ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣಮಹೋತ್ಸವ ಪೂರ್ವಭಾವಿ ಸಭೆ::ಶ್ರೀಗಳು ವಹಿಸಿದ ಸೇವೆಗೆ ಸಿದ್ದ -ಶಾಸಕ ದರ್ಶನಾಪುರ

ಶಹಾಪೂರ:ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ನಗರದ ಶ್ರೀ ಚರಬಸವೇಶ್ವರ ಗದ್ದುಗೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.ಶ್ರೀಗಳ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಶ್ರೀಶೈಲ ಪೀಠದಲ್ಲಿ ಭಕ್ತಾಧಿಗಳಿಗಾಗಿ ಅಭಿವೃದ್ಧಿ ಪಡಿಸಲು ಉಪಯೋಗಿಸುತ್ತಿರುವ ಹಲವಾರು ಕಾರ್ಯಕ್ರಮ ಹಾಗೂ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಗಳು ವಹಿಸುವ ಯಾವುದೇ ಸೇವೆಯನ್ನು ಪಾಲಿಸಲು ಸಿದ್ದನಾಗಿದ್ದೆನೆಂದು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ನುಡಿದರು.

ಧರ್ಮ ಜಾಗೃತಿ ಮಾಡಲು ಪಾದಯಾತ್ರೆ, ಇಷ್ಟಾರ್ಥಸಿದ್ದಿಗಾಗಿ ಇಷ್ಟಲಿಂಗ ಪೂಜೆ ಅದರಂತೆ ಇಡೀ ದೇಶಾಧ್ಯಾಂತ ಶ್ರೀಶೈಲ ಪೀಠದ ಭಕ್ತಾಧಿಗಳಿದ್ದು ಅವರಿಂದ ಅವರ ಆಶೋತ್ತರಗಳು ಇಡೇರಲು ಮುಂದಿನ ಪೀಳಿಗೆಗೆ ಪೀಠದಲ್ಲಿ ಸುಸಜ್ಜಿತ ವ್ಯವಸ್ಥೆ ಕೈಗೊಳ್ಳಲು ಶ್ರೀಪೀಠದ ಭಕ್ತಾಧಿಗಳ ಮೇರೆಗೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ.ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವಗಳು ಸೇವೆಯಿಂದ ಸಂಗ್ರಹಗೊAಡ ಸರ್ವವನ್ನು ಶ್ರೀಪೀಠದಲ್ಲಿನ ಅಭಿವೃದ್ಧಿಗಾಗಿ ವ್ಯಯ ಮಾಡಲಾಗುವುದು ಎಂದು ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಅಕ್ಟೋಬರ್ ೨೯ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರದಿಂದ ಶ್ರೀಶೈಲದವರೆಗೆ ಜಗದ್ಗುರುಗಳೊಂದಿಗೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಸುಮಾರು ೫೬೫ಕಿ.ಮಿ ಪಾದಯಾತ್ರೆ, ಮಾರ್ಗಮಧ್ಯದಲ್ಲಿ ಬರುವ ಗ್ರಾಮಗಳಲ್ಲಿ ಧರ್ಮಜಾಗೃತಿ,ಲಿಂಗದೀಕ್ಷೆ,ದುಶ್ಚಟಗಳ ಭಿಕ್ಷೆ ಹಾಗೂ ಮಾರ್ಗದ ಮಧ್ಯ ಎರಡೂ ಬದಿಗಳಲ್ಲಿ ಸುಮಾರು ೨.೫೦ಲಕ್ಷ ವೃಕ್ಷಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೨೦೨೩ ಜನೇವರಿ ೧೦ರಿಂದ ೧೪ನೇ ಜನೇವರಿವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಅಖಿಲ ಭಾರತ ವೀರಶೈವ ಮಹಾಸಭೆ ಮಹಾಧಿವೇಶನ,ರಾಷ್ಟಿçÃಯ ವೇದಾಂತ ಸಮ್ಮೇಳನ,ರಾಷ್ಟಿçÃಯ ವಚನ ಸಮ್ಮೇಳನ,ರಾಷ್ಟಿçಯ ವೀರಶೈವಾಗಮ ಸಮಾವೇಶ ಮತ್ತು ತೆಲುಗು ಕನ್ನಡ ಮರಾಠಿ ವೀರಶೈವ ಸಾಹಿತ್ಯಗೋಷ್ಠಿ,ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಭಕ್ತಾಧಿಗಳು ಧಾರ್ಮಿಕ ಸೇವಾ ಅಡಿಯಲ್ಲಿ ತುಲಾಭಾರ ಸೇವೆ,ಅನ್ನದಾನ ಸೇವೆ,ಇಷ್ಟಲಿಂಗ ಮಹಾಪೂಜಾ ಸೇವೆ,ರುದ್ರ ಹೋಮ ಸೇವೆ,ವಿಶೇಷ ದಾಸೋಹ ಸೇವೆ ಶ್ರೀಪೀಠದಲ್ಲಿ ಯಾತ್ರಿ ನಿವಾಸದಲ್ಲಿ ಒಂದು ಕೋಣೆಯ ಕಟ್ಟಿಸುವ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತ ಭಕ್ತಾಧಿಗಳು ಸೇವೆಯಲ್ಲಿ ಭಾಗವಹಿಸಬೇಕೆಂದು ನಗರದ ಕುಂಬಾರ ಓಣಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಾಗಣಗೇರಿ ಡಾ.ವಿಶ್ವರಾಧ್ಯ ಶಿವಾಚಾರ್ಯರು, ಕನ್ಯೆಕೊಳುರು ಚೆನ್ನವೀರ ಶಿವಾಚಾರ್ಯರು, ನಗರದ ಗುಮಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು,ಕೆಂಭಾವಿ ಚನ್ನಬಸವ ಶಿವಾಚಾರ್ಯರು, ಮದ್ರಕಿ ಶಿವಾಚಾರ್ಯರು, ಚಟ್ನಳ್ಳಿ ಶ್ರೀಗಳು, ಗದ್ದುಗೆಯ ಬಸವಯ್ಯ ಶರಣರು,ಶರಣು ಗದ್ದುಗೆ ಸೇರಿದಂತೆ ನೂರಾರು ಭಕ್ತಾಧಿಗಳು,ಮುಖಂಡರು, ಯುವಕರು ಭಾಗವಹಿಸಿದ್ದರು.

About The Author