ಗಿರಿನಾಡಿಗೆ ಗರಿ ತಂದಿರುವ ಡಿಡಿಯು ಕಾಲೇಜು :  ಪಿಯುಸಿ ಫಲಿತಾಂಶದಲ್ಲಿ ಅಮರೇಶ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸನ್ಮಾನ 

ಶಹಾಪುರ,,

ರಾಜ್ಯಾದ್ಯಂತ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,ನಗರದ ಪ್ರತಿಷ್ಠಿತ ಕಾಲೇಜಾಗಿರುವ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆಗೈದಿದ್ದು, ಅಮರೇಶ ತಂದೆ ಹಣಮಂತ ಎನ್ನುವ ವಿದ್ಯಾರ್ಥಿ ಯಾದಗಿರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ  ಜಿಲ್ಲೆಗೆ ಕೀರ್ತಿ ತಂದಿದ್ದಾನೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ಅಮರೇಶ ವಿದ್ಯಾರ್ಥಿಯು ವಿಷಯವಾರು ಅಂಕಗಳಲ್ಲಿ ಕನ್ನಡ-98, ಇಂಗ್ಲಿಷ್-95, ಭೌತಶಾಸ್ತ್ರ-100, ರಾಸಾಯನಶಾಸ್ತ್ರ-100, ಗಣಿತ-99, ಜೀವಶಾಸ್ತ್ರ -96  ಒಟ್ಟು ಅಂಕಗಳು-588 ಅಂಕ ಪಡೆದು, ಪ್ರತಿಷತ 98% ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಈ ಮೂಲಕ ಸಂಸ್ಥೆಗೆ ಹಾಗೂ ಕಾಲೇಜಿಗೆ ಪೋಷಕರಿಗೆ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾನೆ. ಈ ವಿದ್ಯಾರ್ಥಿ ಡಿಡಿಯು ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದು, ಅದೇ ಸಂಸ್ಥೆಯ ಪಿಯುಸಿ ಎರಡು ವರ್ಷಗಳ ಕಾಲ ವ್ಯಾಸಂಗ ಮಾಡಿದ್ದು ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಗೈದಿದ್ದು,ಸಂಸ್ಥೆಯ ಸಂಸ್ಥಾಪಕರಾದ ಡಾ.ಭೀಮಣ್ಣ ಮೇಟಿಯವರು ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿ,  ಕಾಲೇಜಿನಲ್ಲಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಥೆ ಗ್ರಾಮೀಣ ಮಕ್ಕಳಿಗೆ ದಶಕದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.  ಈ ವರ್ಷವೂ ಕಾಲೇಜು ಒಳ್ಳೆಯ ಫಲಿತಾಂಶ ನೀಡಿರುವುದು ಸಂತಸ ತಂದಿದೆ. ಪ್ರತಿ ವರ್ಷ ಬಡತನದಿಂದ ಬಳಲುವ ಪ್ರತಿಭಾವಂತ ಮಕ್ಕಳಿಗೆ ಸದಾ ನಮ್ಮ ಸಂಸ್ಥೆ ಪ್ರೋತ್ಸಾಹಿಸುತ್ತಾ ಬಂದಿದೆ.ನಮ್ಮ  ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಾಧನೆಗೆ ಕಾರಣರಾದ ಕಾಲೇಜಿನ ಪ್ರಾಂಶುಪಾಲರಾದ ಕಿರಣ ಪತ್ತಾರ ಮತ್ತು ಎಲ್ಲಾ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರಿಗೆ ಸಂಸ್ಥೆಯ ಸಿಬ್ಬಂದಿಯವರಿಗೆ ವರ್ಗದವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

Leave a Reply

Your email address will not be published. Required fields are marked *