ಜೂನ್ 06,ಶರಣು ಬಿ ತಳ್ಳಿಕೇರಿ ಯವರ ಜನ್ಮದಿನ.ಸಮುದಾಯದ ಮನಗೆದ್ದ ಜನನಾಯಕ

ಬಸವರಾಜ ಕರೇಗಾರ
basavarajkaregar@gmail.com

ಜೂನ್ 6ರಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆ ದಾರರ ಮಹಾಮಂಡಳಿ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ ಅವರ ಜನ್ಮದಿನ.ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಬೆಳೆದು ಬಂದ ಶರಣು ತಳ್ಳಿಕೇರಿ ಯವರು ಬಹುದೊಡ್ಡ ಸಾಧನೆಯ ಪರ್ವವಿದೆ ಅವರ ಹಿಂದೆ. ಚಿಕ್ಕವಯಸ್ಸಿನಲ್ಲಿಯೇ ಜನಪ್ರತಿನಿಧಿಯಾಗಿ ಸಾಧಿಸದ ಕೆಲಸವನ್ನು ಸಾಮಾನ್ಯ ಕಾರ್ಯಕರ್ತನಾಗಿ ಸಾಧಿಸಿದ್ದಾರೆ.ಸರಕಾರ ಕೊಟ್ಟ ಕುರಿ ನಿಗಮದಲ್ಲಿ ಅವರ ಸಾಧನೆ ಬಹು ದೊಡ್ಡದಾಗಿದೆ.ಸಹಾಯ-ಸಹಕಾರ ಎಂದು ಕೇಳಿಕೊಂಡು ಬಂದ ಸಾರ್ವಜನಿಕರಿಗೆ ತಮಗಾದ ಸಹಾಯ ಮತ್ತು ಸರಕಾರದಿಂದ ಸೌಲಭ್ಯಗಳನ್ನು ಕೊಡಿಸಿ ಕೊಟ್ಟು ಸಾರ್ವಜನಿಕರ ಮನಗೆದ್ದಿದ್ದಾರೆ.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲವೇ ದಿನಗಳಲ್ಲಿ ಇವರು ಕೈಗೊಂಡ ಕ್ರಮಗಳು ಅತ್ಯಂತ ಮಹತ್ವದ್ದಾಗಿದ್ದು.

“ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು
ತಮ್ಮ ಜನ್ಮದಿನದಂದು ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಆಶೀರ್ವಾದ ಪಡೆದರು”

ಸದಾ ಹಸನ್ಮುಖಿ ಸರದಾರನಾದ ಇವರು, ಕುರಿ ನಿಗಮದ ಅಧ್ಯಕ್ಷರಾಗಿ ಒಂದುವರೆ ವರ್ಷದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.ಅಧ್ಯಕ್ಷ ಸ್ಥಾನ ಅಧಿಕಾರಕ್ಕಲ್ಲ ಅದು ಜನರು ಕೊಟ್ಟಿರುವ ವರದಾನವಾಗಿದೆ ಎಂದು ಹೇಳುವ ಶರಣು ಬಿ ತಳ್ಕಿಕೇರಿಯವರ ಸಾಧನೆಯ

ಸಂಕ್ಷಿಪ್ತ ನೋಟ

(ರೈತನಾಯಕರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಇಲ್ಲಿಯವರೆಗಿನ ಚಟುವಟಿಕೆಗಳ ಕೈಪಿಡಿ ನೀಡಿ ಮಾರ್ಗದರ್ಶನ ಪಡೆದ ಕುರಿ ನಿಗಮದ ಅಧ್ಯಕ್ಷರು).

