ಕೊಲ್ಕತ್ತಾ :
ಪ್ರಸ್ತುತ ಪಶ್ಚಿಮ ಬಂಗಾಳ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷವು ಸಂಕಲ್ಪ ಪತ್ರವನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ಇಂದು ಬಿಡುಗಡೆ ಮಾಡಿದರು.ಸಂಕಲ್ಪ ಪತ್ರದಲ್ಲಿ ಮಹಿಳೆಯರಿಗೆ ಭರಪೂರ ಕೊಡುಗೆಯನ್ನು ನೀಡಿದ ಅಮಿತ್ ಶಾ ರವರು ಮಾಸಿಕ 3000ರೂ. ಸಹಾಯ ಧನ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು. ನಿರುದ್ಯೋಗ ಯುವಕರಿಗೆ 3000ರೂ. ಸಹಾಯ ಧನ ನೀಡಲಾಗುವುದು. ಇದನ್ನು ಅವರು ಸೋನಾರ್ ಬಾಂಗ್ಲಾ ನಿರ್ಮಾಣದ ಮಾರ್ಗನಕ್ಷೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿಯವರು ಅಧಿಕಾರ ನಡೆಸಿದ್ದು, ರಾಜ್ಯದ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸಿಲ್ಲ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ. ಸಮೃದ್ಧಿ ರಾಜ್ಯವಾದ ಪಶ್ಚಿಮ ಬಂಗಾಳವನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದರು.
ಬಿಜೆಪಿಯ ಸಂಕಲ್ಪ ಪತ್ರವು ರೈತರು, ಯುವಕರು ಮತ್ತು ಮಹಿಳೆಯರಿಗೆ ಹೊಸ ದಿಕ್ಕು ನೀಡಲಿದೆ ಎಂದರು. ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಬಿಡುವುದಿಲ್ಲ. ಗಡಿಭದ್ರತ ಪಡೆಯನ್ನು ನಿಯೋಜಿಸಿ ರಾಜ್ಯದೊಳಕ್ಕೆ ನುಗ್ಗದಂತೆ ತಡೆಯುವುದಾಗಿ ತಿಳಿಸಿದರು.ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು, ದೆೇಶದಿಂದ ಹೊರಹಾಕಲಾಗುವುದು. ಎಲ್ಲಾ ನಾಗರಿಕರಿಗೆ ಸಮಾನ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು.ಸರ್ಕಾರ ಅಧಿಕಾರಕ್ಕೆ ಬಂದ 45 ದಿನಗಳ ಒಳಗೆ ರಾಜ್ಯ ನೌಕರರಿಗಾಗಿ 7ನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.