ಬಸವರಾಜ ಕರೇಗಾರ
ಶಹಾಪುರ,,
ಸಚಿವರ ಕಾಳಜಿಯಿಂದಾಗಿ ಶಹಪುರ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ಸಾಧ್ಯವಾದ ಮಟ್ಟಿಗೆ ಬಡವರಿಗೆ ಅನುಕೂಲವಾಗಲಿ ಎಂದು ಎಲ್ಲಾ ಸೌಲಭ್ಯಗಳನ್ನು ಯಾದಗಿರಿ ಉಸ್ತುವಾರಿ ಸಚಿವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅವರು ಒದಗಿಸಿಕೊಟ್ಟಿದ್ದಾರೆ. ಆಸ್ಪತ್ರೆಗೆ ಬೇಕಾದ ಅನುದಾನವನ್ನು ಕೆಕೆಆರ್ಡಿಬಿಯಿಂದ ನೀಡಿದ್ದು,ನಮ್ಮ ತಾಲೂಕು ಆಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು, ವೈದ್ಯರು, ಸಲಕರಣೆಗಳು ಇವೆ. ಸಾರ್ವಜನಿಕರ ಮತ್ತು ಸಂಘಟನೆಗಳ ಸಹಕಾರ ಮುಖ್ಯ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ಹೇಳಿದರು.

“ಸಚಿವ ಶರಣಬಸಪ್ಪಗೌಡ ದರ್ಶನಾಪುರ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ರವರು ಜೊತೆಗೆ ಆಸ್ಪತ್ರೆಯ ಅಭಿವೃದ್ದಿ ಕುರಿತು ಚರ್ಚಿಸುತ್ತಿರುವುದು.
*********
ತಾಲೂಕಿನ ಆಸ್ಪತ್ರೆಯಲ್ಲಿ ಮಾತನಾಡಿದ ಅವರು,ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳು ವೈದ್ಯರು ಸೇರಿದಂತೆ ಎಲ್ಲಾ ತಜ್ಞ ವೈದ್ಯರಿದ್ದು ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕ ಆಸ್ಪತ್ರೆ ಹೊಂದಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
********
*ತಾಯಿ ಮತ್ತು ಮಕ್ಕಳ ಆರೈಕೆ ಸೇವೆ*
•ಆಸ್ಪತ್ರೆಯಲ್ಲಿ ತಾಯಿ ಮಕ್ಕಳಿಗೆ ಸಂಬಂಧಿಸಿದಂತೆ ಇಬ್ಬರು ಹೆರಿಗೆ ತಜ್ಞ ವೈದ್ಯರು, ಇಬ್ಬರು ಮಕ್ಕಳ ವೈದ್ಯರು ಆಸ್ಪತ್ರೆಯ ಕರ್ತವ್ಯ ದಿನದ 24 ಗಂಟೆಗಳ ಕಾಲ ತಲಾ ಒಬ್ಬರಂತೆ ಹೆರಿಗೆ ವೈದ್ಯರು ಮತ್ತು ಮಕ್ಕಳ ತಜ್ಞರು ಕರ್ತವ್ಯ ನಿರ್ವಹಿಸುತ್ತಾರೆ.
•ತುರ್ತು ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ಪ್ರತಿದಿನ ಸಾಯಂಕಾಲ 4:30ಗಂ.ಯಿಂದ ರಾತ್ರಿ 11:00ಗಂ.ವರೆಗೆ ಎಂಓಯು ಪ್ರಕಾರ ಲಭ್ಯವಿರುವ ಸ್ಥಳೀಯ ಅರವಳಿಕೆ ತಜ್ಞರ ಸಹಾಯದಿಂದ ಮಾಡಲಾಗುತ್ತಿದೆ.

“Night caesarean delivery by dr vijayalaxmi -gynaecologist and dr savitramma-paediatrician and team”
********
•ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಗೆ ರೋಗಿಗಳು ಯಾವುದೇ ರೀತಿಯ ಹಣವನ್ನು ನೀಡುವಂತಿಲ್ಲ.
*********
*ಹೆರಿಗೆ ಶಸ್ತ್ರ ಚಿಕಿತ್ಸೆ ವ್ಯವಸ್ಥೆ(ಸಿಜರೀನ್ ಶಸ್ತ್ರ ಚಿಕಿತ್ಸೆ)*
* ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು (ಸಿಜೇರಿಯನ್)ಪ್ರತಿನಿತ್ಯ ಬೆ.9 ಗಂಟೆಯಿಂದ ಸಾಯಂಕಾಲ 4:30 ಗಂ.ವರೆಗೆ ಇನ್ನೋಂದು ತಂಡವು ನಮ್ಮ ಆಸ್ಪತ್ರೆಯ ಅರವಳಿಕೆ ತಜ್ಞರ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡವ ವ್ಯವಸ್ಥೆ ಮಾಡಲಾಗಿದೆ.

“Day time caesarian delivery by dr snehalata -gynaecologist and dr sharanreddy-anaesthesiologist and team”
**********
•ಗರ್ಭಿಣಿ ಸ್ತ್ರೀಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಯಾವುದೇ ಶುಲ್ಕವಿಲ್ಲದೆ ಬೆಳಗ್ಗೆ 9:00 ರಿಂದ ಸಾಯಂಕಾಲ 4:30ರ ವರೆಗೆ ಮಾಡಲಾಗುತ್ತದೆ.


” Ultrasound facility for delivery pts and general pts”
• ಪಿಎನ್ ಸಿ ವಾರ್ಡ್ ಮತ್ತು ಶಸ್ತ್ರಚಿಕಿತ್ಸಾ ನಂತರದ ಕೋಣೆಗಳನ್ನು ನವೀಕರಿಸಲಾಗಿದೆ.



“ಪಿಎನ್ ಸಿ ವಾರ್ಡ್ ಮತ್ತು ಶಸ್ತ್ರಚಿಕಿತ್ಸಾ ನಂತರದ ಕೋಣೆ”
*********
*ಮಹಿಳಾ ಸಂತಾನ ಹರಣ ಶಸ್ತ್ರಚಿಕಿತ್ಸಾ ವ್ಯವಸ್ಥೆ*
* ಉದರ ದರ್ಶಕ ಶಸ್ತ್ರ ಚಿಕಿತ್ಸೆ (ಲ್ಯಾಪ್ರೋಸ್ಕೋಪಿಕ್ ಟುಬೇಕ್ಟಮಿ) ಇದನ್ನು ಪ್ರತಿ ಶಿಬಿರದಲ್ಲಿ 10 ರೋಗಿಗಳಂತೆ ವಾರದಲ್ಲಿ ಎರಡು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.

” ಉದರ ದರ್ಶಕ ಮಹಿಳಾ ಸಂತಾನ ಹರಣ ಶಸ್ತ್ರ ಚಿಕಿತ್ಸೆ“

” ಉದರ ದರ್ಶಕ ಮಹಿಳಾ ಸಂತಾನ ಹರಣ ಶಸ್ತ್ರಚಿಕಿತ್ಸಾ (ಲ್ಯಾಪ್ರೋಸ್ಕೋಪಿಕ್ ಟುಬೇಕ್ಟಮಿ) ನಂತರದ ವಾರ್ಡ”
* ಓಪನ್ ಟುಬೇಕ್ಟಮಿಯನ್ನು ಸ್ತ್ರೀರೋಗ ತಜ್ಞರು ವಾರದಲ್ಲಿ ಆಯ್ದ ದಿನಗಳಲ್ಲಿ ಮಾಡಲಾಗುತ್ತದೆ.
***********
*ನವಜಾತ ಶಿಶು ಆರೈಕೆ ವಿಭಾಗ(ಎನ್ ಬಿ ಎಸ್ ಯು)*
* ಇದನ್ನು ನವೀಕರಿಸಿ ಹೆರಿಗೆ ಕೋಣೆ ವಿಭಾಗದಲ್ಲಿ ಸ್ಥಳಾಂತರಿಸಲಾಗಿದೆ.ಈ ವಿಭಾಗದಲ್ಲಿ ನವಜಾತ ಶಿಶುಗಳಿಗೆಂದೆ ಒಂದು ವಾರ್ಮರ್, ಐದು ಪೋಟೊ ತೆರಪಿ,ಒಂದು ಎಲೆಕ್ಟ್ರಾಕ್ ಸಕ್ಷನ್ ಮಿಷನ್ ವ್ಯವಸ್ಥೆ ಕಲ್ಪಿಸಲಾಗಿದೆ.

