
ಕಮಲಮ್ಮ ಗಂಡ ಕಾಶೀನಾಥ ಸ್ವಾಮಿ ಮುತ್ತಿನಪೆಂಡೆ ಹಿರೇಮಠ
*******************************
ರಾಯಚೂರು ::ಜಿಲ್ಲೆಯ ಜಿ. ಹನುಮಾಪುರ ಗ್ರಾಮದ
ಕಾಶೀನಾಥ ಸ್ವಾಮಿ ಮುತ್ತಿನಪೆಂಡೆ ಹಿರೇಮಠ ಅವರ ಪತ್ನಿ ಕಮಲಮ್ಮ (58) ರವರು ಇಂದು ನಿಧನರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಅನಾರೊಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು,ಪತಿ, ಐದು ಜನ ಪುತ್ರರು,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮುತ್ತಿನಪೆಂಡೆ ಹಿರೇಮಠದ ಬಂಧು ಮಿತ್ರರು ಹಾಗೂ ಅಪಾರ ಭಕ್ತ ವೃಂದದವರನ್ನು ಅಗಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಜಿ.ಹನುಮಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Post Views: 250