80 ಅಂಕ ಪಡೆದವರಿಗೆ ಸಹಾಯಕ ಗ್ರೇಡ್ 1 ಹುದ್ದೆ ! ರಾಯಚೂರು ಡಿಸಿಸಿ ಬ್ಯಾಂಕಿನಲ್ಲಿ ಭಾರಿ ಭ್ರಷ್ಟಾಚಾರ ಮೌನವಹಿಸಿದ ಸರ್ಕಾರ !

ಬಸವರಾಜ ಕರೇಗಾರ 

ರಾಯಚೂರು,

ರಾಯಚೂರು ಡಿಸಿಸಿ ಬ್ಯಾಂಕಿನ ನೇಮಕಾತಿ ಹುದ್ದೆಗಳಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ನೇಮಕಾತಿ ಪ್ರಾಧಿಕಾರವು ಕಟ್ ಆಫ್ ಬಿಟ್ಟಿರುವ ಅಂಕಗಳ ಪಟ್ಟಿಯಲ್ಲಿನ ಕಡಿಮೆ ಅಂಕ ಪಡೆದವರನ್ನೂ ನೇಮಕ ಮಾಡಿಕೊಳ್ಳಲಾಗಿದ್ದು ! ಕೇವಲ 80 ಅಂಕ ಪಡೆದ ಅಭ್ಯರ್ಥಿಗಳನ್ನು ಬ್ಯಾಂಕ್ ಸಹಾಯಕ ಗ್ರೇಡ್ 1 ಹುದ್ದೆಗೆ ನೇಮಕಾತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದರಿಂದ ನೇಮಕಾತಿಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದೆ ಎನ್ನುವ ಕೂಗು ರಾಯಚೂರು ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ!

ಹಗಲು ರಾತ್ರಿ ಎನ್ನದೆ ಸರ್ಕಾರಿ ಹುದ್ದೆಯನ್ನು ಗಿಟ್ಟಿಸಿಕೊಳ್ಳಬೇಕೆಂದು ಅಭ್ಯರ್ಥಿಗಳು ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪರೀಕ್ಷೆಯಲ್ಲಿ ಪಡೆದುಕೊಂಡಿದ್ದಾರೆ.  ಅವರೆಲ್ಲರನ್ನು ಬ್ಯಾಂಕ್ ನೇಮಕಾತಿ ಪ್ರಾಧಿಕಾರ ಹಳ್ಳ ಹಿಡಿಸಿದೆ.

1:5 ರಂತೆ ನಾನ್ ಸೆಲೆಕ್ಟ್ ಆದವರನ್ನು ಸೆಲೆಕ್ಟ್ ಮಾಡಿ ಸಂದರ್ಶನಕ್ಕೆ ಕರೆದಿದ್ದಾರೆ.

ನೇಮಕಾತಿಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದ್ದು ರಾಷ್ಟ್ರೀಯ ಮತ್ತು ರಾಜ್ಯ ರಾಜಕಾರಣಿಗಳು ಕೈ ಆಡಿಸಿದ್ದು ಅವರ ಸಂಬಂಧಿಕರು ಹುದ್ದೆಗಿಟ್ಟಿಸಿಕೊಂಡಿದ್ದಾರೆ ಎನ್ನುವ ಕೂಗು ಜಿಲ್ಲೆಯಲ್ಲಿ ಕೇಳಿ ಬಂದಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಗೆ ತಕ್ಕ ಪಾಠ ಮತದಾರರು ಮತ್ತು ನಿರುದ್ಯೋಗಿಗಳು ಕಲಿಸಲಿದ್ದಾರೆ.

ಜಿಲ್ಲೆಯಲ್ಲಿ ಮೌನವಾದ ನಿರುದ್ಯೋಗಿಗಳು.

ರಾಯಚೂರು ಡಿಸಿಸಿ ಬ್ಯಾಂಕನಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಮತ್ತು ನಿರುದ್ಯೋಗಿಗಳು ಹಾಗೂ ಇತರ ಸಂಘಟನೆಗಳು ಮೌನ ವಹಿಸಿವೆ. ದಲಿತ ಸಂಘಟನೆಗಳು ಹೊರತುಪಡಿಸಿದರೆ ಇತರ ಸಂಘಟನೆಗಳು ಯಾವುದೇ ವ್ಯತಿರಿಕ್ತ ಹೋರಾಟ ಮಾಡದೆ ಮೌನವಹಿಸಿವೆ. ನೇಮಕಾತಿಯು ನಮಗೇಕೆ ಎನ್ನುವ ಮಟ್ಟಕ್ಕೆ ಬಂದಿದ್ದು ಧಾರವಾಡದಲ್ಲಿ ನಡೆದಂತೆ ಇಲ್ಲಿಯೂ ಕೂಡ ಭ್ರಷ್ಟಾಚಾರದ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ರಾಯಚೂರಿನಲ್ಲಿ ನಡೆಯಬೇಕಿದೆ.

ನೇಮಕಾತಿ ಅಧಿಕಾರವನ್ನು ಸರಕಾರ ಕಸಿದುಕೊಳ್ಳಬೇಕಿದೆ. 

ಡಿಸಿಸಿ ಬ್ಯಾಂಕಗಳು ನೇಮಕಾತಿಯನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರುವುದರಿಂದ ಒಂದು ಏಜೆನ್ಸಿಯ ಮೂಲಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಭ್ರಷ್ಟಾಚಾರಕ್ಕೆ ಸಾತ್ ನೀಡಿದಂತಾಗುತ್ತದೆ ಆದ್ದರಿಂದ ಸರ್ಕಾರವು ನೇಮಕಾತಿ ಅಧಿಕಾರವನ್ನು ಕಸಿದುಕೊಂಡು ಸರ್ಕಾರವೇ ಬ್ಯಾಂಕ್ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ರೀತಿಯ ಬ್ರಷ್ಟಾಚಾರಗಳು ನಡೆಯುತ್ತಿವೆ ಎನ್ನುವುದಕ್ಕೆ ರಾಯಚೂರು ಡಿಸಿಸಿ ಬ್ಯಾಂಕ್ ಉದಾಹರಣೆ ಸಾಕ್ಷಿ.

80 ಅಂಕ ಪಡೆದವರು ಸಹಾಯಕ ಗ್ರೇಡ್ 1 ಹುದ್ದೆಗೆಟ್ಟಿಸಿಕೊಂಡರಾ ?.

ಎಂತಹ ವಿಪರ್ಯಾಸ  ಎಂದರೆ ಬ್ಯಾಂಕ್ ನೇಮಕಾತಿ ಪ್ರಾಧಿಕಾರ ಪರೀಕ್ಷೆಯಲ್ಲಿ 80 ಅಂಕ ಪಡೆದವರಿಗೆ ಬ್ಯಾಂಕ್ ಸಹಾಯಕ ಗ್ರೇಡ್ 1 ಹುದ್ದೆ ನೀಡಲಾಗಿದೆ! ಬ್ಯಾಂಕ್ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಒಳಗೊಂಡು ಎಲ್ಲರೂ ಶಾಮಿಲ್ ಆಗಿದ್ದಾರೆ ಎನ್ನಲಾಗಿದ್ದು, ಕೂಡಲೇ ಸರ್ಕಾರ ಡಿಸಿಸಿ ಬ್ಯಾಂಕ ನೇಮಕಾತಿ ಪ್ರಾಧಿಕಾರವನ್ನು ತಟಸ್ಥಗೊಳಿಸಲು ಆದೇಶಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬ್ಯಾಂಕಿನ ನಿರ್ದೇಶಕರ ಅವಧಿ ಮುಗಿಯುವ ಹಂತದಲ್ಲಿದ್ದು ಅದಕ್ಕಾಗಿ ಆತುರಾತುರವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಕೂಗು ಜಿಲ್ಲೆಯಾದ್ಯಂತ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳದೆ ಮೌನವಹಿಸದೆ ಎನ್ನಲಾಗಿದೆ.

ರಾಯಚೂರು ಡಿಸಿಸಿ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು ತಾವೇ ನೇಮಕಾತಿ ಮಾಡಿದ ಅಭ್ಯರ್ಥಿಗಳಿಗೆ ಬ್ಯಾಂಕ್ ನೇಮಕಾತಿಯ ಪತ್ರಗಳನ್ನು ಕೇಂದ್ರಿಯ ಬ್ಯಾಂಕಿನಲ್ಲಿ ನೀಡಬೇಕಿತ್ತು, ಆದರೆ ರಾಯಚೂರಿನ ಹೆಸರಾಂತ ಹೋಟೆಲನಲ್ಲಿ ನೀಡಿದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿದೆ!

ಕರುನಾಡು ವಾಣಿ.
ಡಿಜಿಟಲ್ ಮೀಡಿಯಾ
ಕರುನಾಡಿನ ಧ್ವನಿ, ಕರುನಾಡಿನ ಜನರಿಗಾಗಿ ಜನರೊಂದಿಗೆ.  ಸುದ್ದಿ & ಜಾಹಿರಾತಿಗಾಗಿ ಸಂಪರ್ಕಿಸಿ :
karunaduvani.com@gmail
9060737896 – 9449438811

ಬಸವರಾಜ ಕರೇಗಾರ
basavarajkaregar@gmail.com

Leave a Reply

Your email address will not be published. Required fields are marked *