ಎಲ್ಲೆಡೆ ಪಸರಿಸುತ್ತಿದೆ ಕನಕದಾಸರ ಕೀರ್ತಿ ಕಂಪು; ಹೊರರಾಜ್ಯಗಳಿಗೂ ತಲುಪಿದೆ ಪ್ರಾಧಿಕಾರದ ಕನಕಸೇವೆಯ ಸತ್ತ್ವ

ಎಲ್ಲೆಡೆ ಪಸರಿಸುತ್ತಿದೆ ಕನಕದಾಸರ ಕೀರ್ತಿ ಕಂಪು; ಹೊರರಾಜ್ಯಗಳಿಗೂ ತಲುಪಿದೆ ಪ್ರಾಧಿಕಾರದ ಕನಕಸೇವೆಯ ಸತ್ತ್ವ

ಮುಕ್ಕಣ್ಣ ಕರಿಗಾರ

     ‌                         ಆಯುಕ್ತರು

                ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

      ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ತಾನು ಪರಿಚಯಿಸಿಕೊಂಡ ಕಾರಣದಿಂದ ಕನಕದಾಸರ ಕೀರ್ತಿಯ ಕಂಪು ಈ ಎರಡು ತಿಂಗಳುಗಳ ಅತ್ಯಲ್ಪ ಅವಧಿಯಲ್ಲಿ ರಾಜ್ಯದಾದ್ಯಂತ ಹರಡಿದ್ದಲ್ಲದೆ ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೂ ತಲುಪಿದೆ.ಎಂತೆಲೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಪ್ರಸಾರದಲ್ಲಿ ಇರುವ V5 ಟಿ ವಿ ವಾಹಿನಿಯ ( ಉಪಗ್ರಹ ಟಿವಿ 72) ತಂಡವು ಇಂದು ಕಾಗಿನೆಲೆಗೆ ಆಗಮಿಸಿತ್ತು.

      ಗೋಪಿನಾಥ ತಾಂಡೂರು ಅವರ ನೇತೃತ್ವದಲ್ಲಿನ 3 ಜನರನ್ನೊಳಗೊಂಡ V5 TV ತಂಡವು ಇಂದು ಕಾಗಿನೆಲೆಗೆ ಆಗಮಿಸಿತ್ತು.ವಾಹಿನಿಯ ಪ್ರತಿನಿಧಿಗಳನ್ನು ಕನಕದಾಸರ ಐಕ್ಯ ಮಂಟಪಕ್ಕೆ ಕರೆದೊಯ್ದು ತಂಡದ ಮುಖ್ಯಸ್ಥರಾದ ಗೋಪಿನಾಥ ಮತ್ತು ಇತರ ಸದಸ್ಯರುಗಳನ್ನು ಕನಕದಾಸರ ಸಮ್ಮುಖದಲ್ಲಿ ಕನಕಾನುಗ್ರಹಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು.ಬಳಿಕ ಅವರಿಗೆ ಕನಕದಾಸರ ಬಗ್ಗೆ, ಕನಕದಾಸರ ಜನ್ಮಸ್ಥಳ,ಐಕ್ಯಸ್ಥಳ,ಅಶ್ವತ್ಥವೃಕ್ಷ ಮತ್ತು 275 ಎಕರೆಗಳಷ್ಟು ವಿಸ್ತಾರವಾಗಿರುವ ಕನಕಸರೋವರ ಮತ್ತು 148 ಎಕರೆಗಳ ವಿಸ್ತೀರ್ಣದಲ್ಲಿ ಹರಡಿ ನಿಂತ‌ ಕನಕ ಪರಿಸರ ಸ್ನೇಹಿ ಉದ್ಯಾನವನ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆಯೂ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ್ ಹಾಗೂ ಪ್ರಾಧಿಕಾರದ ಸಿಬ್ಬಂದಿಯವರಾದ ಅಶೋಕ ಗಾಜಿ, ಸಂಗಮೇಶ ವಾಲೀಕಾರ,ಕುಮಾರಸ್ವಾಮಿ ಕುಲಕರ್ಣಿ,ಮಂಜು ,ಮಹೇಶ,ಗಣೇಶ, ಬಿಬ್ಬಣ್ಣ ಗಬ್ಬೂರು  ಉಪಸ್ಥಿತರಿದ್ದರು.