ಕನಕದಾಸರ ಡಣ್ಣಾಯಕರ ಮನೆಯ ಉತ್ಖನನ, ಸಂರಕ್ಷಣೆಗಾಗಿ ಬಜೆಟ್ಟಿನಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಘೋಷಣೆ

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕನಕಗೌರವ,ಕನಕದಾಸರ ಡಣ್ಣಾಯಕರ ಮನೆಯ ಉತ್ಖನನ, ಸಂರಕ್ಷಣೆಗಾಗಿ ಬಜೆಟ್ಟಿನಲ್ಲಿ 5 ಕೋಟಿ ರೂಪಾಯಿಗಳ ಅನುದಾನ ಘೋಷಣೆ

     ಮುಕ್ಕಣ್ಣ ಕರಿಗಾರ

   ಆಯುಕ್ತರು

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

 

ಮುಖ್ಯಮಂತ್ರಿ ಸನ್ಮಾನ್ಯ ಸಿದ್ಧರಾಮಯ್ಯನವರು ಕನಕದಾಸರ ಬಗ್ಗೆ ಅಪಾರ ಗೌರವಾಭಿಮಾನಗಳನ್ನುಳ್ಳವರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಹಿತದೃಷ್ಟಿಯಿಂದ ನನ್ನನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾಗಿ ನೇಮಿಸಿದ್ದಾರಲ್ಲದೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾನು ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಗಣಿಸಿ,ಮಂಜೂರು ಮಾಡುವ ಮೂಲಕ ನನ್ನನ್ನು ಬೆಂಬಲಿಸಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಮುನ್ನಡೆಸುತ್ತಿದ್ದಾರೆ.ಅದಕ್ಕೆ ಒಂದು ನಿದರ್ಶನ ಇಲ್ಲಿದೆ.

ಇತ್ತೀಚಿಗೆ ನಾನು ಬಾಡದಲ್ಲಿ ಇರುವ ಕನಕದಾಸರ ಡಣ್ಣಾಯಕರ ಮನೆಯ ಉತ್ಖನನ ಮತ್ತು ಸಂರಕ್ಷಣೆಯ ಪ್ರಯತ್ನ ಕೈಗೊಂಡಿದ್ದೆ.ನಾನು ಸ್ಥಳಪರಿಶೀಲಿಸಿ ಡಣ್ಣಾಯಕರ ಮನೆಯ ಉತ್ಖನನ ಮತ್ತು ಸಂರಕ್ಷಣೆಗಾಗಿ 5 ಕೋಟಿ ( ಐದು ಕೋಟಿ ರೂಪಾಯಿಗಳ) ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕೋರಿ 24.02.2026 ರಂದು ಪತ್ರ ಬರೆದಿದ್ದೆ.ಕನಕದಾಸರ ಬಗ್ಗೆ ಅಪಾರ ಗೌರವಾಭಿಮಾನಗಳುಳ್ಳ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಮಂಡಿಸಿದ ಅವರ ದಾಖಲೆಯ 17 ನೆಯ ಬಜೆಟ್ಟಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದುಕೋಟಿ ರೂಪಾಯಿಗಳ ಸಹಾಯಾನುದಾನ ಘೋಷಿಸಿದ್ದಾರೆ.ತನ್ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನಕದಾಸರ ಬಗೆಗಿನ ತಮ್ಮ ಗೌರವ,ನಿಷ್ಠೆಗಳನ್ನು ವ್ಯಕ್ತಪಡಿಸಿದ್ದಾರಲ್ಲದೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ನಾನು ಕಾಣುತ್ತಿದ್ದ ಕನಸು ಕಲ್ಪನೆಗಳಿಗೆ ಶಕ್ತಿ ತುಂಬಿದ್ದಾರೆ.ಕನಕದಾಸರ ಡಣ್ಣಾಯಕರ ಮನೆಯು ಬೆಳಕಿಗೆ ಬರುವ ಮೂಲಕ ಕನಕದಾಸರ ಮಹೋನ್ನತ ವ್ಯಕ್ತಿತ್ವದ ಪರಿಚಯ ನಾಡ ಜನತೆಗೆ ಆಗಲಿದೆ.ಇಂತಹ ಮಹೋನ್ನತ ಕಾರ್ಯಕ್ಕೆ ಮರುಮಾತನಾಡದೆ ಕೇಳಿದಷ್ಟು ಅನುದಾನ ಘೋಷಿಸುವ ಮೂಲಕ ಔದಾರ್ಯ ಮೆರೆದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ಧರಾಮಯ್ಯನವರನ್ನು ಆಶೀರ್ವದಿಸಲಿ ಎಂದು ನಾನು ಕನಕದಾಸರಲ್ಲಿ ಪ್ರಾರ್ಥಿಸುವೆ

 

೦೬.೦೩.೨೦೨೬

Leave a Reply

Your email address will not be published. Required fields are marked *