ಹುಲಿಕಲ್ ಕೆ ಗ್ರಾಮಕ್ಕೆ ನೀರು ಒದಗಿಸುವಂತೆ ಒತ್ತಾಯ

ಶಹಪುರ,,

ತಾಲೂಕಿನ ಹುಲ್ಕಲ್ ಕೆ ಗ್ರಾಮದ ಮಡ್ಡಿ ಬಡಾವಣೆಗೆ ನೀರು ಒದಗಿಸುವಂತೆ ಭೀ,ಗುಡಿಯ ಪುರಸಭೆ ಕಾರ್ಯಾಲಯದ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಸಲ್ಲಿಸಲಾಯಿತು.ಈ ಪ್ರದೇಶದಲ್ಲಿ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಯಾವುದೇ ಬೋರ್ವೆಲ್ ಇಲ್ಲ. ಟ್ಯಾಂಕಿನಿಂದ ಪೈಪ್ ಲೈನ್ ಕೂಡ ವ್ಯವಸ್ಥೆ ಮಾಡಿಲ್ಲ. ಇಲ್ಲ ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುವಂತಾಗಿದೆ. ಯಾವುದೇ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಆ ಕಡೆ ಕಣ್ಣಾಯಿಸುತ್ತಿಲ್ಲ. ಈಗ ಬೇಸಿಗೆ ಆರಂಭವಾಗಿದೆ. ಬಿಸಿಲಿನ ತಾಪ ಬಹಳಷ್ಟಿದೆ. ನೀರಿನ ವ್ಯವಸ್ಥೆ ಆಗದೆ ಹೋದರೆ ತೊಂದರೆ ಅನುಭವಿಸಬೇಕಾಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ವ್ಯವಸ್ಥೆ ಸರಿಪಡಿಸಬೇಕು.
ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಕಾರ್ಯಾಲಯದ ಮುಂದೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೊನ್ನಪ್ಪ ಗಂಗನಾಳ ಸುಭಾಷ ತಳವಾರ, ಮಾಳಪ್ಪ ಸಲಾದಪುರ, ನಿಂಗಣ್ಣ ತಿಪ್ಪನಹಳ್ಳಿ, ಮಲ್ಲಿನಾಥ ಬಡಿಗೇರ, ಪಂಡಿತ್ ಮಡ್ನಾಳ, ರೇಣುಕಮ್ಮ ಸಾಯಿಬಣ್ಣ, ಶಾಂತಮ್ಮ, ಬಸಪ್ಪ, ನಿಂಗಮ್ಮ, ಶಿವಲಿಂಗಪ್ಪ, ಸುಜಾತ ಹುಲ್ಕಲ, ಅನ್ನಪೂರ್ಣಮ್ಮ, ಪದ್ದಮ್ಮ ಸೇರಿದಂತೆ  ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *