ಡಾ:ಚಂದ್ರಶೇಖರ್ ಸುಭೇದಾರರವರ ಜನ್ಮದಿನೋತ್ಸವವಿಂದು, ಸರಳತೆಗೆ ಇನ್ನೊಂದು ಹೆಸರು ಡಾ.ಚಂದ್ರಶೇಖರ್ ಸುಬೇದಾರ್

ಬಸವರಾಜ ಕರೇಗಾರ
basavarajkaregar@gmail.com

ಶಹಾಪುರ:ವೈದ್ಯಲೋಕದಲ್ಲಿ ಅಚ್ಚರಿಯ ಮೂಡಿಸಿದ ವೈದ್ಯರು.ಸರಳತೆಗೆ ಇನ್ನೊಂದು ಹೆಸರೆ ಸರಿಯಾದ ಡಾ. ಚಂದ್ರಶೇಖರ್ ಸುಬೇದಾರ. 68ನೇ ವರ್ಷದ ಜನ್ಮದಿನವಿಂದು.ವೈದ್ಯ ವೃತ್ತಿಯ ಜೊತೆಗೆ ಸದಾ ಸಾಮಾಜಿಕ ಕಳಕಳಿಯುಳ್ಳವರು.ಸಗರ ನಾಡಿನಲ್ಲಿ ಸುಭೇದಾಲ ಮನೆತನವೆಂದರೆ ಸ್ವಾತಂತ್ರ್ಯ ಹೋರಾಟಗಾರರ ಮನೆತನ ಎನ್ನುವ ಹೆಸರು ನೆನಪಿಗೆ ಬರುತ್ತದೆ.ದೇಶಕ್ಕಾಗಿ ಹೋರಾಡಿದ ಮನೆತನವದು. ಅಚ್ಚಪ್ಪಗೌಡರಂತಹ ಮುತ್ಸದ್ದಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದವರು ಡಾ. ಚಂದ್ರಶೇಖರ ಸುಬೇದಾರ.

ತಾಲೂಕಿನ ಸಗರ ಗ್ರಾಮದಲ್ಲಿ 1954 ರಲ್ಲಿ ಜನನ. ಸ್ವಗ್ರಾಮ ಸಗರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ. ಪ್ರೌಢ ಶಿಕ್ಷಣ, ಪದವಿ ಮತ್ತು MBBS ವೈದ್ಯ ಕೋರ್ಸ್ ಅನ್ನು ಕಲಬುರ್ಗಿಯ SBR ಕಾಲೇಜಿನಲ್ಲಿ ಮುಗಿಸಿದರು.ENT  ಕೋರ್ಸನ್ನು ಕಲಬುರ್ಗಿಯ MRMC ಕಾಲೇಜಿನಲ್ಲಿ ಮುಗಿಸಿ, ಬಾಂಬೆಯ ಆಸ್ಪತ್ರೆಯಲ್ಲಿ ಒಂದು ವರ್ಷ ತರಬೇತಿ ಮುಗಿಸಿದ ನಂತರ 1987 ರಲ್ಲಿ ಶಹಪುರ್ ನಗರದಲ್ಲಿ ಸುಬೇದಾರ ಆಸ್ಪತ್ರೆಯನ್ನು ಪ್ರಾರಂಭಿಸಿದರು.
ಸುಬೇದಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ.ನಗರದಲ್ಲಿಯೇ ಯಾವ ಆಸ್ಪತ್ರೆಯಲ್ಲಿಯೂ ಇಲ್ಲದ ಜನದಟ್ಟಣೆ ಇಲ್ಲಿರುತ್ತದೆ.ಬರುವ ರೋಗಿಗಳ ಬಗ್ಗೆ ಅಪಾರ ಕಳಕಳಿಯುಳ್ಳವರು.ಅವರ ಕೈಗುಣ ಅಂತಹುದು ಎನ್ನುತ್ತಿದ್ದಾರೆ ರೋಗಿಗಳು.
ಡಾ. ಚಂದ್ರಶೇಖರ್ ಸುಬೇದಾರ ರವರು ವೈದ್ಯವೃತ್ತಿಯ ಜೊತೆಗೆ ಸಮಾಜಸೇವೆಗೆ ಹೆಚ್ಚು ಗಮನ ಕೊಡುತ್ತಾ, ವೈದ್ಯ ವೃತಿಯಲ್ಲಿಯು ಸಮಾಜ ಸೇವೆಯನ್ನು ಕಂಡವರು.ಅದಕ್ಕಾಗಿಯೇ ಆರೋಗ್ಯ ತಪಾಸಣೆ ವಾಹನವನ್ನು ಶಹಾಪೂರು ತಾಲೂಕಿನಾದ್ಯಂತ ವಾಹನದ ಜೊತೆಗೆ ಪ್ರತಿ ಹಳ್ಳಿಗೂ ವೈದ್ಯರು ಮತ್ತು ನರ್ಸಗಳನ್ನು ಹಳ್ಳಿ ಹಳ್ಳಿಗೂ ತೆರಳಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ಸಾಮಾನ್ಯ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಸಾಮಾನ್ಯ ಕೆಲಸದಲ್ಲ.ತುರ್ತು ಸಂದರ್ಭಗಳಲ್ಲಿ ಉಚಿತ ಅಂಬುಲೆನ್ಸ್ ನ್ನು  ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕಳಿಸುತ್ತಿದ್ದಾರೆ.
ತಮ್ಮದೇ ಆದ ಅಚ್ಚಪ್ಪಗೌಡ  ಟ್ರಸ್ಟನ್ನು ರಚಿಸಿಕೊಂಡು ತಂದೆಯವರಿಗೆ ಮಗನಾದ ಕಿರಣ್ ಸುಬೇದಾರ ಸಾಥ್ ನೀಡುತ್ತಿದ್ದು,ಕಲಬುರ್ಗಿಯಲ್ಲಿಯೂ ಸುಭೇದಾರ ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ.
ಜನಸೇವೆಗಾಗಿ ವೈದ್ಯವೃತ್ತಿಯ ಜೊತೆಗೆ ರಾಜಕೀಯ ರಂಗದಲ್ಲಿಯೂ ಪ್ರವೇಶಿಸುವುದರಿಂದ ಜನಸೇವೆ ಮಾಡಬಹುದಲ್ಲ ಎನ್ನುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸ್ಥಾಪಿಸಿದ ಕೆಜೆಪಿ ಪಕ್ಷದ ಕಡೆಗೆ ವಾಲಿದರು.ಶಹಾಪುರ ತಾಲೂಕಿನಾದ್ಯಂತ ಅಪಾರ ಜನಬೆಂಬಲಗಳಿಸಿದ್ದ ಇವರು ಶಹಾಪೂರು ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ಮನೋಭಾವ ಹೊಂದಿದ್ದರು.ಕಾರಣಾಂತರಗಳಿಂದ ಮಾಜಿ ಶಾಸಕರಾದ ಗುರುಪಾಟೀಲ್ ರವರಿಗೆ ಕೆಜೆಪಿ ಪಕ್ಷದ ಟಿಕೆಟ್ ದಕ್ಕಿತು.ನಂತರ ನಡೆದಿರುವುದು ಇತಿಹಾಸ. ಗುರುಪಾಟೀಲ್ ಶಾಸಕರಾಗಿ ಐದು ವರ್ಷದವರೆಗೆ ಕ್ಷೇತ್ರದಲ್ಲಿ ಶಾಸಕರಾದರು.ಗುರುಪಾಟೀಲರಿಗೂ ಸಾಥ್ ನೀಡುತ್ತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಡಾ. ಚಂದ್ರಶೇಖರ್ ಸುಬೇದಾರ, ಇದುವರೆಗೂ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಜನಸೇವೆ ಮಾಡುತ್ತಿರುವುದು ಅಚ್ಚರಿ.
 ಸುಬೇದಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಲಬುರ್ಗಿ, ಬೆಂಗಳೂರು, ಹೈದರಾಬಾದ್ ನಿಂದ ಹಲವಾರು ವೈದ್ಯರು ಆಗಮಿಸುತ್ತಿದ್ದು,ಬಡವರಿಗೆ ಸಾಮಾನ್ಯ ಜನರಿಗೂ ಕೂಡ ಅನುಕೂಲವಾಗಲೆಂಬುದು ಅವರ ಮಗನಾದ ಕಿರಣ್ ಸುಬೇದಾರ ಅಭಿಪ್ರಾಯವಾಗಿದೆ.
ಜನಾನುರಾಗಿ ಜನಸೇವಕರಾದ ಡಾ.ಚಂದ್ರಶೇಖರ್ ಸುಬೇದಾರವರಿಗೆ ವೈದ್ಯ ವೃತ್ತಿಯಲ್ಲಿ ಹಲವಾರು ಪ್ರಶಸ್ತಿಗಳು ಬಂದಿವೆ.ಆದರೂ ಜನರು ನೀಡುವ ಪ್ರಶಸ್ತಿಯೆ ದೊಡ್ಡದು ಎನ್ನುತ್ತಾರೆ ವೈದ್ಯರು.
ಜನ್ಮದಿನದಂದು ಸದಾ ಹಸನ್ಮುಖಿಯಾದ ಡಾ. ಚಂದ್ರಶೇಖರ್ ಸುಬೇದಾರ್ ಮುಂದಿನ ದಿನಗಳಲ್ಲಿ ಅವರೆಲ್ಲಾ ಆಸೆಗಳು ನೆರವೇರಲಿ.ಜನ ಸೇವಕರಾಗಲಿ ಎನ್ನುವುದು ಅವರ ಅಭಿಮಾನಿಗಳ ಒತ್ತಾಸೆಯಾಗಿದೆ.

About The Author