ವೈದ್ಯರ ಅಭಿಪ್ರಾಯವಾದರೆ,

ಗ್ಯಾಂಗ್ರೀನ್ ಎನ್ನುವ ಕಾಯಿಲೆಯನ್ನು ನಮ್ಮ ಹೋಮಿಯೋಪತಿ ಔಷಧಿಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಸಮಯ ತೆಗೆದುಕೊಳ್ಳುತ್ತದೆ. ಹಲವಾರು ಕಾಯಿಲೆಗಳನ್ನು ಶಹಪುರ ತಾಲೂಕಿನ ಡಾ.ಮೂರ್ತಿ ಹೋಮಿಯೋಪತಿ ಕ್ಲಿನಿಕ್ ನಲ್ಲಿ ಸಂಪೂರ್ಣವಾಗಿ ಗುಣಪಡಿಸಲಾಗಿದೆ ಎಂದು ಹೇಳುತ್ತಾರೆ ಹೋಮಿಯೋಪತಿ ವೈದ್ಯರಾದ ಡಾ: ಕೃಷ್ಣಮೂರ್ತಿಯವರು.ಇಂದು ಅವರು ಡಾ.ಮೂರ್ತಿ ಹೋಮಿಯೋಪತಿ ಕ್ಲಿನಿಕ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ 50 ವರ್ಷದ ಬೀದರ್ ಮಹಿಳೆಗೆ ಗ್ಯಾಂಗ್ರಿನ್ ಟ್ರೀಟ್ಮೆಂಟ್ ಕೊಡುವ ಸಂದರ್ಭದಲ್ಲಿ ಹೇಳಿದರು.

ಗ್ಯಾಂಗ್ರೀನ್ ಕಾಯಿಲೆಯಿಂದ ಬಳಲುತ್ತಿರುವ ಬೀದರ್ ಜಿಲ್ಲೆಯ ಮಹಿಳೆ ಶಹಾಪುರದ ಡಾ. ಮೂರ್ತಿ ಹೋಮಿಯೋಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಮಾತನಾಡಿರುವುದು

ನಮ್ಮ ಆಸ್ಪತ್ರೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ರೋಗಿಗಳನ್ನು ಗ್ಯಾಂಗ್ರೀನ್ ಕಾಯಿಲೆಯಿಂದ ಗುಣಪಡಿಸಲಾಗಿದೆ.ಕೆಲವು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆಯೆ ಹೊರತು ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಹೋಮಿಯೋಪತಿಯ ಔಷಧಿಗಳಿಂದ ಸಾಧ್ಯ ಎನ್ನುತ್ತಾರೆ ಡಾ. ಕೃಷ್ಣಮೂರ್ತಿಯವರು. ಬೆನ್ನುನೋವು, ಚರ್ಮರೋಗ ಮತ್ತು ಮನುಷ್ಯನಿಗೆ ಬರುವ ದೀರ್ಘಕಾಲದ ಕಾಯಿಲೆಗಳಲ್ಲಿ ಹೋಮಿಯೋಪಥಿ ಔಷಧಿಗಳಿಂದ ಗುಣಪಡಿಸಲು ಸಾಧ್ಯ. ಕಾಯಿಲೆಗಳು ಮತ್ತೆ ಮರುಕಳಿಸದಂತೆ ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.ಹೋಮಿಯೋಪತಿ ಔಷಧಿಗಳಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಎನ್ನುತ್ತಾರೆ ಕೃಷ್ಣಮೂರ್ತಿಯವರು.

ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಬಡವರು ಕಾರ್ಮಿಕರು ಮತ್ತು ದುರ್ಬಲರಿಗೆ ಹೋಮಿಯೋಪತಿಕ್ ಔಷಧಿಗಳಿಂದ ಇತರ ದೀರ್ಘ ಕಾಯಿಲೆಗಳನ್ನು ಗುಣಪಡಿಸುವದಕ್ಕೋಸ್ಕರ ಹೋಮಿಯೋಪತಿಕ್ ಸೂಪರ್ ಸ್ಪೇಸಿಯಾಲಿಟಿ ಆಸ್ಪತ್ರೆಯನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ.

ಡಾ. ಕೃಷ್ಣಮೂರ್ತಿ MD(Hom).PG. Dip. IACH(Greece)
ಡಾ. ಮೂರ್ತಿ ಹೋಮಿಯೋಪತಿ ಆಸ್ಪತ್ರೆ
ಶಹಾಪುರ
9972215624

 

About The Author