ಶಹಾಪುರ,,
ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವು ಕಾನೂನು ಸಲಹೆ ತಾಲ್ಲೂಕು ವಕೀಲರ ಸಂಘದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಮಿಕ ಇಲಾಖೆ,ಮಕ್ಕಳ ರಕ್ಷಣಾ ಇಲಾಖೆ, ಪಂಚಾಯತ್ ಇಲಾಖೆ,ಕಂದಾಯ ಸಂಯುಕ್ತ ಆಶ್ರಯದಡಿ ನಡೆಯಿತು.ಸರಕಾರಿ ಕಾನೂನು ಸಲಹೆಗಾರರಾದ ಶ್ರೀಮತಿ ವಿದ್ಯಾರಾಣಿ ಮತ್ತು ವಕೀಲರಾದ ಶ್ರೀಮತಿ ಪರ್ವೀನಾ ಹಾಗೂ ಪಿಎಸ್ಐ ಶಾಮಸುಂದರ ನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ,ಸರ್ಕಾರಿ ಶಾಲೆಯಲ್ಲಿ ಕಾನೂನು ಅರಿವು ನೆರವು ಕುರಿತು ಜಾಗೃತಿಯ ಮೂಡಿಸಲಾಯಿತು. 18 ವರ್ಷದೊಳಗಿನ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರಗಳು, ಬಾಲ್ಯ ವಿವಾಹಗಳ ಬಗ್ಗೆ ಅರಿವು ಮೂಡಿಸಲಾಯಿತು. ಸಮಾಜದಲ್ಲಿ ಸಮಾಜ ಮುಖಿಯಾಗಿ ಬೆಳೆಯಲು ರಾಜ್ಯ ಕಾನೂನು ಅರಿವು ನೆರವು ಪ್ರಾಧಿಕಾರ ಮತ್ತು ತಾಲೂಕು ಕಾನೂನು ಪ್ರಾಧಿಕಾರಗಳು ಗ್ರಾಮೀಣ ಮಟ್ಟದಲ್ಲಿ ಕಾನೂನು ಅರಿವಿನ ಬಗ್ಗೆ ಕಾರ್ಯಕ್ರಮ ಏರ್ಪಡಿಸಿ ಕಾನೂನು ಸಲಹೆಯನ್ನು ನೀಡುತ್ತಿದ್ದು ಅದರ ನೆರವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು. ಪ್ರತಿ ಗ್ರಾಮಗಳಿಗೆ ಮನೆಮನೆಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಮುಟ್ಟುವಂತಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಶರಣರೆಡ್ಡಿ ಹತ್ತಿಗೂಡೂರು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕ ಅಧ್ಯಕ್ಷರಾದ ಮಹೇಶ ಸಾಹು,ಶರಣಪ್ಪ ಚಲವಾದಿ,ಕಾರ್ಯಕ್ರಮ ಆಯೋಜಕರಾಧ ರವಿಕುಮಾರ ಮಂಡಗಳ್ಳಿ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ರೇಣುಕಾ ಬಂಕುರ ಸೇರಿದಂತೆ ಗ್ರಾಮದ ಮಹಿಳೆಯರು ಯುವಕರು ಯುವತಿಯರು ಉಪಸ್ಥಿತರಿದ್ದರು.