“ನವಜಾತ ಶಿಶು ಆರೈಕೆ ವಿಭಾಗ(ಎನ್ ಬಿ ಎಸ್ ಯು)”
* ಇದು ನವಜಾತ ಶಿಶುಗಳು ಮರಣ/ತೊಂದರೆಗಳ ಪ್ರಮಾಣ ಕಡಿಮೆ ಮಾಡಲು ಉಪಯೋಗವಾಗುತ್ತದೆ.
************
*ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ವ್ಯವಸ್ಥೆ*
•ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಹುಲ್ಕಲ್ ರವರು ಶಸ್ತ್ರಚಿಕಿತ್ಸಾ ತಜ್ಞರಾಗಿದ್ದು ಈ ಹಿಂದೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೋ ಅವರ ಸೇವೆ ಮುಂದುವರಿಯುತ್ತಿದೆ. ವಾರದಲ್ಲಿ ಎರಡರಿಂದ ಮೂರು ಸಾರಿ ಆಯ್ದ ದಿನಗಳಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮಾಡುತ್ತಿದ್ದಾರೆ ಮತ್ತು ವಾರದಲ್ಲಿ ಎರಡು ಬಾರಿ ಆಯ್ದ ದಿನಗಳಲ್ಲಿ ಉದರ ದರ್ಶಕ ಮಹಿಳಾ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಮುಂದುವರೆಸುತ್ತಿದ್ದಾರೆ.

“ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಹುಲ್ಕಲ್ ರವರು ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು”

“ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಹುಲ್ಕಲ್ ರವರು ಉದರ ದರ್ಶಕ ಮಹಿಳಾ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು”
********
*ನೇತ್ರ ವಿಭಾಗ ಮತ್ತು ದಂತ ವಿಭಾಗದ ವ್ಯವಸ್ಥೆ*
ಇತ್ತೀಚೆಗೆ ಸರಕಾರದ ವತಿಯಿಂದ ಕಣ್ಣಿನ ವಿಭಾಗಕ್ಕೆ ಮತ್ತು ದಂತ ವಿಭಾಗಕ್ಕೆ ಸಲಕರಣೆಗಳನ್ನು ಸರಬರಾಜು ಮಾಡಿರುವುದರಿಂದ ಕಣ್ಣಿನ ಮತ್ತು ದಂತ ವಿಭಾಗದ ಕೋಣೆಗಳನ್ನು ನವೀಕರಿಸಿ ಮೊದಲ ಮಹಡಿಯಲ್ಲಿ ಸ್ಥಳಾಂತರ ಗೊಳಿಸಲಾಗಿದೆ. ಸಾರ್ವಜನಿಕರು ಕಣ್ಣಿಗೆ ಮತ್ತು ದಂತಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತೋರಿಸಿಕೊಳ್ಳಬೇಕು ಎಂದು ತಿಳಿಸಿದರು.


” Upgraded ನೇತ್ರ ವಿಭಾಗದ ವ್ಯವಸ್ಥೆ-ಓಪಿಡಿ”

” Upgraded ದಂತ ವಿಭಾಗದ ವ್ಯವಸ್ಥೆ”
******
*ಎಲುಬು ಮತ್ತು ಕೀಲು ವಿಭಾಗದ ವ್ಯವಸ್ಥೆ*
* ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ವೈದ್ಯರಿದ್ದು ಈ ವಿಭಾಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಲಾಗಿದೆ. ಮೊದಲು ಎಲುಬು ಮತ್ತು ಕೀಲು ತಜ್ಞರಿದ್ದರೂ ಯಾವುದೇ ಶಸ್ತ್ರಚಿಕಿತ್ಸೆ ಮಾಡುತ್ತಿರಲಿಲ್ಲ.



“ಆಸ್ಪತ್ರೆಯಲ್ಲಿ ಡಾ॥ ಶರಣಗೌಡ ಹೊನ್ನಾಗೊಳ್ ಎಲುಬು ಮತ್ತು ಕೀಲು ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಿದ್ದು”
* ವಾರದಲ್ಲಿ ಪ್ರತಿ ಬುಧವಾರದಂದು ಅಂಗವಿಕಲರ ಯುಡಿಐಡಿ ಕಾರ್ಡಗಳನ್ನು ವಿತರಿಸಲಾಗುವುದು.
*************
*ವಿವಿಧ ಪರೀಕ್ಷೆಗಳ ವ್ಯವಸ್ಥೆ*

ವಿವಿಧ ಪರೀಕ್ಷೆಗಳ ವ್ಯವಸ್ಥೆ (upgraded bphu lab-new biochemistry machine installed)”
ಸರಕಾರಿ ಆಸ್ಪತ್ರೆಯಲ್ಲಿ ಸಿಬಿಸಿ,ಬ್ಲಡ್ ಗ್ರೂಪ್,ಹೆಚ್ಐವಿ,ಎಚ್ ಬಿ ಎಸ್ ಎಜಿ,ಆರ್ ಬಿಎಸ್, ಆರ್ ಎಫ್ ಟಿ,ಎಲ್ ಎಫ್ ಟಿ,ಹೆಚ್ ಬಿ ಎ-1ಸಿ,ಎಫ್ ಬಿ ಎಸ್,ಪಿಪಿಬಿಎಸ್,ಸಿ ಆರ್ ಪಿ,ಇಎಸ್ ಆರ್, ವೈಡಲ್,ಪಿಎಸ್ ಫಾರ್ ಎಂಪಿ, ಡೆಂಗ್ಯೂ,ಯುಪಿಟಿ,ಯುರೀನ್ ರೋಟೀನ್ ಮತ್ತು ಮೈಕ್ರೋಸ್ಕೋಪಿ,ಸ್ಟೂಲ್ ಎಕ್ಸಾಮಿನೇಷನ್, ಟಿಬಿಯ ಪರೀಕ್ಷೆ ,ಇಸಿಜಿ,ಎಕ್ಸರೆ,ಸಿಟಿ ಸ್ಕಾನ್,ಅಲ್ಟ್ರಾಸೌಂಡ್ ಸೇರಿದಂತೆ ಎಲ್ಲಾ ಪರೀಕ್ಷೆಗಳು ಲಭ್ಯವಿರುತ್ತವೆ(ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿರುತ್ತವೆ.ಮೇಲೆ ತಿಳಿಸಿದ ರಕ್ತ ಪರೀಕ್ಷೆಗಳು ಗರ್ಭಿಣಿ ಮಹಿಳೆಯರಿಗೆ ಮಾತ್ರ ರಾತ್ರಿ 11 ಗಂಟೆಯವರೆಗೆ ಪರೀಕ್ಷೆ ಮಾಡಲಾಗುತ್ತದೆ).
**************
*ಡಯಾಲಿಸಿಸ್ ವ್ಯವಸ್ಥೆ*



“ಡಯಾಲಿಸಿಸ್ ವ್ಯವಸ್ಥೆ (total 6 dialysis machines)”
* ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಗಳನ್ನು ಡಿಸಿಡಿಸಿ ಕಂಪನಿಯವರಿಗೆ ಟೆಂಡರ್ ನೀಡಲಾಗಿದ್ದು ಡಿಸಿಡಿಸಿ ಕಂಪನಿಯವರ ಎರಡು ಹೊಸ ಯಂತ್ರಗಳ ಜೊತೆಗೆ ನಮ್ಮಲ್ಲಿರುವ ನಾಲ್ಕು ಡಯಲಿಸಿಸ್ ಯಂತ್ರಗಳು ಸೇರಿಸಿ ಒಟ್ಟು ಆರು ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 5 ಡಯಾಲಿಸಿಸ್ ಯಂತ್ರಗಳನ್ನು ಜನರಲ್ ಕೇಸ್ ಗಳಿಗೆ ಮತ್ತು ಒಂದು ಡಯಾಲಿಸಿಸ್ ಯಂತ್ರವನ್ನು ಕಾಮಾಲೆ ರೋಗಿಗಳಿಗೆ ಮೀಸಲಿಡಲಾಗಿದೆ. ಡಯಾಲಿಸಿಸ್ ಸೇವೆ ಉಚಿತವಾಗಿದ್ದು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರಬೇಕಾಗುತ್ತದೆ.
***************
*24 ಗಂಟೆಗಳ ತುರ್ತು ಚಿಕಿತ್ಸಾ ವ್ಯವಸ್ಥೆ*
* ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸ್ಟೇಮಿ ಇಸಿಜಿ, ಇಂಜೆಕ್ಷನ್ ಟಿನೆಕ್ಟ್ ಪ್ಲೇಸ್ ಹಾಗೂ ಹುಚ್ಚುನಾಯಿ ಕಡಿತಕ್ಕೆ ರೇಬಿಸ್ ಲಸಿಕೆ ಹಾಗೂ ಇಮಿನೊಗ್ಲೊಬೂಲಿನ್ಸ್ ಹಾಗೂ ಹಾವು ಕಡಿತಕ್ಕೆ ಎಎಸ್ ವಿ ಹಾಗೂ ಗಾಯಕ್ಕೆ ಸಂಬಂಧಿಸಿದಂತೆ ಟಿಟಿ ಲಸಿಕೆ ಮಾಡಲಾಗುತ್ತದೆ.೨೪/೭ ಸಿಟಿ ಸ್ಕ್ಯಾನ್ ,ಟೆಲಿಐಸಿಯು,ಎಮ್ ಸಿ ಎಚ್ ಸೇವೆಗಳನ್ನು ಒದಗಿಸಲಾಗಿದೆ.
*********
*ಸಾರ್ವಜನಿಕರಲ್ಲಿ ವಿನಂತಿ*
* ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ಗಳನ್ನು ತರಬೇಕು.
* ಯಾರು ಕೂಡ ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ನೀಡಬಾರದು.ಯಾರಾದರು ನೀಡುವಂತೆ ಒತ್ತಾಯ ಮಾಡಿದರೆ ತಕ್ಷಣ ಆಡಳಿತ ವೈದ್ಯಾಧಿಕಾರಿ ಗಮನಕ್ಕೆ ತರಬೇಕು.
* ಯಾರಾದರೂ ಆಸ್ಪತ್ರೆಯ ಸಿಬ್ಬಂದಿಗಳು ಹಣಕ್ಕಾಗಿ ಬೇಡಿಕೆ ಇಟ್ಟರೆ ಆಸ್ಪತ್ರೆಯಲ್ಲಿ ಅಳವಡಿಸಿದ ಬ್ಯಾನರ್ ನಲ್ಲಿರುವ ಲೋಕಾಯುಕ್ತರ ದೂರವಾಣಿಗೆ ಕರೆ ಮಾಡಿ ತಿಳಿಸಬಹುದು.
* ಸಾರ್ವಜನಿಕರು ತಮಗೆ ಏನಾದರೂ ದೂರುಗಳಿದ್ದರೆ ಅಥವಾ ಸಲಹೆಗಳಿದ್ದಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ಕಂಪ್ಲೀಟ್/ ಸಲಹೆ ಬಾಕ್ಸ್ ನಲ್ಲಿ ತಿಳಿಸಬೇಕು.
* ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಶಾಂತಿಯುತವಾಗಿ ಸರದಿ ಪಾಳೆಯಲ್ಲಿ ನಿಂತು ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು..

*ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಶಸ್ತ್ರ ಚಿಕಿತ್ಸಾ ತಜ್ಞರು ಸಾರ್ವಜನಿಕ ಆಸ್ಪತ್ರೆ ಶಹಾಪುರ*.