ಶಿಕ್ಷಣಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದು ಬೇಡ ಪ್ರತಿಭಟನೆ ನಿರತರ ಧರಣಿಗೆ ವಕೀಲರ ಸಂಘದ ಬೆಂಬಲ

ಶಹಾಪುರ,

ನಗರದಲ್ಲಿ ಸತತ ಐದು ದಿನಗಳಿಂದ ಕಾಲೇಜು ಶಿಕ್ಷಣ ಜಾಗದಲ್ಲಿ ಪ್ರಜಾಸೌಧ ಕಟ್ಟಡ ಕಟ್ಟಲು ಬೇಡವೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಿರಂತರ ಧರಣಿ ನಡೆಯುತ್ತಿದ್ದು ಇಂದು ಶಹಪುರ ತಾಲೂಕು ವಕೀಲರ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಸಂಘದ ಉಪಾಧ್ಯಕ್ಷರಾದ ವಾಸುದೇವ ಕಟ್ಟಿಮನಿ  ಮಾತನಾಡಿ, ಕಾಲೇಜು ಶಿಕ್ಷಣಕ್ಕಾಗಿ ಮೀಸಲಿರುವ ಈ ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದು ಬೇಡ. ಹಳೆಯ ತಹಶೀಲ್ ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದರಿಂದ ರೈತರು ಮಹಿಳೆಯರು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗಲಿದೆ.ಕಾಲೇಜು ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದನ್ನು ಕೈ ಬಿಡಬೇಕು. ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ತಂದೆಯವರಾದ ಬಾಪುಗೌಡ ದರ್ಶನಪುರವರು 88ಎಕರೆ ಜಮೀನನ್ನು ಶಿಕ್ಷಣಕ್ಕಾಗಿ ಪಡೆದುಕೊಂಡಿದ್ದರು. ಮುಂದಿನ ಯುವ ಪೀಳಿಗೆಗೆ ಈ ಸ್ಥಳ ಅನುಕೂಲಕರವಾಗಿದ್ದು ತಾಲೂಕಿಗೆ ಡಿಪ್ಲೋಮಾ, ಕಾನೂನು ಕಾಲೇಜು ಸೇರಿದಂತೆ ವೃತ್ತಿಪರ ಕಾಲೇಜಿಗಳನ್ನು ತನ್ನಿ.ಸುರಪುರದಲ್ಲಿ ಡಿಪ್ಲೋಮಾ,ಐಟಿಐ ಕಾಲೇಜಗಳಿವೆ. ನಮ್ಮಲ್ಲಿಯೂ ಕೂಡ ಡಿಪ್ಲೋಮೋ ಮತ್ತು ಐಟಿಐ ಕಾಲೇಜುಗಳನ್ನು ತನ್ನಿ.ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ಪ್ರಜಾಸೌಧ ನಿರ್ಮಾಣ ಮಾಡಿ ಎಂದು ಹೇಳಿದರು.
ವಕೀಲರಾದ ಚೇತನ ಕುಮಾರ ಮಾತನಾಡಿ, ಪ್ರಜಾಸೌಧ ಕಟ್ಟಡ ನಿರ್ಮಿಸಲು ಮೂರು ನೂರಕ್ಕೂ ಹೆಚ್ಚು ಗಿಡಮರಗಳನ್ನು ಕಡಿದಿದ್ದಾರೆ. ಪರಿಸರ ಪ್ರೇಮಿಗಳು ಎಲ್ಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕಾಲೇಜು ಶಿಕ್ಷಣ ಜಾಗದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ಕಟ್ಟಡಗಳೇ ನಿರ್ಮಿಸಬೇಕು. ಬೇರೆ ಕಟ್ಟಡಗಳನ್ನು ನಿರ್ಮಿಸಲು ಬಿಡುವುದಿಲ್ಲ ಎಂದರು.
ವಕೀಲರಾದ ವಿನೋದ ದೊರೆ ಮಾತನಾಡಿ,

