ಶಾಸಕರಿಂದ ಕೃಷಿ ಮಾರುಕಟ್ಟೆ ಕಾಮಗಾರಿ ಪರಿಶೀಲನೆ:ರೈತರ ಹಿತಾಸಕ್ತಿಗನುಗುಣವಾಗಿ ಮಾರುಕಟ್ಟೆ ನಿರ್ಮಾಣ–ಶರಣಬಸ್ಸಪ್ಪಗೌಡ ದರ್ಶನಾಪುರ

ಶಹಾಪುರ: ನಗರದ  ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ರೈತರ ಣವಾಗಿಹಿತಾಸಕ್ತಿಗನುಗುಣವಾಗಿ ಈ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.೨೫ ಕೊಟಿ ರೂ. ವೆಚ್ಚದಲ್ಲಿ ಒಟ್ಟು ೭೯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.ಸಿ.ಸಿ.ರಸ್ತೆಗಳು, ಕಾಂಪೌಡ ನಿರ್ಮಾಣ, ಗೊಡೆ, ಮೂಲಭೂತ ಸೌಕರ್ಯಗಳನ್ನೊಳಗೊಂಡ ಕಾಮಗಾರಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.  ಸೆ. ೪ ರಂದು ಕರ್ನಾಟಕ ರಾಜ್ಯ ಸಹಕಾರಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಎಸ್ಟಿ ಸೋಮಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ೫೮ ಎಕರೆ ಜಾಗದಲ್ಲಿ  ಕಾಂಪೌಂಡ ನಿರ್ಮಾಣ  ಮಾಡಲಾಗಿದೆ.ರೈತರು ಬೆಳೆದ ಬೆಳೆ ಉತ್ತಮ ಬೆಲೆ ನೀಡಿ ಮಾರುಕಟ್ಟೆಯಲ್ಲೆ ಮಾರಾಟ ಮಾಡಲು ಅನೂಕೂಲ ಮಾಡಲಾಗುವುದು.ಮಾರುಕಟ್ಟೆಯಿಂದ ಪರವಾನಿಗೆ ಪಡೆದವರಿಗೆ ಮಾತ್ರ ಮಳಿಗೆಗಳನ್ನು ನೀಡಲಾಗುವುದು ಎಂದರು.

ಗೋಗಿ ಮತ್ತು ಸಗರ ಗ್ರಾಮಗಳಲ್ಲಿ ಕೃಷಿ ಮಾರುಕಟ್ಟೆಯ ಸ್ಥಳವಿದ್ದು,ಹಂತ ಹಂತವಾಗಿ ಅಭಿವೃದ್ದಿಪಡಿಸುವ ಕಾರ್ಯ ಮಾಡಲಾಗುತ್ತದೆ. ಕೃಷಿ ಮಾರುಕಟ್ಟೆ ಸಮಿತಿಗೆ ಲಾಭದಾಯಕ ಕಾರ್ಯಯೋಜನೆಗಳನ್ನು ರೈತರಿಗೆ ಮತ್ತು ಗ್ರಾಹಕರಿಗೆ ನೀಡಿ ಕೃಷಿ ಮಾರುಕಟ್ಟೆಯಲ್ಲೆ ವ್ಯಾಪಾರ ಮಾಡುವಂತೆ ಸೂಚನೆ ನೀಡಲಾಗುವುದು.ಯಾದಗಿರಿ ಜಿಲ್ಲೆಯಲ್ಲಿಯೆ ಮಾದರಿಯ ಕೃಷಿ ಮಾರುಕಟ್ಟೆಯಾಗಿ ಹೆಸರು ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಶೋಮಶೇಖರಗೌಡ ಅಣಬಿ, ಕಾರ್ಯದರ್ಶಿಗಳಾದ ಶಿವುಕುಮಾರ ದೇಸಾಯಿ. ಎಪಿಎಮ್ಸಿ ಎಇಇ ನೀಲಕಂಠ ಜಮದಾರ.ಮುಖಂಡರಾದ ಶರಣಗೌಡ ಗುಂಡಗುರ್ತಿ ಶಿವಶರಣಪ್ಪ ಕಲಬುರ್ಗಿ.ನಗರಸಭೆ ಮಾಜಿ ಅಧ್ಯಕ್ಷರಾದ ನಾಗಪ್ಪ ತಹಶಿಲ್ದಾರ,ಉಪಾಧ್ಯಕ್ಷರಾದ ಈರಣಗೌಡ ಸಾಹು ತಡಿಬಿಡಿ, ರುದ್ರಗೌಡ ಗುತ್ತೆದಾರರು, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಇತರರು ಇದ್ದರು.

About The Author