ಕುರಿಗಾರರಿಗೆ ವಿಮೆ ಯೋಜನಾ ಜಾಗೃತ ಶಿಬಿರ:ಪಶು ವೈದ್ಯಕೀಯ ಪ್ರವೇಶಕ್ಕೆ ಕುರಿಗಾರರ ಮಕ್ಕಳಿಗೆ ಮೀಸಲಾತಿ ಕೊಡಿ:ಶಾಂತಗೌಡ ನಾಗನಟಗಿ

ಕುರಿಗಾರರಿಗೆ ವಿಮೆ ಯೋಜನಾ ಜಾಗೃತ ಶಿಬಿರ:ಪಶು ವೈದ್ಯಕೀಯ ಪ್ರವೇಶಕ್ಕೆ ಕುರಿಗಾರರ ಮಕ್ಕಳಿಗೆ ಮೀಸಲಾತಿ ಕೊಡಿ:ಶಾಂತಗೌಡ ನಾಗನಟಗಿ

ಶಹಾಪೂರ: ದೇಶಾದ್ಯಂತ ಮತ್ತು ರಾಜ್ಯದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕುರಿ ಮತ್ತು ಮೇಕೆ ಮಾಂಸ ಹೊರದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ರಾಜ್ಯ ಸರಕಾರ ಕುರಿಗಾರರ ಮಕ್ಕಳಿಗೆ ಶೈಕ್ಷಣಿಕವಾಗಿ ಅನುಕೂಲಕ್ಕಾಗಿ ಪಶು ವೈದ್ಯಕೀಯ ಪ್ರವೇಶಕ್ಕೆ ಮೀಸಲಾತಿ ಒದಗಿಸಬೇಕೆಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆ ದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಿಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಕುರಿಗಾರರು ಸರ್ಕಾರ ನೀಡಿದ ಜೀವ ವಿಮಾ ಯೋಜನೆಯನ್ನು ಮಾಡಿಸಿಕೊಳ್ಳಿ. ಇದರಿಂದ ಪ್ರಕೃತಿ ವಿಕೋಪ ರಸ್ತೆ ಅಪಘಾತದಲ್ಲಿ ಹಲವಾರು ಕುರಿಗಾರರು ಮತ್ತು ಕುರಿಗಾಯಿಗಳು ಜೀವ ತೆತ್ತಿದ್ದಾರೆ. ಅವರಿಗೆ ಅನುಕೂಲವಾಗಲೆಂದು ರಾಜ್ಯ ಸರಕಾರ ಜೀವ ವಿಮಾ ಎನ್ನುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

“ಡಾ.ಚನ್ನಪ್ಪಗೌಡ ಬಿರಾದಾರ ಉಪನ್ಯಾಸ ನೀಡಿದರು.”

ಕಾರ್ಯಕ್ರಮದ ತರಬೇತಿ ಶಿಬಿರದ ಉಪನ್ಯಾಸಕರಾದ ಡಾ.ಚೆನ್ನಪ್ಪಗೌಡ ಬಿರಾದರ ಮಾತನಾಡುತ್ತಾ,ಸರಕಾರಿ ಭೂಮಿ ಇಲ್ಲವೆಂದು, ಕುರಿಗಾರರು ಮೂಲ ಕುರಿಕಾಯುವ ವೃತ್ತಿ ಬದಲಿಸಬೇಡಿ.ಕುರಿ ಮತ್ತು ಮೇಕೆ ಸಾಕಾಣಿಕೆಯು ವೈಜ್ಞಾನಿಕವಾಗಿ ಬೆಳೆಯುತ್ತಿದ್ದು,ಕುರಿ ಮಾಂಸಕ್ಕೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ.ಕುರಿ ಕಾಯುವವರು ಎಂದು ಸಾಲ ಮಾಡಿಲ್ಲ. ಪ್ರಕೃತಿ ವಿಕೋಪದಿಂದ ಕುರಿಗಾರರಿಗೆ ಕಷ್ಟವಾಗಿದೆ. ಕುರಿ ಸಾಕಾಣಿಕೆಯ ಜೊತೆಗೆ ಮಕ್ಕಳಿಗೆ ಜ್ಞಾನವನ್ನು ಕೊಡಿಸಿ ಎಂದು ತಿಳಿಸಿದರು. ಕುರಿಗಳು ಸಭಲವಾದಾಗ ಮಾರಾಟ ಮಾಡಿ. ಇದರಿಂದ ಹೆಚ್ಚು ಲಾಭ ಕುರಿಗಾರರಿಗೆ ಆಗುತ್ತದೆ.ರೈತರ ಮಕ್ಕಳು ರೈತರ ಆಗಬೇಕು. ಇಲ್ಲದಿದ್ದರೇ ಮುಂದೊಂದು ದಿನ ರೈತರು ಮತ್ತು ಕುರಿಗಾರರ ಸಂತತಿಗಳು ನಶಿಸಿ ಹೋಗಬಹುದು ಎನ್ನುವ ಆತಂಕ ವ್ಯಕ್ತಪಡಿಸಿದರು.

“ಯಾದಗಿರಿ ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಾಯಕ ನಿರ್ದೇಶಕರಾದ ಡಾ.ಷಣ್ಮುಖಪ್ಫ ಗೊಂಗಡಿ ಮಾತನಾಡುತ್ತಿರುವುದು”

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಾದಗಿರಿ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾದ ಷಣ್ಮುಖಪ್ಪ ಗೊಂಗಡಿ ಮಾತನಾಡುತ್ತಾ, ಪ್ರಕೃತಿ ವಿಕೋಪ, ರಸ್ತೆ ಅಪಘಾತದಲ್ಲಿ ಮೃತ ಕುರಿಗಾರರ ಕುಟುಂಬಗಳಿಗೆ ಸಹಕಾರಿಯಾಗಲೆಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಐದು ಲಕ್ಷ ಜೀವ ವಿಮೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಅದನ್ನು ಕುರಿಗಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.2022-23 ನೇ ಸಾಲಿನಲ್ಲಿ ಕುರಿಗಾರರು ಕುಟುಂಬಸಹಿತ 18 ರಿಂದರಿಂದ 70 ವರ್ಷದೊಳಗಿನ ಕುರಿಗಾಯಿಗಳಿಗೆ 30 ರಿಂದರಿಂದ 40 ಕುರಿ ಅಥವಾ ಮೇಕೆಗಳು ಹೊಂದಿದವರು,ಜೂನ್ 15 ರೊಳಗೆರೊಳಗೆ ಜೀವ ವಿಮೆ ಮಾಡಿಸಿಕೊಳ್ಳಬೇಕೆಂದು ಕುರಿಗಾರರಿಗೆ ಕರೆ ನೀಡಿದರು.

“ಕುರಿಗಾರರಿಗೆ ವಿಮೆ ಯೋಜನೆ ಜಾಗೃತ ಶಿಬಿರದಲ್ಲಿ ಯಾದಗಿರಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಶಿಬಿರದಲ್ಲಿ ಪಾಲ್ಗೊಂಡಿರುವುದು”

ಕಾರ್ಯಕ್ರಮದ ಆರಂಭದಲ್ಲಿ ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.ಶರಭಣ್ಣ ರಸ್ತಾಪುರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸರ್ಕಾರ ಜಾರಿಗೆ ತಂದಿರುವ ಜೀವವಿಮಾ ಯೋಜನೆಯನ್ನು ಕುರಿಗಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

“ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿಗಾರರು’

ಕಾರ್ಯಕ್ರಮದಲ್ಲಿ ಬಸವರಾಜ ಪೂಜಾರಿ, ಮಾಳಪ್ಪ ಕೆಂಭಾವಿ, ಸುಂಕದ,ಮಹೇಶ ರಸ್ತಾಪುರ,ಬಸವರಾಜ ಕರೇಗಾರ,ಬಲಭೀಮ ಮಡ್ನಾಳ,ನಿಂಗಣ್ಣ,ಮಲ್ಲಣ್ಣ ಅಲ್ಲಿಪುರ,ರವಿ ಸೈದಾಪುರ,ಮಾಳಪ್ಪ ರೋಟ್ನಡಗಿ,ಯಲ್ಲಾಲಿಂಗ,ರಾಘವೇಂದ್ರ ಮಂಜಲಾಪುರ,ಯಮನಪ್ಪ ವಕೀಲರು, ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಕುರಿಗಾರರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

About The Author