ವರ್ಷತುಂಬಿತಿಂದು ‘ ನಿತ್ಯಾ’ ಳಿಗೆ
ನನ್ನ ಎರಡನೇ ಮಗಳಿಗೆ.
ತಾಯಿ ದುರ್ಗೆಯ ಎರಡನೆಯ ಕೊಡುಗೆಯಾಗಿ
ಬಂದವಳಿಗೆ
ನಿತ್ಯವಸ್ತುವಿನ ನಿಜನಾಮರೂಪಳಿಗೆ
ಸತ್ತುಚಿತ್ತುಆನಂದಗಳ ಮೈವೆತ್ತವಳಿಗೆ
ಲೋಕಮಾತೆಯ ಬೆಡಗಾಗಿ
ಉಡುಗೊರೆಯಾಗಿ ಬಂದವಳಿಗೆ

ನಡೆನುಡಿಗಳಲ್ಲಿ ಬೆಳದಿಂಗಳು ಚೆಲ್ಲುವವಳಿಗೆ
ವರ್ಷತುಂಬಿತು ಹರ್ಷದಕಡಲಿಗೆ
ವರ್ಷತುಂಬಿತು ನಿತ್ಯೋತ್ಸಾಹದ ಒಡಲಿಗೆ
ವರ್ಷತುಂಬಿತು ಮನುಷ್ಯರ ಕಪಟ- ಕುತ್ಸಿತಗಳ
ನಡುವೆ ದೈವವೇ ಗೆಲ್ವದೆಂದು ಸಾರಿದವಳಿಗೆ.
ವರ್ಷತುಂಬಿತು ಶುಭಕಾರಿಣಿಗೆ
ವರ್ಷತುಂಬಿತು ಮಂಗಳಕಾರಿಣಿಗೆ
ವರ್ಷತುಂಬಿತು ನಿತ್ಯಾನಂದದ ಬೆಳಕ
ಲೋಕಕ್ಕೆ ಪಸರಿಸಬಂದವಳಿಗೆ.
ವರ್ಷತುಂಬಿತು ವಿಶ್ವೇಶ್ವರನಸುತ ‘ಮುಕ್ಕಣ್ಣ’ನ
ಮನ ಮನೆಗಳ ಬೆಳಗಿದ ಬಾಲೆಗೆ,ನಿತ್ಯಾಳಿಗೆ.
27.05.2022