ಡಿಡಿಯು ಶಿಕ್ಷಣ ಸಂಸ್ಥೆಗೆ ಶೇ. 94. 87 ರಷ್ಟು ಫಲಿತಾಂಶ ದಾಖಲು 

ಶಹಾಪುರ,

ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಡಿಡಿಯು( ದೇವರಾಜ್ ಅರಸು ಸಮೂಹ ಶಿಕ್ಷಣ ಸಂಸ್ಥೆ) ಶಿಕ್ಷಣ ಸಂಸ್ಥೆಯು ಒಂದಾಗಿದ್ದು ಇಂದು ರಾಜ್ಯಾದ್ಯಂತ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟಿಸಲಾಗಿದ್ದು ಶಹಾಪುರದ ಡಿಡಿಯು ಸಂಸ್ಥೆಯು ವಿಜ್ಞಾನ ವಿಭಾಗದಲ್ಲಿ ಶೇ 94.87 ರಷ್ಟು ಫಲಿತಾಂಶ ದಾಖಲೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 195 ವಿದ್ಯಾರ್ಥಿಗಳಲ್ಲಿ 185 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅದರಲ್ಲಿ ಅಂಬರೀಶ ತಂದೆ ಹನ್ಮಂತ್ರಾಯ ಎನ್ನುವ ವಿದ್ಯಾರ್ಥಿಯು ಶೇ 98 ರಷ್ಟು ಅಂಕ ಪಡೆದು ದಾಖಲು ಮಾಡಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 120 ವಿದ್ಯಾರ್ಥಿಗಳು ಪ್ರಥಮ ದರ್ಜೆ, ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಅದರಲ್ಲಿ 27 ವಿದ್ಯಾರ್ಥಿಗಳು ಶೇ 90ಕ್ಕಿಂತಲೂ ಹೆಚ್ಚು ಅಂಕ ಪಡೆದು ಸಾಧನೆಗೈದಿದ್ದಾರೆ.

ಪ್ರೇಮ ಪಾಟೀಲ್ ಶೇ.97, ನಮ್ರತಾ ಶೇ 96, ಕವಿತಾ ಶೇ. 96, ಶಿವ ಅಂಜುಂ ಶೇ.96,ಅಲ್ಪಿಯ ಶೇ 95, ಪ್ರೀತಿ ಶೇ 94, ನೀಧ ಶೇ 94, ಮಧು ಶೇ 94, ಮಹಮ್ಮದ್ ಆರಿಫ್ ಶೇ 94, ಬೀರಲಿಂಗ ಶೇ 94, ಅಕ್ಷತಾ ಶೇ 93, ದೇವಮ್ಮ ಶೇ 93, ತಾಯಪ್ಪ ಶೇ 93,ಅಂಕಿತ ಶೇ 93, ನಿಂಗಮ್ಮ ಶೇ 92, ಭಾಗಯ್ಯ ಶೇ 92, ದೀಪ ಶೇ 92, ಖುಷ್ಬು ಶೇ 92, ಸುಭಾಷ್ ಚಂದ್ರ ಶೇ 91, ಭಾಗ್ಯ ಶೇ 91, ಹರ್ಷಿತ ಶೇ 91,ಮಧುಸೂದನಶೇ 91,ಅನುಮೋಲ್ ಶೇ 91, ದೊಡ್ಡಯ್ಯ ಶೇ 90, ಚುಕ್ಕಿ ಶೇ 90,ರಶ್ಮಿ ಶೇ 90 ಫಲಿತಾಂಶ ದಾಖಲಾಗಿದ್ದು ವಿದ್ಯಾರ್ಥಿಗಳ ಸಾಧನೆಗೆ ಇಲ್ಲಿ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ, ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿ, ಪ್ರಾಂಶುಪಾಲರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *