ಆದಿಮ ಚಿತ್ರಕಲೆಯನ್ನು ಸಂರಕ್ಷಿಸುವ ಕಾರ್ಯ ನಡೆಯಬೇಕಿದೆ : ಕೆ.ವಿ.ಸುಬ್ರಹ್ಮಣ್ಯಂ

ಧಾರವಾಡ:ಧಾರವಾಡದ ವಿಕಾಸ ನಗರದಲ್ಲಿರುವ ಶ್ರೀ ಎಮ್. ಆರ್.ಬಾಳೀಕಾಯಿ ಕಲಾ ಗ್ಯಾಲರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಬಸವರಾಜ ಎಸ್.ಕಲೆಗಾರ ಅವರ ಯಾದಗಿರಿ ಜಿಲ್ಲೆಯ ಆದಿಮ ಚಿತ್ರಕಲೆ,ಡಾ.ವೈಶಾಲಿಬಾಯಿ ಕಾಂಬಳೆ ಅವರ ಬೀದರ ಪರಿಸರದ ದೃಶ್ಯಕಲೆ ಎಂಬ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ವಿಶೇಷಾಧಿಕಾರಿಗಳಾದ ಡಾ.ಎಸ್.ಸಿ. ಪಾಟೀಲ ಅವರು ಮಾತನಾಡಿ ಕನ್ನಡ ನಾಡಿನಲ್ಲಿ ದೃಶ್ಯಕಲಾ ಸಾಹಿತ್ಯ ಚಿಗುರೊಡೆಯುತ್ತ ಸಾಗಿ ಇಂದು ಹೆಮ್ಮರವಾಗಿ ಬೆಳೆಯುತ್ತಿರುವುದು ಸಂತಸದ ವಿಷಯ, ಕಲಾವಿದರು ಸಹ ಬರೆಯಬಲ್ಲರು ಎಂಬ ಆತ್ಮ ವಿಶ್ವಾಸದ ಸಂಗತಿಗಳನ್ನು ತಿಳಿಸುತ್ತಾ,ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಆರಂಭವಾದ ಸ್ನಾತಕೋತ್ತರ ದೃಶ್ಯಕಲಾ ವಿಭಾಗದ ಈ ಇಬ್ಬರು ಅಧ್ಯಾಪಕರು ಕ್ರಿಯಾಶೀಲರಾಗಿ ಉತ್ತಮ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.ಇಂತಹ ಅಧ್ಯಾಪಕರನ್ನು ಹೊಂದಿದ ದೃಶ್ಯಕಲಾ ವಿಭಾಗ ನಿಜಕ್ಕೂ ಹೆಮ್ಮೆಯ ಮತ್ತು ಖುಷಿಯ ಸಂಗತಿ ಎಂದು ಸಂತಸಪಟ್ಟರು.ಅಲ್ಲದೆ ಇವರು ನನ್ನ ವಿದ್ಯಾರ್ಥಿಗಳು ಎಂದು ಹೇಳುತ್ತಾ ಮುಂದಿನ ಬೆಳವಣಿಗೆಗೆ ಶುಭವನ್ನು ಹಾರೈಸಿದರು.

ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಖ್ಯಾತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರು ಡಾ.ಬಸವರಾಜ ಎಸ್.ಕಲೆಗಾರ ಮತ್ತು ಡಾ.ವೈಶಾಲಿಬಾಯಿ ಕಾಂಬಳೆ ಅವರು ಬರೆದ ಈ ಎರಡು ಕೃತಿಗಳು ಯಾದಗಿರಿ ಜಿಲ್ಲೆಯಲ್ಲಿ ಕಂಡು ಬರುವ ಆದಿಮ ಚಿತ್ರಕಲೆಯ ವಸ್ತು ವಿಷಯವನ್ನು ವಿಶ್ಲೇಷಣೆ ಮಾಡಿದರೆ,ಬೀದರ ಪರಿಸರ ದೃಶ್ಯಕಲೆ ಎಂಬ ಕೃತಿಯು ಬೀದರ್ ನ ರಂಗಿನ ಮಹಲ್ ನ ಚಿತ್ರಕಲೆ, ಅಸ್ಟುರಿನ ಭಿತ್ತಿಚಿತ್ರಕಲೆ, ಮುಸ್ಲಿಂ ಜನಾಂಗೀಯ ಜನಪದ ಚಿತ್ರಕಲೆಯ ಸಂಗತಿಗಳನ್ನು ತಿಳಿಸುತ್ತದೆ. ಇಂತಹ ಕೃತಿಗಳನ್ನು ರೂಪಿಸಿದ ಲೇಖಕರಿಗೆ ಅಭಿನಂದನೆಗಳನ್ನು ತಿಳಿಸಿದರು.ಆದಿ ಮಾನವನ ಗುಹೆ ಮತ್ತು ಕಲ್ಲಾಸರೆಯ ಚಿತ್ರಗಳು ಅಳಿವಿನಂಚಿನಲ್ಲಿವೆ.ಅವುಗಳನ್ನು ಸರಕಾರ ಮತ್ತು ಸ್ಥಳೀಯರು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕಿವಿ ಮಾತುಗಳು ಸಹ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಕಲಾವಿದ ಶ್ರೀ ಮಾರುತಿ ಬಿ.ಅವರು ಮಾತನಾಡಿ ಡಾ.ಬಸವರಾಜ ಎಸ್.ಕಲೆಗಾರ ಮತ್ತು ಡಾ.ವೈಶಾಲಿಬಾಯಿ ಕಾಂಬಳೆ ಅವರು ಕ್ರಿಯಾಶೀಲ ಅಧ್ಯಯನಕಾರರಾಗಿ ಇಂತಹ ಕೃತಿಗಳನ್ನು ಬರೆದು ಧಾರವಾಡ ನೆಲದಲ್ಲಿ ಬಿಡುಗಡೆ ಮಾಡುತ್ತಿರುವುದು ಅಭಿನಂದನೀಯವಾದದ್ದು ಎಂದು ಹೇಳುತ್ತಾ,ಯಾದಗಿರಿಯ ಜಿಲ್ಲೆಯ ಆದಿ ಮಾನವನ ಗುಹಾ ಚಿತ್ರಕಲೆ,ಬೀದರ ಪರಿಸರದ ದೃಶ್ಯಕಲೆಯ ಚಿಂತನೆಗಳನ್ನು ಈ ಭಾಗದ ಕಲಾ ಆಸಕ್ತರಿಗೆ ಮನ ಮುಟ್ಟುವ ಹಾಗೆ ಬಿಡುಗಡೆ ಗೊಳಿಸಿದ್ದು ಖುಷಿಯ ಸಂಗತಿ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳೀಕಾಯಿ ಅವರು ಡಾ.ಬಸವರಾಜ ಎಸ್.ಕಲೆಗಾರ,ಡಾ.ವೈಶಾಲಿಬಾಯಿ ಕಾಂಬಳೆ ಅವರು ಉತ್ತಮ ಕಲಾವಿದರು ಮತ್ತು ಕಲಾ ಲೇಖಕರು.ಚಿಕ್ಕ ವಯಸ್ಸಿನಲ್ಲೇ ಅಗಾಧವಾದ ಸೇವೆಯನ್ನು ಮಾಡುತ್ತಾ ನಡೆದಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದ ನಮ್ಮ ಸ್ನಾತಕೋತ್ತರ ದೃಶ್ಯಕಲಾ ವಿಭಾಗದಲ್ಲಿ ಕಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ,ಇಂತಹ ಅಧ್ಯಾಪಕರನ್ನು ವಿಶ್ವವಿದ್ಯಾಲಯದ ಸಂರಕ್ಷಿಸಬೇಕು,ಪ್ರೋತ್ಸಾಹ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಲೇಖಕರಾದ ಡಾ.ಬಸವರಾಜ ಎಸ್.ಕಲೆಗಾರ ಅವರು ಮಾತನಾಡಿದರು. ಕಾಶಿನಾಥ ಅವರು ನಿರೂಪಿಸಿದರು.ಡಾ.ಪದ್ಮಾವತಿ ಬಿ.ಕಲೆಗಾರ ಅವರು ಸ್ವಾಗತಿಸಿ ವಂದಿಸಿದರು.

About The Author