ಸಂತ ಕನಕದಾಸರ ದಾರ್ಶನಿಕ ವ್ಯಕ್ತಿತ್ವ ಪ್ರಭೆಯನ್ನು ಪಸರಿಸುವ ಪುಟ್ಟ ಪ್ರಯತ್ನ

ಸಂತ ಕನಕದಾಸರ ದಾರ್ಶನಿಕ ವ್ಯಕ್ತಿತ್ವ ಪ್ರಭೆಯನ್ನು ಪಸರಿಸುವ ಪುಟ್ಟ ಪ್ರಯತ್ನ

 ‌ ಮುಕ್ಕಣ್ಣ ಕರಿಗಾರ

ಆಯುಕ್ತರು

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕಾಗಿನೆಲೆ

 

ಸಂತಕವಿ ಕನಕದಾಸರ ಮೇರು ವ್ಯಕ್ತಿತ್ವವನ್ನು ನಾಡಿನಾದ್ಯಂತ ಪರಿಚಯಿಸಬೇಕು ‌ಎನ್ನುವ ಹಂಬಲದಿಂದ ಇಂದು ಅಂದರೆ ಡಿಸೆಂಬರ್ 11 ,2025 ರ ಗುರುವಾರದಂದು ಕನಕದಾಸರ ಸನ್ನಿಧಿಯಲ್ಲಿ ‘ ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ’ ಎನ್ನುವ ಕನಕದಾಸರ ಕೀರ್ತನೆಗಳಿಗೆ ಅರ್ಥವಿವರಣೆ ನೀಡುವ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದೆ.ಪ್ರತಿ ಗುರುವಾರ ಕನಕದಾಸರ ಒಂದೊಂದು ಕೀರ್ತನೆಗೆ ಅರ್ಥಹೇಳಲು ಉದ್ದೇಶಿಸಿದ ಈ ಕಾರ್ಯಕ್ರಮವು ಕನಕದಾಸರ ಮಹೋನ್ನತ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನವೂ ಹೌದು.

ಕನಕದಾಸರ ಗಣಪತಿ ಸ್ತುತಿ ಕೀರ್ತನೆಯಿಂದ ಕನಕದಾಸರ ಕೀರ್ತನೆಗಳ ಅರ್ಥಲೋಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು.ಪ್ರಾಧಿಕಾರದ ಸಂಶೋಧಕರಾದ ಡಾಕ್ಟರ್ ಜಗನ್ನಾಥ ಆರ್ ಗೇನಣ್ಣನವರ್ ‘ ನಮ್ಮಮ್ಮ ಶಾರದೆ’ ಎನ್ನುವ ಕೀರ್ತನೆಯನ್ನು ಹಾಡಿದರೆ ನಾನು ಆ ಕೀರ್ತನೆಯ ಅರ್ಥ ವಿವರಿಸಿದೆ.

ಪ್ರಾಧಿಕಾರದ ಕಾಗಿನೆಲೆ ಮತ್ತು ಬಾಡ ಗ್ರಾಮಗಳ ಸಿಬ್ಬಂದಿಯವರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಶಿಯನ್ ಅಶೋಕ ಗಾಜಿ ಸ್ವಾಗತಿಸಿದರೆ ಯಾತ್ರಿನಿವಾಸದ ಸ್ವಾಗತಕಾರ ಸಂಗಮೇಶ ವಂದನಾರ್ಪಣೆ ಸಲ್ಲಿಸಿದರು.ನನ್ನ ಆಪ್ತಸಹಾಯಕ ನವೀನ್ ಮತ್ತು ಕುಮಾರಸ್ವಾಮಿ ಕುಲಕರ್ಣಿ ಕಾರ್ಯಕ್ರಮ ಆಯೋಜಿಸಿದ್ದರೆ ವಿಜಯ್ ಬ್ಯಾಡಗಿ ಚಿತ್ರೀಕರಣ ಮಾಡಿದರು.