ಶಹಾಪುರ,
ಕಾಲೇಜು ಶಿಕ್ಷಣ ಜಾಗದಲ್ಲಿ ಪ್ರಜಾಸೌಧ ಕಟ್ಟಡ ಕಟ್ಟುವುದು ತರವಲ್ಲ. ಇಲ್ಲಿ ಪ್ರಜಾಸೌಧ ಕಟ್ಟಡ ಕಟ್ಟುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಇಲ್ಲಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.ಹಳಿಸಗರದ ಹಳೆಯ ತಹಸಿಲ್ದಾರ ಕಛೇರಿ ನಗರದ ಹೃದಯ ಭಾಗದಲ್ಲಿದೆ. 4 ಎಕರೆ ಜಾಗವಿದೆ. ಪ್ರಜಾಸೌಧ ನಿರ್ಮಾಣ ಮಾಡಿ.

ಅಲ್ಲಿ ಪ್ರಜಾಸೌಧ ಕಟ್ಟುವುದರಿಂದ ಸಾರ್ವಜನಿಕರಿಗೂ ಗ್ರಾಮೀಣ ಪ್ರದೇಶದ ಜನರಿಗೂ ಅನುಕೂಲವಾಗುತ್ತದೆ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಅಮಿನ್ ರೆಡ್ಡಿ ಯಾಳಗಿ ಹೇಳಿದರು. ರಾಜ್ಯ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾಲೇಜ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ತಹಶೀಲ್ದಾರರ ಮುಖಾಂತರ ಮನವಿ ಪುತ್ರ ಸಲ್ಲಿಸಿ ಮಾತನಾಡಿದ ಅವರ,
ಪ್ರಜಾಸೌಧ ನಿರ್ಮಾಣಕ್ಕಾಗಿ ಈಗಾಗಲೇ 3 ನೂರರಿಂದ ನಾಲ್ಕುನೂರು ಗಿಡಗಳನ್ನು ಕಡಿದಿದ್ದು ಪರಿಸರಕ್ಕೆ ಭಾರಿ ಪೆಟ್ಟು ಬಿದ್ದಿದೆ. ಪರಿಸರದ ದೃಷ್ಟಿಯಿಂದ ಶಿಕ್ಷಣಕ್ಕಾಗಿ ಮೀಸಲಾಗಿಟ್ಟ ಸ್ಥಳದಲ್ಲಿ, ಮುಂದಿನ ಯುವ ಪೀಳಿಗೆಗೆ ಹೊಡೆತ ಬೀಳುತ್ತದೆ. ಇಲ್ಲಿ ವೃತ್ತಿಪರ ಕೋರ್ಸ್ಗಳು,ಮೆಡಿಕಲ್ ಮತ್ತು ಇಂಜಿನಿಯರ್ ಕಾಲೇಜುಗಳನ್ನು ಕಟ್ಟುವುದು ಒಳಿತು.ಇಲ್ಲಿನ ರಾಜಕೀಯ ಪ್ರಭಾವಿ ರಾಜಕಾರಣಿಗಳ ಆಸ್ತಿಗಳು ಸುತ್ತ ಇರುವದರಿಂದ ಇಲ್ಲಿ ಪ್ರಜಾಸೌಧ ಕಟ್ಟುವುದರಿಂದ ಆಸ್ತಿಗಳಿಗೆ ಹೆಚ್ಚಿನ ಆದಾಯ ಪಡೆಯುವ ಉದ್ದೇಶದಿಂದ ಈ ಸ್ಥಳದಲ್ಲಿ ಪ್ರಜಾಸೌಧ ನಿರ್ಮಿಸಬೇಕೆಂದು ಪಣತೊಟ್ಟಿದ್ದಾರೆ.
ಹಳೆ ತಹಸೀಲ್ ಸ್ಥಳದಲ್ಲಿ ತಾಯಿ ಮಕ್ಕಳ ಶಿಶು ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುವುದರಂದ ಅಲ್ಲಿನ ಸುತ್ತಲಿನ ಬಡಾವಣೆಯ ಜನರಿಗೆ ತೊಂದರೆಯಾಗುತ್ತದೆ. ಆಸ್ಪತ್ರೆಯಿಂದ ಬರುವ ತ್ಯಾಜ್ಯ ವಸ್ತುಗಳಿಂದ ಪರಿಸರ ಮಾಲಿನ್ಯ ಉಂಟಾಗಿ ಸಾಂಕ್ರಾಮಿಕ ರೋಗಗಳು ಹರಡಬಹುದು. ಈಗಿನ ಸಾರ್ವಜನಿಕ ಆಸ್ಪತ್ರೆಯಲ್ಲಿಯೆ ಸಾಕಷ್ಟು ಸ್ಥಳವಿದ್ದು ಅಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಬಹುದು ಎಂದರು
ಕಾಲೇಜು ಶಿಕ್ಷಣ ಜಾಗದಲ್ಲಿ ಪ್ರಜಾಸೌಧ ಕಟ್ಟಲು ಮುಂದಾದರೆ ಬಿಜೆಪಿ ಪಕ್ಷದ ವತಿಯಿಂದ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು. ಜೊತೆಗೆ ನ್ಯಾಯಾಲಯದ ಮೊರೆಹೋಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪ್ರಜಾಸೌಧ ಆಡಳಿತ ಕಛೇರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದಲ್ಲಿ ಅಮೀನರಡ್ಡಿ ಯಾಳಗಿ ಅವರು ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.ಶಿಕ್ಷಣಕ್ಕೆ ಮೀಸಲಿಟ್ಟ ಜಾಗದಲ್ಲಿ ಕಟ್ಟಬೇಕೆಂಬ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಯಾಳಗಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಉಪಾಧ್ಯಕ್ಷರಾದ ಅಡಿವೆಪ್ಪ ಜಾಕಾ,ದೇವಿಂದ್ರಪ್ಪ ಕೋನೆರ, ಹಿರಿಯ ಮುಖಂಡರಾದ ರಾಜಶೇಖರ ಗೂಗಲ್, ಶಿವರಾಜ ಬಿ ದೇಶಮುಖ್ , ಮಲ್ಲಿಕಾರ್ಜುನ ಕಂದಕೂರ, ರಾಜುಗೌಡ ಪಾಟೀಲ ಉಕ್ಕಿನಾಳ, ಜಿಲ್ಲಾ ಕಾರ್ಯದರ್ಶಿ ದಾಮು ಪವಾರ, ಸೇರಿದಂತೆ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.