 

(ಶರಣು ಬಿ ತಳ್ಳಿಕೇರಿ ಯವರ ಅಧ್ಯಕ್ಷತೆಯಲ್ಲಿ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲಾಯಿತು.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ ಪಿ ಶ್ರೀನಿವಾಸು ಸೇರಿದಂತೆ ಎಲ್ಲಾ ಜಿಲ್ಲೆಗಳ ಅನುಷ್ಟಾನುಧಿಕಾರಿಗಳು ಪಾಲ್ಗೊಂಡಿದ್ದರು.ವಿಶೇಷವಾಗಿ ನಿಗಮದಿಂದ (ಡಿಬಿಟಿ)ಕೊಡುವ ಆಕಸ್ಮಿಕ ಕುರಿ ಮತ್ತು ಮೇಕೆಗಳ ಸಾವಿಗೆ ಪರಿಹಾರ ಧನ ಅನುಗ್ರಹ ಯೋಜನೆ ಮತ್ತು ರಾಜ್ಯದ 56 ಸಾವಿರ ಕುರಿಗಾರರಿಗೆ ಉಚಿತ ವಿಮಾ ಸೌಲಭ್ಯದ ಯೋಜನೆಯ ಶೀಘ್ರ ಅನುಸ್ಥಾನದ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು)

(ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಡಾನ್ ಯೋಜನೆಯಲ್ಲಿ ನೂತನವಾಗಿ ಕೊಪ್ಪಳದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳ ತಂಡದ ಜೊತೆಗೆ ಮಾನ್ಯ ಸಂಸದರಾದ ಕರಡಿ ಸಂಗಣ್ಣರವರು ಮತ್ತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಜೊತೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆಯಲ್ಲಿ ಪಾಲ್ಗೊಂಡ ಕುರಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ ನಡೆಸಿದರು).

” ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಬಜೆಟ್ ನಲ್ಲಿ ಘೋಷಿಸಿದ್ದ ಕುರಿ ಮತ್ತು ಮೇಕೆಗಳ ಆಕಸ್ಮಿಕ ಮರಣಕ್ಕೆ ಪರಿಹಾರ ಧನ “ಅನುಗ್ರಹ” ಯೋಜನೆ ಮುಂದುವರೆಸಿದ್ದಕ್ಕೆ ಕೊಪ್ಪಳ -ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಹಾಲಪ್ಪ ಆಚಾರರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಕಂಬಳಿ ಹೊದಿಸಿ ,ಪುಸ್ತಕ ನೀಡಿ ನಾಡಿನ ಸಮಸ್ತ ಕುರಿಗಾಹಿಗಳ ಪರವಾಗಿ ಸನ್ಮಾನಿಸಿದೆ. ಕೊಪ್ಪಳದ ಸಂಸದರಾದ ಕರಡಿ ಸಂಗಣ್ಣ, ಶರಣು ಬಿ ತಳ್ಳಿಕೇರಿ, ಶಾಸಕರಾದ ಪರಣ್ಣ ಮನವಳ್ಳಿಯವರು, ಬಸವರಾಜ ದಡೆಸುಗೂರ ಉಪಸ್ಥಿತರಿದ್ದರು.”

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಕ್ಷಣವೇ ಸರಕಾರ ರದ್ದು ಮಾಡಿದ ಸತ್ಯ ಕುರಿಗಳಿಗೆ 5000 ಪರಿಹಾರ ಧನವನ್ನು ಮತ್ತೆ ಜಾರಿಗೆ ಬರುವ ಅನುಗ್ರಹ ಯೋಜನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಹಠಹಿಡಿದು ಜಾರಿಗೆ ತಂದರು. ಎರಡೂವರೆ ವರ್ಷದ ಒಳಗಿನ ಕುರಿ ಸತ್ತರೆ 3500 ರೂಪಾಯಿಗಳನ್ನು ಹೆಚ್ಚಿಗೆ ಮಾಡಿಸಿದರು.

ರಾಜ್ಯಾದ್ಯಂತ ಸಂಚಲನ ಮಾಡಿ ಪ್ರತಿ ಜಿಲ್ಲೆಯಲ್ಲಿ ಕುರಿಗಾರರ ಸಮಸ್ಯೆಗಳನ್ನು ಆಲಿಸಿದರು.2022-23 ರ ಆರ್ಥಿಕ ಬಜೆಟ್ ನಲ್ಲಿ ಕುರಿಗಾರರಿಗೆ ಅನುಕೂಲವಾಗಲೆಂದು ಜೀವ ವಿಮಾ ಎನ್ನುವ ಮಹತ್ವದ ಯೋಜನೆಯನ್ನು ಜಾರಿಗೆ ತಂದರು. ಸ್ಥಳೀಯ ಮತ್ತು ವಲಸೆ ಕುರಿಗಾರರ ಸಮಸ್ಯೆಯನ್ನು ಆಲಿಸಿದ ಅವರು ಪ್ರಕೃತಿ ವಿಕೋಪ ಸಿಡಿಲು ಮತ್ತು ರಸ್ತೆ ಅಪಘಾತಕ್ಕೀಡಾದ ಕುರಿಗಾರರಿಗೆ rs.500000 ವಿಮೆ ಅನುಕೂಲವಾಗಲಿದ್ದು,ಅವರ ಕುಟುಂಬದ ನಿರ್ವಹಣೆಯಾಗಲಿದೆ.

( ಕೊಪ್ಪಳದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿಗಾಹಿ ಬಂಧುಗಳಿಗೆ ನಾರಿ ಸುವರ್ಣ ಟಗರು,ಟೆಂಟ್ ಮತ್ತು ಕಿಟ್ ಹಾಗೂ ಜಂತುನಾಶಕ ಔಷಧಿಗಳನ್ನು ವಿತರಿಸಿತ್ತಿರುವುದು )

 

ರಾಜ್ಯದಲ್ಲಿ ಕುರಿಗಾರರಿಗೆ ವೈಜ್ಞಾನಿಕ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿದರು.

 

( ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಕುರಿಗಾರರಿಗೆ ವೈಜ್ಞಾನಿಕ ತರಬೇತಿ ಕಾರ್ಯಕ್ರಮಗಳಲ್ಲಿ ಶರಣು ಬಿ ತಳ್ಳಿಕೇರಿ ಪಾಲ್ಗೊಂಡು,ಪ್ರಗತಿ ಪರಿಶೀಲನಾ ಸಭೆ ನಡೆಸಿದರು)

(ಶರಣು ಬಿ ತಳ್ಳಿಕೇರಿಯವರು ಗದಗ ಜಿಲ್ಲೆಯಲ್ಲಿ ನಡೆದ ಕುರಿಗಾರರಿಗೆ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿ ಪಾಲ್ಗೊಂಡು ,ಅಡವಿಸೋಮಾಪುರದಲ್ಲಿ ಕುರಿಗಾರರಿಗೆ ಜಂತುನಾಶಕ ಔಷಧಿ ವಿತರಿಸಿದರು.ನಿಗಮದ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ ನಾಯ್ಕರ್ ,ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುಧೀರ್ ಕಾಟೀಗೇರ್,ಮಂಜುನಾಥ್ ಜಡಿ ,ವಿವಿಧ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು)

(ಶರಣು ಬಿ ತಳ್ಳಿಕೇರಿಯವರು ಹೊಸಪೇಟೆಯಲ್ಲಿ ನಡೆದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕುರಿಗಾರರಿಗೆ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಿಗಮ ಮತ್ತು ಇಲಾಖೆಯ ಅಧಿಕಾರಿಗಳಾದ ಡಾ ಬಸಯ್ಯ ಸಾಲಿ,ಡಾ ಬೆಣ್ಣಿ, ಡಾ ಅಶೋಕ್ ಸೇರಿದಂತೆ ವಿವಿಧ ಸಂಘಗಳ ಪ್ರತಿನಿಧಿಗಳು, ಕುರಿಗಾರರು ಪಾಲ್ಗೊಂಡಿದ್ದರು )

