ಶಹಾಪುರ,,
ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆ ತಡೆಯಬೇಕೆಂದು ವಿಶ್ವಹಿಂದೂ ಪರಿಷತ್ತಿನಿಂದ ತಹಶೀಲ್ದಾರರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕ ಕಾರ್ಯದರ್ಶಿ ರಮೇಶ ಕೊಲ್ಕರ್ ತಿಳಿಸಿದ್ದಾರೆ.
ಇಂದು ಗೋವುಗಳು ರೈತರ ಜೀವನಾಡಿ.ಹಿಂದೂಗಳು ಗೋವುಗಳ ಸಗಣಿಯನ್ನು ಹಣೆಗೆ ವಿಭೂತಿ ರೂಪದಲ್ಲಿ ಧರಿಸಿದರೆ ಗೋಮೂತ್ರವನ್ನು ಔಷಧಿ ರೂಪದಲ್ಲಿಉಪಯೋಗಿಸುತ್ತಾರೆ.ಗೋವುಗಳನ್ನು ಹಿಂದೂಗಳು ತಾಯಿ ಸ್ವರೂಪದಲ್ಲಿ ಕಾಣುತ್ತೇವೆ.ಅಂತಹ ಪೂಜ್ಯನಿಯ ಗೋವುಗಳನ್ನು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಿ ಹತ್ಯೆ ಗೈದು ಆಹಾರ ರೂಪದಲ್ಲಿ ಸೇವನೆ ಮಾಡಲಾಗುತ್ತಿದೆ.ಹಿಂದೂಪರ ಕಾರ್ಯಕರ್ತರು ತಡೆಯಲು ಪ್ರಯತ್ನಿಸಿದರೆ ನಮ್ಮ ಮೇಲೆಯೇ ಕೇಸ್ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು. ಅಕ್ರಮ ಸಾಗಾಣಿಕೆ, ಪಿಡಿಒ ಸೇರಿದಂತೆ ತಹಶೀಲ್ದಾರ್, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಹಿಂದೂ ಸಂಘಟನೆಯ ಮುಖಂಡ ವಿನೋದ ಸಾವೂರ್, ಶಿವುಕುಮಾರ ಶಿರವಾಳ,ಪ್ರಧಿಪ ಅಣಬಿ,ಮಹೇಶ ದೊರೆ,ಬಸವರಾಜ, ಶಿವಾಜಿ ಶಹಪುರ,ಭೀಮಾ ಶಂಕರ ಶಿರವಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.