ಕೇಂದ್ರ ಸಚಿವ ಭಗವಂತ ಖೂಭ ರೈತನೊಂದಿಗೆ ನಡೆಸಿದ ಒರಟು ಮಾತಿನ ವಾಯ್ಸ್ ರೆಕಾರ್ಡರ್ ವೈರಲ್

ಬೀದರ:ಗೊಬ್ಬರ ಕೇಳಿದ ರೈತನಿಗೆ ಕೇಂದ್ರ ಸಚಿವ ಭಗವಂತ ಖೂಬಾ ಧಿಮಾಕಿನ ಮಾತುಗಳನ್ನಾಡಿದ ವಾಯ್ಸ್ ರಿಕಾರ್ಡ ವೈರಲ್ ಆಗಿದೆ.ಮೊಂಡುತನ ಮುಂದುವರೆಸಿದ ಕೇಂದ್ರ ಸಚಿವ ಭಗವಂತ ಖೂಬಾ ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ ಸರ್ ಅಂತ ಪ್ರಶ್ನೆ ಕೇಳಿದಕ್ಕೆ,ನಾನೇನು ಮಾಡಲಿ ಎಂದ ಉಡಾಫೆಯ ಮಾತುಗಳನ್ನಾಡಿದ್ದಾರೆ.

ಸಾವಿರಾರು ಜನ ನೌಕರರು ಇದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ.ನನ್ನ ಕೆಲಸ ರಾಜ್ಯಕ್ಕೆ ಕಳಿಸೋದಿದೆ, ಕಳಿಸಿದ್ದೇನೆ ಅಷ್ಟೇ ಎಂದು ಹೇಳುವ ಧ್ವನಿ ಮತ್ತು ಸ್ಥಳೀಯ ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು.

ಅಲ್ಲಿನ ಶಾಸಕ ಇದಾನಲ್ಲ,ಶಾಸಕರ ವಿರುದ್ಧ ಏಕವಚನ ಶಬ್ದ ಉಪಯೋಗ ಮಾಡಿದ ಕೇಂದ್ರ ಸಚಿವ..

ಸಾವಿರಾರು ಮಂದಿ ನೌಕರರು ಇದಾರೆ ಸರ್ಕಾರದಲ್ಲಿ ಅವರು ನೋಡಿಕೊಳ್ಳುವರು. ನಾ ಇಲ್ಲ.. ಎಂದು ಆಕ್ರೋಶ ವ್ಯಕ್ತಪಡಿಸಿದರು.ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ,..? ಎಂದು ಉಢಾಫೆ ಉತ್ತರ ನೀಡಿದರು.

ಇದರ ನಡುವೆಯೆ ರೈತನು ಮುಂದಿನ ಬಾರಿ ಹೇಗೆ ಆರಿಸಿ ಬರುತ್ತಿರಿ ನೋಡಿ ಎಂದು ಕರೆ ಮಾಡಿದರು.

ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ ಎಂದಿದ್ದು,ಅಲ್ಲಿನ ಶಾಸಕರು ಇದಾರೆ, ಅಧಿಕಾರಿಗಳು ಇದಾರೆ ಅವರಿಗೆ ಹೋಗಿ ಕೇಳು ಗದರಿಸಿದ್ದಾರೆ..ಭಾರತ ಸರ್ಕಾರದ ಮಂತ್ರಿ ಇದೆನೆ, ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ.ಏನ್ ಮಾಡಿಕೊಳ್ಳುತ್ತಿಯಾ ಮಾಡಿಕೊ ಹೋಗು ಎಂದು ಕ್ಷೇತ್ರದ ಜನರಿಗೆ ಉಡಾಫೆ ಉತ್ತರ ನೀಡಿದ್ದಾರೆ.ಉಪ ಜವಾಬ್ದಾರಿಯುತ ಸಚಿವರಾಗಿ ಈ ರೀತಿ ಮಾತನಾಡಿರುವುದು ಖಂಡನೀಯ ಎಂದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *