ಕನಕದಾಸರ ತೈಲಚಿತ್ರ ಆಲ್ಬಮ್ ಸಮರ್ಪಣೆ

ಹಾವೇರಿ : ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದ ಶಿಲ್ಪಕಲಾಕುಟೀರದ ಕಲಾವಿದ ಶ್ರೀ ರಾಜಹರ್ಷ ಸೊಲಬಕ್ಕನವರ್ ಅವರು ಕನಕದಾಸರ ಜೀವನ ಆಧಾರಿತ ತೈಲವರ್ಣ ಚಿತ್ರಗುಚ್ಛ ನಿರ್ಮಿಸಿದ್ದು ಕನಕ ಪರಿಸರ ಸ್ನೇಹಿ ಉದ್ಯಾನವನದ ಕನಕಲೋಕದಲ್ಲಿ  ಒಳಾಂಗಣ ಶಿಲ್ಪಸಂಗ್ರಹಣಾಲಯವನ್ನಾಗಿ ರೂಪಿಸಿಲು ಉದ್ದೇಶಿಸಿದೆ.ಉದ್ದೇಶಿತ ಮಾದರಿಯ ಪ್ರತಿಯನ್ನು ರಾಜಹರ್ಷ ಅವರಿಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಛೇರಿಗೆ ಭೇಟಿ ನೀಡಿ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರಿಗೆ ನೀಡಿದರು.