ಜನಸಾಮಾನ್ಯರಿಗೆ ಒತ್ತು ನೀಡಿದ ಬಜೆಟ್

ಶಹಾಪುರ,,

ಗ್ಯಾರಂಟಿ ಯೋಜನೆಗೆ 1.21 ಲಕ್ಷ ಕೋಟಿ ಅನುದಾನ ಮೀಸಲಿಡುವ ಮೂಲಕ ಜನ ಸಾಮಾನ್ಯರ ಜೀವನಮಟ್ಟ ಸುಧಾರಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರರಾದ ಮಲ್ಲಪ್ಪ ಉಳ್ಳಂಡಗೇರಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗೆ ಒತ್ತು ನೀಡಿದ್ದಾರೆ.ಬಜೆಟ್ ಪೂರ್ವದಲ್ಲಿ ಕೈಗಾರಿಕಾ ಅಭಿವೃದ್ಧಿ ಹಿನ್ನೆಲೆ ಇಲಾಖೆಗಳೊಂದಿಗೆ ಸಭೆ ನಡೆಸಿ, ಅಗತ್ಯ ಅನುದಾನ ಕಲ್ಪಿಸಲಾಗಿದೆ. ಕೃಷಿ, ನೀರಾವರಿ ಕ್ಷೇತ್ರಗಳಿಗೂ ಒತ್ತು ನೀಡುವ ಮೂಲಕ ರಾಜ್ಯ ಸರ್ಕಾರ ರೈತರ ಪರವಿದೆ ಎಂಬುದನ್ನು ತೋರಿಸಿ ಕೊಟ್ಟಿದೆ. ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನಹರಿಸಿದ್ದು ಜನಹಿತ ಬಯಸುವ ಬಜೆಟ್ ನ್ನು ಮಂಡಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *