ಕಾಗಿನೆಲೆಯಲ್ಲಿಂದು ಶೈವಮೂಲವನ್ನು ಹುಡುಕುತ್ತ….

ಕಾಗಿನೆಲೆಯಲ್ಲಿಂದು ಶೈವಮೂಲವನ್ನು ಹುಡುಕುತ್ತ….

         ಮುಕ್ಕಣ್ಣ ಕರಿಗಾರ

   ಕಾಗಿನೆಲೆಯು ಕನಕದಾಸರ ಕಾರಣದಿಂದ ಇಂದು ಜಗತ್ಪ್ರಸಿದ್ಧವಾಗಿದೆ.ಸಂತ ಕನಕದಾಸರ ಐಕ್ಯಸ್ಥಳವಾಗಿರುವ,ದಾರ್ಶನಿಕ ಕನಕದಾಸರ ಸಮಾಧಿಸ್ಥಳವಾಗಿರುವ ಕಾಗಿನೆಲೆಯು ಕರ್ನಾಟಕದ ದಾಸಸಾಹಿತ್ಯಪರಂಪರೆಯ ಮಹತ್ವದ ಸ್ಮಾರಕವಾಗಿ ಇಂದು ಪ್ರಸಿದ್ಧಿ ಪಡೆದಿದೆ.

ಆದರೆ ಕನಕದಾಸರ ಪೂರ್ವದಲ್ಲಿ ಕಾಗಿನೆಲೆಯು ಪ್ರಸಿದ್ಧ ಶೈವಕೇಂದ್ರವಾಗಿತ್ತು,ಅಗ್ರಹಾರವಾಗಿತ್ತು.ಇಂದು (27.11.2025) ಬೆಳಿಗ್ಗೆ ಪ್ರಾಧಿಕಾರದ ಸಂಶೋಧಕರಾದ ಡಾಕ್ಟರ್ ಜಗನ್ನಾಥ ಗೇನಣ್ಣನವರ್ ಅವರ ಜೊತೆಯಲ್ಲಿ ಕಾಗಿನೆಲೆ ಗ್ರಾಮದಲ್ಲಿ ಸಂಚಾರ ಕೈಗೊಂಡು ಶೈವಮೂಲವನ್ನು ಹುಡುಕತೊಡಗಿದೆ.ಕಾಗಿನೆಲೆಯು ಕಾಳಹಸ್ತೀಶ್ವರ,ಸೋಮೇಶ್ವರ,ಕರ್ಪೂರೇಶ್ವರ ,ಕಲ್ಲೇಶ್ವರ ಮತ್ತು ಮಳೆಮಲ್ಲೇಶ್ವರ ಎನ್ನುವ ಐದು ಲಿಂಗಗಳ ಪಂಚಲಿಂಗಗ್ರಾಮವಾಗಿತ್ತು ಹಿಂದೆ.ಈ ದೇವಸ್ಥಾನಗಳ ಬಳಿ ವೀರಭದ್ರೇಶ್ವರ ದೇವಸ್ಥಾನವೂ ಇದೆ.