2005-06ರಲ್ಲಿ ನಾನು ಕೂಡ ಈ ಕಾಲೇಜು ವಿದ್ಯಾರ್ಥಿಯಾಗಿದ್ದು, ವಕೀಲನಾಗಿದ್ದೇನೆ. ಶಿಕ್ಷಣಕ್ಕಾಗಿ ಮೀಸಿಲಿಟ್ಟ ಸ್ಥಳವಿದು. ಸಚಿವರು ಕೂಡ ಶಿಕ್ಷಣ ಪ್ರೇಮಿಗಳು. ಇಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದರಿಂದ ಅಂಗಡಿ ಮುಂಗಟ್ಟುಗಳು,ಸಂಘಟನೆಗಳಿಂದ ತೊಂದರೆಯಾಗುತ್ತದೆ. ಟೌನ್ ಹಾಲಿನಲ್ಲಿರುವ ಮುಂಭಾಗದ ರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಹೋಗುವುದಕ್ಕೆ ದಾರಿ ಮಾಡಿಕೊಡುವುದರಿಂದ ಅಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಡಾಬಾ ಗಳಿರುವುದರಿಂದ ವಿದ್ಯಾರ್ಥಿನಿಯರಿಗೂ ಕೂಡ ತೊಂದರೆಯಾಗುತ್ತದೆ. ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಪ್ರಜಾಸೌಧ ನಿರ್ಮಾಣಕ್ಕಾಗಿ  300 ರಿಂದ 350 ಗಿಡಗಳ ಮಾರಣಹೋಮವಾಗಿದೆ. ಇದರಿಂದ ಪರಿಸರಕ್ಕೆ ಹಾನಿಯಾಗಿದೆ. ಸಚಿವರು ಇದನ್ನು ಮನಗಾಣಬೇಕು. ತಕ್ಷಣವೇ ಪ್ರಜಾಸೌಧ ಕಟ್ಟಡ ಕೈಬಿಡಬೇಕೆಂದು ತಿಳಿಸಿದರು.
ಮಲ್ಲಿಕಾರ್ಜುನ ಮುಕ್ಕಲ್ ವಕೀಲರು ಮಾತನಾಡಿ,ಶಿಕ್ಷಣಕ್ಕೆ ಮೀಸಲಿಟ್ಟ ಜಾಗವಿದು. ಇಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದರಿಂದ ಎಲ್ಲಾ ರೀತಿಯಿಂದಲೂ ತೊಂದರೆ ಯಾಗುತ್ತದೆ. ಅಂಗಡಿ ಮುಂಗಟ್ಟುಗಳು ಹಾಗೂ ನಿರಂತರ ಧರಣಿಗಳು ನಡೆಯುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.ಅಹಿತಕರ ಕಾರ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಇದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ನೀವು ಪ್ರಜಾಸೌಧ ನಿರ್ಮಾಣ ಮಾಡಬೇಕಾದರೆ ಹಳೆಯ ತಹಸೀಲ್ ಸ್ಥಳದಲ್ಲಿ ನಿರ್ಮಾಣ ಮಾಡುವುದು ಉತ್ತಮ ಎಂದರು. ಶಿಕ್ಷಣ ಪ್ರೇಮಿಗಳಾದ ಸ್ಥಳೀಯ ಸಚಿವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ವೃತ್ತಿಪರ ಕಾಲೇಜುಗಳನ್ನು ಸ್ಥಾಪನೆ ಮಾಡಿ. ನಗರದಲ್ಲಿ ಸಾಕಷ್ಟು ಜಾಗವಿದೆ. ಯಾವುದಾದರೂ ಒಂದು ಜಾಗವನ್ನು ಆಯ್ಕೆ ಮಾಡಿ. ಕನ್ಯಾ ಕೋಳೂರಿಗೆ ಹೋಗುವ ಮಾರ್ಗದಲ್ಲಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜಿಗೆ ಬರುವುದಕ್ಕೆ ಯಾವುದೇ ವಾಹನಗಳಿಂದ ಸಿಟಿ ಸಂಚಾರ ಬಸ್ ಗಳಿಂದ ಪ್ರತಿ ದಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಡೆದುಕೊಂಡು ಬರಬೇಕಾಗುತ್ತದೆ. ಆದ್ದರಿಂದ ಕಾಲೇಜು ಈ ಸ್ಥಳದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಾಣ ಮಾಡುವುದರಿಂದ ಅನುಕೂಲವಾಗುತ್ತದೆ ತಿಳಿಸಿದರು.
ನಂತರ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ ಫಿರಂಗಿ, ಉಮೇಶ್ ಮುಡಗೋಳ , ಚಂದ್ರಶೇಖರ ಗೋಗಿ, ರಾಮಕೃಷ್ಣ ಹನುಮಂತ ಬೇಟೆಗಾರ, ಮಲ್ಲಿಕಾರ್ಜುನ ಪರಮೇಶ್ವರ, ಶರಣಪ್ಪ ಪ್ಯಾಟಿ, ಭೀಮಣ್ಣ ತಣಿಕೆದಾರ, ಸಂಜೀವ, ಜಯಚಂದ್ರ, ಮೌನೇಶ್ ಹಳಿಸಗರ, ಪಂಪಣ್ಣ,, ಶಿವಶೇಖರಪ್ಪ ಗುಂಡಪ್ಪ, ಮಹಾಂತೇಶ ವಕೀಲರು ಇದ್ದರು.