ಆರೋಗ್ಯ ಇಲಾಖೆಯ NHM ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ಅನಿರ್ಧಿಷ್ಟಾವಧಿ ಮುಷ್ಕರ

ಶಹಾಪುರ,,

ರಾಜ್ಯವ್ಯಾಪಿ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರು ಸಹ ಸರ್ಕಾರಿ ವೈದ್ಯಧಿಕಾರಿಗಳ ಮುಷ್ಕರಕ್ಕೆ ಬೆಂಬಲ ನೀಡುವುದರ ಜೊತೆಗೆ ಭಾಗಿಯಾಗಲು ರಾಜ್ಯ KSHCOEA-BMS ನಿರ್ಧರಿಸಲಾಗಿದ್ದು, ಈಗಾಗಲೇ ರಾಜ್ಯ ಸರ್ಕಾರಕ್ಕೆ ಜೊತೆಗೆ ಅರೋಗ್ಯ ಇಲಾಖೆಯ ಸಚಿವರು, ಹಾಗೂ ಅಧಿಕಾರಿಗಳಿಗೆ & ಮಾನ್ಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ,ಸ್ಥಳೀಯ ಜನಪ್ರತಿನಿದಿಗಳಿಗೆ ನಿಯಮಾನುಸಾರ ಮುಷ್ಕರದ ಕುರಿತು ಮಾಹಿತಿ ಹಾಗೂ ಬೇಡಿಕೆ ಈಡೇರಿಕೆಗೆ ಕ್ರಮವಹಿಸಲು ಕೋರಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಜೊತೆಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ವರ್ಗದಿಂದ ಹಲವು ಸುತ್ತಿನ ಸಭೆ ನಡೆಸಿದರು ಯಶಸ್ವಿಯಾಗಿರುದಿಲ್ಲ.ಯಾದಗಿರಿ ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರ ನಿಯೋಗದಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಡಾ,ಮಹೇಶ ಬಿರಾದಾರ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರು KGMO ಡಾ.ಎಮ್. ಎಸ್. ಪಾಟೀಲ್ ರವರಿಗೆ ಸಂಘದ ವತಿಯಿಂದ ನೌಕರರ ಜಿಲ್ಲಾ ಗೌರವ ಅಧ್ಯಕ್ಷ ಮನೋಹರ ಪಾಟೀಲ ನೇತೃತ್ವದಲ್ಲಿ, ಅಧ್ಯಕ್ಷರಾದ ರಾಚಣ್ಣಗೌಡ ಕರೆಡ್ಡಿ,ಜಿಲ್ಲಾ ಲೆಕ್ಕ ಪತ್ರ ಅಧಿಕಾರಿಗಳಾದ ಸಹನಾ ದೇಶಪಾಂಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವಿಭಾಗದ ಪ್ರಮುಖರು ಸಂಘದ ಪದಾಧಿಕಾರಿಗಳು  ಮನವಿ ಸಲ್ಲಿಸಿದರು.

ನೌಕರರ ಸಂಘದ ಹೋರಾಟದ ಹಂತಗಳು.

ದಿ. 11-03-2026 ರಿಂದ ಹೊರ ರೋಗಿಗಳಿಗೆ ಚಿಕಿತ್ಸೆ ನೀಡದೇ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದು.

ದಿ: 16-03-2026 ಸೋಮವಾರದಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದು.

********

NHM ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನ್ಯಾಯಯುತ ಬೇಡಿಕೆಗಳು

1. ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ ಕೂಡಲೆ ತೀರ್ಮಾನಿಸಿ ಪ್ರಕ್ರಿಯೆ ಆರಂಭಿಸಬೇಕು.

2. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು Rationalization ಹಾಗೂ ಮರು ನೇಮಕಾತಿ ಸಹಿತ ಯಾವುದೇ ಅನ್ಯ ಕಾರಣಗಳಿಂದ ಕೆಲಸದಿಂದ ವಜಾ ಮಾಡುವ ಪ್ರಸ್ತಾವನೆಗಳನ್ನು ಕೈಬಿಡಬೇಕು ಹಾಗೂ ಈಗಾಗಲೇ ವಜಾಗೊಳಿಸಿರುವ (RBSK ತಂಡ, ಆತಾ ಮೆಂಟರ್ಸ್. E ಆಸ್ಪತ್ರೆ DEO ಗಳು ಮತ್ತು ಇತರೆ) ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಆದೇಶ ಹೊರಡಿಸುವುದು.

3. ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ  ಶ್ರೀನಿವಾಸಚಾರಿ ವರದಿಯಂತೆ ನೀಡಿರುವ 15% ವೇತನ ಹೆಚ್ಚಳವನ್ನು ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅನ್ವಯವಾಗುವಂತೆ ಬಾಕಿ (24-25 & 25-26) ವೇತನ ಪಾವತಿಸುವುದು ಹಾಗೂ ನೌಕರರಿಗೆ ಮಾರಕವಾಗಿರುವ ಕಾರ್ಯಕ್ಷಮತೆಯ ಮೌಲ್ಯಮಾಪನ ಪದ್ದತಿಯನ್ನು ಕೈ ಬಿಡಬೇಕು

4. ಸಮಾನ ಕೆಲಸಕ್ಕೆ ಸಮಾನ ವೇತನ ಮಂಜೂರಾತಿ ಮಾಡುವುದು.

5. ಮೂರು ತಿಂಗಳಿಗೆ ಒಮ್ಮೆ ವೇತನ ಪಾವತಿ ಆಗುತ್ತಿದ್ದು ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು ಇನ್ನೂ ಮುಂದೆ ಪ್ರತಿ ತಿಂಗಳು ವೇತನ ಪಾವತಿ ಆಗುವಂತೆ ಮಾಡುವುದು.

6. 1972ರ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದು.

ಈ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸಮಸ್ತ ಇಲಾಖೆಯ ನೌಕರರು ಭಾಗವಹಿಸುವರು ಎಂದು ತಿಳಿಸಿದ್ದಾರೆ ಎಂದರು..

Leave a Reply

Your email address will not be published. Required fields are marked *