ಶಹಾಪುರ:ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ತಲುಪಿಸಿ. ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ಯಾರೂ ಹೊರಗುಳಿಯಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಅಧಿಕಾರಿಗಳಿಗೆ ಹೇಳಿದರು.
ತಾಲೂಕ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಡೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು, ಅನೇಕರಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ತಿಳಿ ಹೇಳಿದರು.
ತಾಲೂಕಿನ ನಗರ ಪ್ರದೇಶದಲ್ಲಿ 18, ಗ್ರಾಮೀಣ ಪ್ರದೇಶದಲ್ಲಿ 62 ಸೇರಿ 80 ಪಡಿತರ ವಿತರಣಾ ಅಂಗಡಿಗಳಿದ್ದು, 5856 ಅಂತ್ಯೋದಯ, 48902 ಬಿಪಿಎಲ್ ಹಾಗೂ 4469 ಎಪಿಎಲ್ ಸೇರಿ ಒಟ್ಟು 59227 ಪಡಿತರ ಚೀಟಿಗಳಿಂದ 242522 ಫಲಾನುಭವಿಗಳು ಸರಕಾರದ ಪಂಚ ಗ್ಯಾರಂಟಿ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಗೃಹ ಲಕ್ಷಿ ಯೋಜನೆಯಡಿ ತಾಲೂಕಿನಲ್ಲಿ 54180 ಜನ ಫಲಾನುಭವಿಗಳು ನೋಂದಣಿಯಾಗಿದ್ದು, 52635 ಜನರಿಗೆ ಸಹಾಯಧನ ಜಮೆಯಾಗಿದ್ದು, ತಪ್ಪಾಗಿ ಇಕೆವೈಸಿ, ಎನ್‌ಪಿಸಿಐ ಆಗದೆ ಇರುವುದು, ಮೃತರಾದವು, ಐಟಿ, ಜಿಎಸ್‌ಟಿ, ಸಿಡಿಪಿಒ ತಿರಸ್ಕೃತ ಹಾಗೂ ಪರಿಶೀಲನ ಹಂತದಲ್ಲಿರುವ 1545 ಜನ ಫಲಾನುಭವಿಗಳಿಗೆ ವಿವಿಧ ಕಾರಣಗಳಿಂದ ಮಾಸಿಕ ಹಣ ವರ್ಗಾವಣೆಯಾಗುತ್ತಿಲ್ಲ ಎಂದರು.ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯ ಅನುಷ್ಟಾನದ ಕುರಿತು ಪ್ರಗತಿ ಪರಿಶೀಲಿಸಿದರು.
ತಾಲೂಕ ಪಂಚಾಯತ ಇಓ ಬಸವರಾಜ ಶರಬೈ,ವ್ಯವಸ್ಥಾಪಕ ಅಮರೇಶ, ಯೋಜನೆ ಸದಸ್ಯರಾದ ಶರಣಗೌಡ ಅಣಬಿ, ರಮೇಶ ಗುರಿಕಾರ, ಬಸಣ್ಣಗೌಡ, ಮೌನೇಶ ಶಟ್ಟಿಕೇರಾ, ಚನ್ನಬಸಪ್ಪ ಜಾಯಿ, ಬಸವರಾಜ ಕಂದಳ್ಳಿ, ರಾಯಪ್ಪ ಹೊಸಮನಿ, ತಾಯಮ್ಮ ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.