(ಶರಣು ಬಿ ತಳ್ಳಿಕೇರಿಯವರು ರಾಯಚೂರಿನಲ್ಲಿ ನಡೆದ ಕುರಿಗಾರರಿಗೆ ವೈಜ್ಞಾನಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.ಉಪನಿರ್ದೇಶಕರಾದ ಡಾ ಎಸ್ ಎಸ್ ಪಾಟೀಲ್, ಡಾ ಪ್ರಲ್ಹಾದ, ಡಾ ಅಶೋಕ್, ಡಾ ಶ್ರೀನಿವಾಸಮೂರ್ತಿ,ಹಟ್ಟಿ ಚಿನ್ನದ ಗಣಿ ನಿರ್ದೇಶಕ ಶ್ರೀನಿವಾಸ್ ದೇಸಾಯಿ ಉಪಸ್ಥಿತರಿದ್ದರು )

(ಶರಣು ಬಿ ತಳ್ಳಿಕೇರಿಯವರು ಬೀದರನಲ್ಲಿ ಕುರಿಗಾರರಿಗೆ ವೈಜ್ಞಾನಿಕ ತರಬೇತಿಯನ್ನು ಉದ್ಗಾಟಿಸಿ ಮಾತನಾಡಿದರು.ಉಪನಿರ್ದೇಶಕರಾದ ಡಾ ಮಲ್ಲಿಕಾರ್ಜುನ ,ಡಾ ಸೋಮಶೇಖರ್,ಡಾ ಗೌತಮ್,ಡಾ ರವಿ ಸೇರಿದಂತೆ ಜಿಲ್ಲೆಯ ನೋಂದಾಯಿತ ಸಂಘಗಳ ಪ್ರತಿನಿಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು )

(ಶರಣು ಬಿ ತಳ್ಳಿಕೇರಿಯವರು ಕಲಬುರಗಿಯಲ್ಲಿ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಡಾ ಪುರೋಹಿತ್, ಡಾ ಜಂಬಲದಿನ್ನಿ, ಡಾ ಬಸೆಟ್ಟೇಪ್ಪ ಪಾಟೀಲ್,ಡಾ ಟಕ್ಕಳಕಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಗಳ ಪ್ರತಿನಿಧಿಗಳು, ಕುರಿಗಾರರು ಪಾಲ್ಗೊಂಡಿದ್ದರು.)

ಅತಿವೃಷ್ಟಿ ಅನಾವೃಷ್ಟಿ ಮತ್ತು ಕೊರೋನಾದ ಸಂಕಷ್ಟದ ಸಮಯದಲ್ಲಿ ಕುರಿಗಾರರಿಗೆ ನೆರವು ನೀಡಿದರು. ಅನುಗ್ರಹ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವಂತಹ ಮಹತ್ವದ ನಿರ್ಧಾರ ಕೈಗೊಂಡರು. ನಾಲ್ಕು ನೂರು ಕೋಟಿ ಅನುಗ್ರಹ ಹಣವನ್ನು ಒಂದೇ ಬಾರಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿದರು.

( ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಕಾಮಾಂಧರಿಂದ ಹತ್ಯೆಯಾದ ಲಕ್ಷ್ಮಿ ವಿಠ್ಠಲಕಳ್ಳಿಮನಿ ಸ್ವಗ್ರಾಮ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ವನ್ನೂರು ಗ್ರಾಮದ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ,ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ವಿಜಯೇಂದ್ರರವರಿಂದ 1ಲಕ್ಷ ರೂಪಾಯಿ ಚೆಕ್,ನಮ್ಮ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳ ವರ್ಗದಿಂದ 65 ಸಾವಿರ ರೂಪಾಯಿ ಚೆಕ್ ಹಾಗೂ ವೈಯಕ್ತಿಕವಾಗಿ ಶರಣು ಬಿ ತಳ್ಳಿಕೇರಿ ಯವರು 50 ಸಾವಿರ ರೂಪಾಯಿ ಚೆಕ್ ನೀಡಿದೆ)

