ಶಹಾಪುರ::ಅಚ್ಚರಿ ಮೂಡಿಸಿದ ಬೋರ್ ವೆಲ್ ಬಿಸಿ ನೀರಿನ ಬುಗ್ಗೆ

 

ಸುದ್ದಿ:ಬಸವರಾಜ ಸಿನ್ನೂರ

 

“ಶಹಾಪುರ ನಗರದ ಗಂಗಾನಗರ ಮನೆಯೊಂದರಲ್ಲಿ ಬೋರ್ ವೆಲ್ ನಲ್ಲಿ ಬಿಸಿನೀರು ಬರುತ್ತಿರುವುದು”

ಶಹಾಪುರ : ಪ್ರಪಂಚದ ಎಲ್ಲಾ ಭೂಖಂಡಗಳಲ್ಲೂ ಬಿಸಿನೀರಿನ ಬುಗ್ಗೆಗಳಿವೆ. ಅದರಲ್ಲಿ ಹೆಚ್ಚಾಗಿ ಐಸ್ ಲ್ಯಾಂಡ್, ನ್ಯೂಜಿಲ್ಯಾಂಡ್ ಹಾಗೂ ಪಶ್ಚಿಮ ಅಮೇರಿಕಗಳಲ್ಲಿ ಬಿಸಿನೀರಿನ ಬುಗ್ಗೆಗಳು ಹೆಚ್ಚಾಗಿ ಕಾಣಸಿಗುತ್ತವೆ. ಅದರಂತೆ ಅಚ್ಚರಿಯಾದರೂ ಕೂಡ ಜಿಲ್ಲೆಯ ಶಹಾಪುರ ನಗರದ ಗಂಗಾನಗರ ಮನೆಯೊಂದರಲ್ಲಿ ಕೊರೆಸಿದ ಬೋರವೆಲ್ ನಲ್ಲಿ ಬಿಸಿ ನೀರು ಬರುತ್ತಿದ್ದು ನೋಡುಗರನ್ನ ಹಚ್ಚರಿಯನ್ನಾಗಿಸಿದೆ. ಈ ಬಿಸಿನೀರು ಅಂದಾಜು 50′ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿದೆ ಎಂದು ಹೇಳಲಾಗುತ್ತಿದೆ!

ಇದಕ್ಕೆಲ್ಲಾ ಕಾರಣ ಭೂಮಿಯ ಆಳಕ್ಕೆ ಹೋದಂತೆಲ್ಲ ಉಷ್ಣತೆ ಹೆಚ್ಚಾಗುತ್ತದೆ,ಭೂಮಿಯ ಮೇಲೆ ಬಿದ್ದ ನೀರು ಹಾಸುಬಂಡೆಗಳ ಸ್ತರದಲ್ಲಿ ಹಾಯ್ದು ಆಳದಲ್ಲಿರುವ ಒಂದು ಗುಂಡಿಯಲ್ಲಿ ಸಂಗ್ರಹವಾಗುತ್ತವೆ ಆಗ ಭೂಮಿಯ ಆಳದಲ್ಲಿರುವ ಉಷ್ಣತೆಯಿಂದ ನೀರು ಕುದಿಯುತ್ತದೆ.ಆಗ ಭೂಮಿಯಿಂದ ನೀರನ್ನು ಹೊರಗೆಡವಿದಾಗ ಬಿಸಿನೀರಿನ ಬುಗ್ಗೆಗಳಾಗಿ ಮಾರ್ಪಾಡಾಗುತ್ತವೆ.

 

ಬಿಸಿನೀರಿನ ಬುಗ್ಗೆಗಳಲ್ಲಿ ಗಂಧಕ (ಸಲ್ಫರ್) ಪ್ರಮಾಣ ಹೆಚ್ಚಿದ್ದು ಪ್ರಪಂಚದ ವಿವಿಧೆಡೆ ಇಂಥ ನೀರಿನಲ್ಲಿ ಸ್ನಾನ ಮಾಡುವುದು ವಾಡಿಕೆಯಾಗಿದೆ.ಮನೆಯಲ್ಲಿ ಸ್ನಾನಕ್ಕಾಗಿ ಬಿಸಿ ನೀರು ಕಾಯಿಸುವ ಅಗತ್ಯವಿಲ್ಲ ಅಷ್ಟೊಂದು ಬಿಸಿಯಾಗಿವೆ ಎಂದು ಹೇಳುತ್ತಾರೆ ಮನೆಯ ಯಜಮಾನ ಮಲ್ಲಣ್ಣ ದೊಡ್ಮನಿಯವರು.ಆದರೆ ಈ ಬೋರ್ ವೆಲ್ ನಲ್ಲಿ ಬಿಸಿನೀರು ಬರುವುದರಿಂದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.ಇಂಥ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮವ್ಯಾಧಿ ಹಾಗೂ ಇನ್ನಿತರ ರೋಗಗಳಿಂದ ಗುಣಮುಖರಾಗಬಹುದು ಎಂಬ ನಂಬಿಕೆ ಜನರಲ್ಲಿದೆ. ಆದರೆ ಇದನ್ನು ಇದರ ಪೂರಕವಾಗಿ ಸಂಬಂಧಪಟ್ಟ ಭೂ ವಿಜ್ಞಾನಿಗಳು ಏನು ಹೇಳುತ್ತಾರೆ ಎಂಬುವದನ್ನು ಬರುವ ವರದಿಗಾಗಿ ಕಾದು ನೋಡಬೇಕಾಗಿದೆ.

About The Author