ಸಗರ ಬಸಣ್ಣ ಮಾಸ್ಟರ್ ದೇಸಾಯಿ ಇನ್ನಿಲ್ಲ

ಶಹಾಪುರ : ತಾಲ್ಲೂಕಿನ ಸಗರ ಗ್ರಾಮದ ನಿವೃತ್ತ ಶಿಕ್ಷಕರು ಹಾಗೂ ವೀರಶೈವ ಲಿಂಗಾಯಿತ ಸಮಾಜದ ಹಿರಿಯ ಮುಖಂಡರಾದ ಬಸಣ್ಣ (ಮಾಸ್ಟರ್) ದೇಸಾಯಿ (90) ಅವರು ವಯೋ ಸಹಜ ಅನಾರೋಗ್ಯದಿಂದ ಶನಿವಾರ ಸಾಯಂಕಾಲ ನಿಧನರಾದರು.

ಇವರಿಗೆ ಪತ್ನಿ,ಪುತ್ರಿ,ಹಾಗೂ ನಾಲ್ಕು ಜನ ಪುತ್ರರ ಜೊತೆಗೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ನಾಳೆ ಮಧ್ಯಾಹ್ನ ಮೂರು ಗಂಟೆಗೆ ಸ್ವಂತ (ದೇಸಾಯಿಯವರ)ತೋಟದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ – ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ,ಮಾಜಿ ಶಾಸಕರಾದ ಗುರುಪಾಟೀಲ್ ಶಿರವಾಳ,ಶಹಾಪುರದ ಹಿರಿಯರಾದ ಚಂದ್ರಶೇಖರ ಸಾಹು ಆರಬೋಳ,ಗ್ರಾಮದ ಹಿರಿಯ ಮುಖಂಡರಾದ ಬಸನಗೌಡ ಮಾಲಿಪಾಟೀಲ್, ಡಾ:ಚಂದ್ರಶೇಖರ್ ಸುಬೇದಾರ,ವೀರಶೈವ ಸಮಾಜದ ಯುವ ಮುಖಂಡರಾದ ಶಿವರಾಜ ದೇಶಮುಖ್, ಸಾಹಿತಿಗಳಾದ ಲಿಂಗಣ್ಣ ಪಡಶೆಟ್ಟಿ,ಸಿದ್ಧರಾಮ ಹೊನಕಲ್,ಬಸವರಾಜ ಸಿನ್ನೂರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *