ಪಿಡಿಓ ಬಯೋಮೆಟ್ರಿಕ್ ಹಾಜರಾತಿ ಕಳ್ಳ ಮಾರ್ಗ ಪತ್ತೆ ! ತರಾಟೆಗೆ ತೆಗೆದುಕೊಂಡ ಸಿಇಓ ! ಕ್ರಿಮಿನಲ್ ಕೇಸ್ ದಾಖಲಿಸಿಬಹುದೆ ?

ಬಸವರಾಜ ಕರೇಗಾರ

ಮುಖ್ಯಾಂಶಗಳು..

*ಯಾದಗಿರಿ ಜಿಲ್ಲೆಯಾದ್ಯಂತ ಆರು ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಹಾಜರಾತಿ ಕಳ್ಳಾಟ ಬಟಾಬಯಲು!*

* ಪಿಡಿಓ ನಕಲಿ ಬಯೋಮೆಟ್ರಿಕ್ ಹಾಜರಾತಿ ಪತ್ತೆ!
* ಅಭಿವೃದ್ಧಿ ಅಧಿಕಾರಿಗಳ ಕಳ್ಳಾಟ ಪತ್ತೆಹಚ್ಚಿದ ಸಿಇಓ.
* ಸಮಸ್ಯೆಗೆ ಸ್ಪಂದಿಸದ ಅಭಿವೃದ್ಧಿ ಅಧಿಕಾರಿಗಳು.
* ಫೋನ್ ಕರೆ ಸ್ವೀಕರಿಸದ ಅಭಿವೃದ್ಧಿ ಅಧಿಕಾರಿಗಳು.
* ಕಳ್ಳಾಟದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳೂ ಶಾಮೀಲು.
* ಶೇ.87 ರಷ್ಟು ಹಾಜರಾತಿಯ ಕಳ್ಳಾಟ.
* ಸರ್ಕಾರ ಕ್ರಮ ಕೈಗೊಳ್ಳಬಹುದೇ.
* ಅಭಿವೃದ್ಧಿ ಅಧಿಕಾರಿಗಳ ಇನ್ನೆಷ್ಟು ಭ್ರಷ್ಟಾಚಾರ ನಡೆಸಿರಬಹುದು!
* ಇದರ ಬಗ್ಗೆ ಮುಖ್ಯ ಕಾರ್ಯನಿರ್ವಾಹಕಾದಿಕಾರಿಗಳ ನಿಲುವೇನು?.

ಶಹಾಪುರ,,

ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಡಿದ್ದೆ ಆಟ. ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕ್ಯಾರೆ ಮಾಡದ ಪಿಡಿಒ ಅವರ ಬಹುದೊಡ್ಡ ಕಳ್ಳಾಟ ಬೆಳಕಿಗೆ ಬಂದಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಲೆಕ್ಕಿಸದೆ ಸದಾ ಪಟ್ಟಣದಲ್ಲಿ ವಾಸ ಮಾಡುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಹೋಗದೆ ಅದೇ ಗ್ರಾಮ ಪಂಚಾಯಿತಿಯಲ್ಲಿನ ಸಿಬ್ಬಂದಿಯೊಬ್ಬರ ಬಯೋಮೆಟ್ರಿಕ್ ತಂಬಿನಿಂದ ಹಾಕಿಸಿಕೊಂಡು ಪಟ್ಟಣದಲ್ಲಿ ಮೆರೆದಾಡುತ್ತಿದ್ದರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕೇಳಲು ಹೋದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಇರುವುದಿಲ್ಲ. ಆದರೆ ಹಾಜರಾಗಿದ್ದಾರೆ ಎಂದು ಬಯೋಮೆಟ್ರಿಕ್ ಹಾಜರಾತಿ ಸರಕಾರಕ್ಕೆ ವರದಿ ನೀಡುತ್ತದೆ. ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸಲು ಸ್ಥಳೀಯವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸುತ್ತಿದೆ. ಸ್ಥಳೀಯವಾಗಿ ಲಭ್ಯವಿರಲೆಂದು ಬಯೋಮೆಟ್ರಿಕ್ ಹಾಜರಾತಿ ತಂದಿತು. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಂಗೋಲಿ ಕೆಳಗೆ ನುಗಿದ್ದಾರೆ.

ಸಮಸ್ಯೆಗೆ ಸ್ಪಂದಿಸದ ಅಭಿವೃದ್ಧಿ ಅಧಿಕಾರಿಗಳು

ಗ್ರಾಮೀಣ ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಅದಕ್ಕಾಗಿ ಸರ್ಕಾರ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿತ್ತು. ಅದರಲ್ಲೂ ಕಳ್ಳಾಟ ಮಾಡುತ್ತಿದ್ದಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.

ಫೋನ್ ಕರೆ ಸ್ವೀಕರಿಸದ ಅಭಿವೃದ್ಧಿ ಅಧಿಕಾರಿಗಳು.

ಎಷ್ಟೇ ಪ್ರಯತ್ನಿಸಿದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾಕೆ ಫೋನ್ ಕಾಲ್ ಸ್ವೀಕರಿಸುವುದಿಲ್ಲ ಎನ್ನುವುದಕ್ಕೆ ಈ ಕಳ್ಳಾಟವೇ ಸಾಕ್ಷಿ. ಇದು ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಸಾರ್ವಜನಿಕರ ಅಹವಾಲುಗಳು ಗ್ರಾಮೀಣ ಸಮಸ್ಯೆಗಳು ಯಾರ ಬಳಿ ಹೇಳಿಕೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕಾರಣ ಇಟ್ಟುಕೊಂಡು ಸ್ಥಳೀಯವಾಗಿ ಲಭ್ಯವಿರುವುದಿಲ್ಲ. ಬಯೋಮೆಟ್ರಿಕ್ ಹಾಜರಾತಿ ಯಾಕೆ ಬೇಕು. ಗ್ರಾಮೀಣ ಸಮಸ್ಯೆಗಳ ಉದ್ಭವಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಜವಾಬ್ದಾರರೇ ಹೊರತು ಸಾರ್ವಜನಿಕರಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ.

ಪಂಚಾಯಿತಿ ಅಭಿವೃದ್ಧಿಗಳ ಕಳ್ಳಾಟ ಪತ್ತೆಹಚ್ಚಿದ ಸಿಇಓ!

ತಳಮಟ್ಟದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಚಾರಿಸಿದಾಗ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಜರಾತಿ ಇದೆ. ಆದರೆ ಪದೇ ಪದೇ ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯವಾಗಿ ಇರುವುದಿಲ್ಲ. ಸಮಸ್ಯೆ ಪರಿಹಾರ ಕೊಡಿ ಎಂದು ಜಿಲ್ಲಾ ಪಂಚಾಯಿತಿಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡು ಕುದ್ದು ಬಯೋಮೆಟ್ರಿಕ್ ಅಕಾಡಕ್ಕೆ ಇಳಿದಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳವರ ನಕಲಿ ಬಯೋಮೆಟ್ರಿಕ್ ದಂಧೆಯನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಶ್ಯಾಮೀಲು! ಅಮಾನತ್ತಿಗೆ ಆಗ್ರಹ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಕ್ ಹಾಜರಾತಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಯಾರು ಹಾಕುತ್ತಾರೆ ಎನ್ನುವ ತಳಮಟ್ಟದಿಂದ ತನಿಖೆ ನಡೆಸಿ ಶಾಮೀಲಾಗಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಯವರನ್ನು ಕೂಡ ಅಮಾನತ್ತು ಮಾಡಬೇಕೆಂದು ಜಿಲ್ಲೆಯಾದ್ಯಂತ ಬಲವಾಗಿ ಕೇಳಿ ಬರುತ್ತಿದೆ.

ಶೇ.87 ರಷ್ಟು ಹಾಜರಾತಿಯ ಕಳ್ಳಾಟ

ಯಾದಗಿರಿ ಜಿಲ್ಲೆಯಲ್ಲಿ ಶೇ. 80ರಷ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಮೂಲಕ ಅವರ ಬಯೋಮೆಟ್ರಿಕ್ ಹಾಜರಾತಿಯ ತಂಪನ್ನು ಹೋಲಿಕೆ ಮಾಡಿ ಹಾಜರಾತಿ ಹಾಕಿಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇವರೆಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿದೆ !

ಸಿಇಓ ಅವರ ಬಿಟ್ಟ ನಿರ್ಧಾರ !

ಸದಾ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯ ಅವರು ಸೂಕ್ಷ್ಮವಾಗಿ ಗಮನಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಹಾಜರಾತಿಯ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.

ಸರ್ಕಾರ ಕ್ರಮ ಕೈಗೊಳ್ಳುವುದೇ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಬಯೋಮೆಟ್ರಿಕ್ ಕಳ್ಳಾಟದಲ್ಲಿ ತೊಡಗಿದ್ದಾರೆ. ಇಂತಹ ದುರಾವ್ಯವಸ್ತೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ಸಾರ್ವಜನಿಕರೇ ತರಬೇಕಿದೆ. ಇಷ್ಟೊಂದು ಭ್ರಷ್ಟ ವ್ಯವಸ್ಥೆ ಅಧಿಕಾರಿಗಳಿಂದ ನಡೆಯುತ್ತಿದೆ ಎಂದರೆ ಇಂಥವರ ಮೇಲೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

PDO ರವರಿಂದ ಇನ್ನೆಷ್ಟು ಭ್ರಷ್ಟಾಚಾರವಾಗಿದೆ ?.

ಕೇವಲ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಇಷ್ಟೊಂದು ಕಳ್ಳಾಟವಾಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಬರುತ್ತಿರುವ ಅನುದಾನದಲ್ಲಿ ಇನ್ನೆಂತಹ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಪತ್ತೆ ಆಗಬೇಕಿದೆ. ಜನರ ಹಿತ ದೃಷ್ಟಿಯಿಂದ ಗ್ರಾಮೀಣ ಪ್ರದೇಶ ಜನರ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣವನ್ನು ಗ್ರಾಮ ಪಂಚಾಯಿತಿಗೆ ಸುರಿಯುತ್ತಿದೆ. ಇಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಹಣವನ್ನು ಎಷ್ಟೊಂದು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವುದನ್ನು ತನಿಖೆ ಮಾಡಿಸಬೇಕಿದೆ.

ನಕಲಿ ಹಾಜರಾತಿ ಹಾಕಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ?

ಯಾದಗಿರಿ ತಾಲೂಕು.

ಮುಂಡರಗಿ, ವರ್ಕನಳ್ಳಿ, ಠಾಣಗುಂದಿ, ಮುದ್ನಾಳ, ರಾಮಸಮುದ್ರ, ಸೈದಾಪುರ, ಬೆಳಗುಂದಿ, ಬಾಡಿಯಾಳ, ಕಡೆಚೂರು, ಬಂದಳ್ಳಿ, ಹೊನಗೇರಾ, ಅಲ್ಲಿಪುರ, ಯರಗೋಳ,, ಅರಕೆರ ಬಿ, ಬಳಿಚಕ್ರ, ಕಿಲ್ಲನಕೇರಾ, ಕೌಳೂರು…

ಶಹಾಪುರ ತಾಲೂಕು..

ಬೀರನೂರು,ಹುರಸಗುಂಡಗಿ, ಗೋಗಿ ಪಿ, ಅಣಬಿ, ಚಾಮನಾಳ, ಚಟ್ನಳ್ಳಿ, ಗೋಗಿ ಕೆ, ಹೊಸಕೇರಾ, ಹೋತಪೇಠ, ಇಬ್ರಾಹಿಂಪುರ, ಖಾನಾಪುರ, ಕೊಳ್ಳೂರು ಎಂ, ಮದ್ರಿಕಿ, ರಸ್ತಾಪುರ,, ಸಗರ ಬಿ, ಶಿರವಾಳ, ಉಕ್ಕಿನಾಳ, ವನದುರ್ಗ, ಕನ್ಯಾಕೊಳೂರು..

ವಡಗೇರಾ ತಾಲೂಕು..

ಕೊಂಕಲ್, ಹಾಲಗೇರಾ, ತಡಿಬಿಡಿ, ಬೆಂಡೆ ಬೆಂಬಳಿ, ಕಾಡಮಗೇರಾ,ಉಳ್ಳೆಸೂಗುರು, ಗುಂಡಗುರ್ತಿ,ಹಯ್ಯಳ ಬಿ,ಗುಲಸರಂ,ವಡಗೇರಾ ಹೆಚ್, ಕುರುಕುಂದ, ಐಕೂರು, ತುಮಕೂರು..

ಸುರಪುರ ತಾಲೂಕು.

ಬಾದ್ಯಪುರ, ಖಾನಾಪುರ ಎಸ್ಎಚ್, ದೇವರ ಗೋನಾಳ, ಅರಕೆರ ಕೆ, ದೇವಿಕೇರಾ, ಪೇಠ ಅಮ್ಮಾಪುರ, ವಾಗಣಗೇರಾ, ಹೇಮನೂರು, ಸೂಗೂರು, ಕಚಕನೂರು, ಆಲ್ದಾಳ, ತಿಂಥಣಿ, ದೇವತ್ಗಲ್, ದೇವಾಪುರ, ಕರಡಕಲ್, ಯಕ್ತಾಪುರ, ಏವೂರು, ನಗನೂರು, ಮಾಲಗಿತ್ತಿ, ಕಿರದಳ್ಳಿ, ಹೆಗ್ಗಣದೊಡ್ಡಿ…

ಹುಣಸಗಿ ತಾಲೂಕು.

ರಾಜನಕೋಳೂರು, ನಾರಾಯಣಪುರ, ಹೆಬ್ಬಾಳ ಬಿ, ಕೋಳಿಹಾಳ, ಕಾಮನಟಗಿ, ಮಾರನಾಳ,ಅಗ್ನಿ, ಅರಕೇರ ಜೆ, ಬೈಲಗುಂಟಿ, ಬೈಚನಾಳ, ಬರದೇವನಾಳ, ಗೆದ್ದಲಮರಿ, ಹಗರಟಗಿ, ಜೋಗುಂಡಭಾವಿ,
ಕೊಡೆಕಲ್, ಮಾಳನೂರು, ಮುದ್ನೂರು ಕೆ, ವಜ್ಜಲ್,

ಗುರುಮಿಟ್ಕಲ್ ತಾಲೂಕು.

ಕೊಂಕಲ್, ಕಂದಕೂರು, ಚಿನ್ನಾಕಾರ, ಫುಟ್ಪಾತ್, ಜೈಗ್ರಾಮ, ಚಪೆಟ್ಲಾ, ಅಜಲಾಪುರ, ಕಾಕಲವಾರ, ಯಲ್ಲೇರಿ, ಕಾಳೆಬೆಳಗುಂದಿ, ಫಸಫುಲ್, ಮಾದ್ವಾರ, ಯಲಸತ್ತಿ, ಚಂಡ್ರಿಕಿ, ಗಾಜರಕೋಟೆ, ವಿನಾಸ್ಪುರ, ಅನಪುರ,ಯಂಪಾಡ..

Leave a Reply

Your email address will not be published. Required fields are marked *