ಸಂವಿಧಾನ ಪ್ರಜ್ಞೆ ಪಸರಿಸುವ ಪುಟ್ಟ ಪ್ರಯತ್ನ

ಕಾಗಿನೆಲೆ :    ಕಾಗಿನೆಲೆಗೆ ತಮ್ಮ ಶಾಲಾ ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿರುವ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಶ್ರೀ ಶಿವಾನಂದ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಬೈಚಬಾಳ ಅವರು ಈ ಬೆಳಿಗ್ಗೆ ಕಾಗಿನೆಲೆಯ ಯಾತ್ರಿನಿವಾಸದಲ್ಲಿ ತಂಗಿರುವ ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಶಾಲಾ ಗ್ರಂಥಾಲಯಕ್ಕೆ ನನ್ನ ‘ ಸಂವಿಧಾನ ಪೀಠಿಕೆ’ ಮತ್ತಿತರರ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.ಮಕ್ಕಳಲ್ಲಿ ಸಂವಿಧಾನ ಪ್ರಜ್ಞೆ ಬಿತ್ತರಿಸುವ ಅಗತ್ಯದ ಬಗ್ಗೆ ಅವರಿಗೆ ಹೇಳಿದೆ.’ ಎಲ್ಲ ಪ್ರಜ್ಞೆಗಳಿಗಿಂತ ಇಂದು ನಮ್ಮ ಮಕ್ಕಳಲ್ಲಿ ಸಂವಿಧಾನ ಪ್ರಜ್ಞೆ ಬಿತ್ತುವ ಅಗತ್ಯ ಇದೆ’ ಎನ್ನುವ ವಿಷಯವನ್ನು ಅವರಿಗೆ ಮನದಟ್ಟು ಮಾಡಿಕೊಟ್ಟೆ. ಯಾತ್ರಿನಿವಾಸದ ಸ್ವಾಗತಕಾರ ಸಂಗಮೇಶ ಮತ್ತು ಪ್ರಾಧಿಕಾರದ ಫೋಟೋಗ್ರಾಫರ್ ವಿಜಯ್ ಬ್ಯಾಡಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.