ಯಾರ್ ರಿ ಇವ್ನು ರೋಹಿತ್ ಚಕ್ರತೀರ್ಥ? ಆ ಒಂಬತ್ತು ಜನ ಯಾರು?8 ಮಂದಿ ಒಂದೇ ಜಾತಿಗೆ ಸೇರಿದವ್ರು; ಬಿಜೆಪಿ ಸರ್ಕಾರಕ್ಕೆ ನೀರಿಳಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್

 

ಕೃಪೆ: ನ್ಯೂಸ್ ಅಲಾರ್ಟ್ 

ಮೈಸೂರು:ಏನ್ರೀ ಇದು ಒಬ್ಬ ಪ್ರೈವೇಟ್ ಕೋಚಿಂಗ್ ಸೆಂಟರ್ ನಡೆಸ್ತಿರೋನಿಗೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ..ಬುದ್ದಿ ಏನಾದ್ರೂ ಇದೇಯಾ ಸರ್ಕಾರಕ್ಕೆ? ಸುರೇಶ್‌ ಕುಮಾರ್‌ ಮಾಡಿ ಹೋಗಿದ್ದಂತೆ ಇದು..ನೋಡಿ ಮಾತನಾಡುತ್ತಿಲ್ಲ ಮನುಷ್ಯಾ ಇವತ್ತು..ಸುರೇಶ್‌ ಕುಮಾರ್‌ ?ಎಂದು ಬಿಜೆಪಿ ಸರ್ಕಾರದ ಹಾಗೂ ರೋಹಿತ್ ಚಕ್ರತೀರ್ಥ ವಿರುದ್ಧ ಬಿಜೆಪಿ MLC ಎಚ್ .ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅದರಲ್ಲೂ ಸಮಿತಿಯಲ್ಲಿ 9 ಜನ.ಯಾರು ಇವರು?.ಇವರ ಶೈಕ್ಷಣಿಕ ಹಿನ್ನೆಲೆ ಏನು? ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರಾ?,ಟೀಚರ್‌ ಆಗಿ ಕೆಲಸ ಮಾಡಿದ್ದೀರಾ?,ಪೋಷಕರಾಗಿ ಕೆಲಸ ಮಾಡಿದ್ದೀರಾ?,ಯಾರು ಇವ್ರು..?ಅದರಲ್ಲೂ 9 ಜನಗಳಲ್ಲಿ 8 ಜನರು ಒಂದೇ ಜಾತಿಗೆ ಸೇರಿದವರು.ಎಲ್ಲದ್ರು ಉಂಟೆನ್ರೀ.? ಎಂದು ಖಾರವಾಗಿ ಪ್ರಶ್ನಿಸಿದರು.

ಇನ್ನು ಆ ಕಮಿಟಿಯಲ್ಲಿ ಎಲ್ಲರೂ ಇರಬೇಕು.ಜಾತ್ಯಾತೀಯ ವ್ಯವಸ್ಥೆಯ ಭಾರತದ ಸ್ಪಂದನ ಆ ಕಮಿಟಿಯಲ್ಲಿರಬೇಕು.ಅಲ್ಲದೆ,ಹಿಂದೂಗಳು,ಮುಸ್ಲಿಂ ,ಕ್ರಿಶ್ಚಿಯನ್ನರು,ಹಿಂದುಳಿದ ವರ್ಗದವರು,ದಲಿತರು ಎಲ್ಲರೂ ಈ ಕಮಿಟಿಯಲ್ಲಿರಬೇಕು.ಆದರೆ ಈಗ ಯಾರೀದಾರೆ ಎಂದು ಪ್ರಶ್ನಿಸಿದರು.

ಇದೇ ವೇಳೆ ವಿಶ್ವನಾಥ್‌,ಬರಗೂರು ರಾಮಚಂದ್ರಪ್ಪ ಎಂಬ ವಿದ್ವಾಂಸರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದರು.ಆದರೆ ಈಗ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಹಿನ್ನೆಲೆ ಏನು ಅಂತಾ ಕಿಡಿಕಾರಿದರು.

About The Author