ಕಲ್ಯಾಣ ನಾಡು ಶರಣರು ಸಂತರು ನೆಲಸಿದ ಪುಣ್ಯಭೂಮಿ:ದರ್ಶನಾಪುರ

ಶಹಾಪುರ:ಕಲ್ಯಾಣ ಕರ್ನಾಟಕ ಐತಿಹಾಸಿಕ ಶ್ರೀಮಂತಿಕೆ ತಾಣವಾಗಿದೆ.ಕಲ್ಯಾಣ ನಾಡು ಶರಣರು ಸಂತರು ನೆಲಸಿದ ಪುಣ್ಯಭೂಮಿ ಎಂದು ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿದರು. ಭೀ,ಗುಡಿ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡು ಶ್ರೀ ಬಸವ ಸಮಾಜಸೇವಾ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರೆಯದಲ್ಲಿ ನಡೆದ ಸಂಸ್ಕೃತಿಕ ಸಂಭ್ರಮ ಜಾನಪದ ಉತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.ಸಂಘ ಸಂಸ್ಥೆಗಳು ಸಮಾಜಮುಖಿ ಸೇವೆಗಾಗಿ ಶ್ರಮಿಸಿದಲ್ಲಿ ನಾಡು ನುಡಿಗೆ ನಮ್ಮ ಸೇವೆ ಸಾರ್ಥಕವಾಗುತ್ತದೆ. ಕಲ್ಯಾಣ ಕರ್ನಾಟಕ ಐತಿಹಾಸಿಕ ತಾಣವಾಗಿದೆ ಎಂದರು.

ನಾಗನಟಗಿಯ ಪೂಜ್ಯ ಸಿದ್ರಾಮಯ್ಯಸಾಮಿಗಳು ಸಾನಿಧ್ಯ ವಹಿಸಿದ್ದರು. ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಚೆನ್ನಬಸವಣ್ಣ, ಕಸಾಪ ಅಧ್ಯಕ್ಷರಾದ ಡಾ.ರವಿಂದ್ರನಾಥ ಹೊಸಮನಿ ಮಾತನಾಡಿದರು.

ದೇವೆಂದ್ರಪ್ಪ ಮಡಿವಾಳಕರ್, ವೆಂಕಟೇಶ ಹೂಗಾರ.ಸಂಗನಗೌಡ ಮಾಲಿಪಾಟೀಲ್, ವಿಜಯಕುಮರ ಚಿಗರಿ, ಕರವೇ ಅಧ್ಯಕ್ಷರಾದ ಭೀಮಣ್ಣ ಶಖಾಪುರ. ವೆಂಕಟೇಶ ಬೋನೇರ. ಸುಭಾಶ ಹೋತಪೇಟ. ಪ್ರವೀಣ ಹೀರೆಮಠ. ಅಕ್ಷಯಜ್ಯೋತಿ ಕಲವಾವಿದರಾದ ಭವಾನಿ ಯಲ್ಲಮ್ಮ ಶೃತಿ ಜ್ಯೋತಿ. ಅವಿನಾಶ ಸಿದ್ದಾರ್ಥ ಸುಮಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿವಶಂಕರ ಪ್ರಾರ್ಥನೆ ಮಾಡಿದರು. ಮಡಿವಾಳಪ್ಪ ಪಾಟೀಲ ಸ್ವಾಗತಿಸಿದರು. ಮೌನೇಶ ಹಳಿಸಗರ ವಂದಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಮಲ್ಲಯ್ಯಸ್ವಾಮಿ ಇಟಗಿ ಬಸರಡ್ಡಿ ಪಲ್ಲಿವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಕಲಾವಿದರು ಪಾಲ್ಗೊಂಡಿದ್ದರು.

About The Author