ಕೆಲವು ಕಾಮಾಂಧರಿಂದ ಹತ್ಯೆಗೆ ಒಳಗಾದ ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಲಕ್ಷ್ಮಿ ರವರಿಗೆ ವೈಯಕ್ತಿಕವಾಗಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಹಾಗೂ ಸರಕಾರದ ಕಡೆಯಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಕುಟುಂಬಕ್ಕೆ ನೀಡಿ ನೆರವಾದರು. ಸರಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಧನವನ್ನು ಕೊಡಿಸಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಾನುವಾರಗಳ ಆರೋಗ್ಯ ಸೇವೆಗಾಗಿ 70 ಸಂಚಾರಿ ಪಶು ಚಿಕಿತ್ಸಾಲಯ ವಾಹನಗಳನ್ನು ಬಿಡುಗಡೆ ಮಾಡಿಸಿದರು

 (ಶರಣು ಬಿ ತಳ್ಳಿಕೇರಿಯವರು ಕುಂದಗೊಳದ ಯರಗುಪ್ಪಿಯಲ್ಲಿ ಕಾಮಾಂಧರಿಂದ ಹತ್ಯೆಗೊಳಗಾದ ಕುರಿಗಾಯಿ ಸಹೋದರಿ ಲಕ್ಷ್ಮಿ ವಿಠ್ಠಲ್ ಕಳ್ಳಿಮನಿ ಕುಟುಂಬಕ್ಕೆ ಮತ್ತೆ 10 ಲಕ್ಷ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿಯವರು)

(ಶರಣು ಬಿ ತಳ್ಳಿಕೇರಿಯವರು ಸಿಡಿಲಿನ ಬಡಿತಕ್ಕೆ 153 ಕುರಿ ಮತ್ತು ಮೇಕೆಗಳು ಬಲಿಯಾದ
ಚಿತ್ರದುರ್ಗ ತಾಲೂಕಿನ ಮೊಳಕಾಲ್ಮುರು ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದ ಬೈಯಣ್ಣನವರ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿ ,ಸಾವನ್ನಪ್ಪಿದ ಎಲ್ಲಾ 153 ಕುರಿ ಮತ್ತು ಮೇಕೆ ಮರಣೋತ್ತರ ವರದಿಯನ್ನು ತಹಶೀಲ್ದಾರರಾದ ಸುರೇಶ್ ರವರಿಗೆ ಹಸ್ತಾಂತರ ಮಾಡಲಾಯಿತು.ಮಹಾಮಂಡಳ ನಿರ್ದೇಶಕರಾದ ಮೀಸೆ ಮಹಲಿಂಗಪ್ಪ, ಮಂಡಲ ಅಧ್ಯಕ್ಷರಾದ ಡಾ ಮಂಜುನಾಥ ಪಿ ಎಂ , ಪ.ಪಂ ಅಧ್ಯಕ್ಷರಾದ ಲಕ್ಷ್ಮಣ ಪಿ , ನಿಕಟಪೂರ್ವ ಯುವ ಮೋರ್ಚ ರಾಜ್ಯ ಕಾರ್ಯದರ್ಶಿ ಮಂಜುನಾಥ , ಜಿಲ್ಲಾ ಕಾ.ಕಾ ಸದಸ್ಯರಾದ ಮಂಜುನಾಥ ಟಿ ಎಂ , ನಗರ ಘಟಕ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್ , ತುಮಕೂರ್ಲಹಳ್ಳಿ ಮುಖಂಡರಾದ ಮಂಜಣ್ಣ , ತಿಪ್ಪೇಸ್ವಾಮಿ,ನಿಗಮದ ಅಧಿಕಾರಿಗಳಾದ ಡಾ ತಿಪ್ಪೇಸ್ವಾಮಿ, ಡಾ ರಂಗಪ್ಪ ಮುಂತಾದವರು ಉಪಸ್ಥಿತರಿದ್ದರು)

(ಸಿಡಲಿಗೆ ಬಲಿಯಾದ ಚಿತದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವಿರೆಡ್ಡಿಹಳ್ಳಿ ಗ್ರಾಮದ ಕುರಿಗಾಹಿ ಯಶ್ವಂತ್(19) ಮನೆಗೆ ಭೇಟಿಯಾಗಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶರಣು ತಳ್ಳಿಕೇರಿ.ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮರೆಡ್ಡಿ,ಮೀಸೆ ಮಹಾಲಿಂಗಪ್ಪ,ಸ್ನೇಹಿತ ಮಂಜು ಚಳ್ಳಕೆರೆ ,ನಿಗಮದ ಅಧಿಕಾರಿಗಳಾದ ಡಾ ತಿಪ್ಪೇಸ್ವಾಮಿ,ಡಾ ರೇವಣ್ಣ,ಡಾ ರಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು)

(ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಾಡಿನ ಜಾನುವಾರುಗಳ ಆರೋಗ್ಯ ಸೇವೆಗಾಗಿ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ವಿಧಾನಸೌಧದ ಮುಂಭಾಗದಲ್ಲಿ ನಾಡಿನ ಜಾನುವಾರುಗಳ ಆರೋಗ್ಯ ಸೇವೆಗಾಗಿ 70 ಸಂಚಾರಿ ಪಶು ಚಿಕಿತ್ಸಾಲಯ (ಆಂಬ್ಯುಲೆನ್ಸ್ )ಗಳನ್ನು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಪಶುಸಂಗೋಪನಾ ಸಚಿವರಾದ ಪರುಷೋತ್ತಮ್ ರೂಪಾಲಾ, ರಾಜ್ಯ ಪಶು ಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ,ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ,ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ,ರಮೇಶ್ ಗೌಡರು  ಶರಣು ಬಿ ತಳ್ಳಿಕೇರಿ ಲೋಕಾರ್ಪಣೆ ಮಾಡಿದರು.ನಿಗಮದ ಕಾರ್ಯಚಟುವಟಿಕೆಗಳ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು.)

(ಹುನಗುಂದ ತಾಲೂಕಿನ ಅಮಿನಗಡ್ ದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗವನ್ನು ಉದ್ಘಾಟಿಸಿ ಮಾತನಾಡಿದ ಕುರಿ ನಿಗಮದ ಅಧ್ಯಕ್ಷರು. ಪೂಜ್ಯ ಮಾಳಿಂಗರಾಯರು ಸಾನಿಧ್ಯ ವಹಿಸಿದ್ದರು,ಅಧ್ಯಕ್ಷತೆಯನ್ನು ಜಗಧೀಶ ಬಿಸಲದಿನ್ನಿ, ಶ್ರೀಶೈಲ ತತ್ರಾಣಿ, ಮುತ್ತು ರಾಥೋಡ್,ರಾಚಪ್ಪ ಸರಡಗಿ,ಪ ಪಂ ಸದಸ್ಯರಾದ ರಮೇಶ್,ಸಂಜಯ್,ಸಂತೋಷ್, ಬಾಬು ಚಬ್ಬಿ,ನಾಗೇಶ್ ಗಂಜಿಹಾಳ,ಯಮನೂರ್ ಕತ್ತಿ ,ಚಂದ್ರು ತಳ್ಳಿಕೇರಿ ಉಪಸ್ಥಿತರಿದ್ದರು)

ಪ್ರಸ್ತುತ ಮಹಾ ಮಂಡಳಿ ಅಧ್ಯಕ್ಷರಾದ ಅಧಿಕಾರವಹಿಸಿಕೊಂಡ ಶರಣು ಬಿ ತಳ್ಳಿಕೇರಿ ಅವರು ಮುಂದೆ ದೊಡ್ಡ ಸವಾಲುಗಳಿಂದ ವಿಶೇಷವಾಗಿ ಕುರಿ ಸಂಘದವರಿಗೆ ಮತ್ತು ಕುರಿಗಾರರಿಗೆ ಎನ್ಸಿಡಿಸಿಯಂತಹ ಮಹತ್ವದ ಯೋಜನೆಯನ್ನು ಜಾರಿಗೆ ತರಬೇಕು ಅದು ಕುರಿಗಾರರ ಕನಸಾಗಿದೆ.ಮುಂದಿನ ದಿನಗಳಲ್ಲಿ ಶರಣು ಬಿ ತಳ್ಳಿಕೇರಿ ಯವರು ವಿಧಾನಸೌಧದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗಬೇಕು ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

 

About The Author