ಬಸವರಾಜ ಕರೇಗಾರ
ಶಹಾಪುರ,,
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿ ನೆಲೆಯೂರಿ ಪಕ್ಷದ ಏಳಿಗೆಗಾಗಿ ದುಡಿದು ಹಲವು ಸ್ಥಾನಮಾನಗಳನ್ನು ಅಲಂಕರಿಸುವುದೆಂದರೆ ಕಷ್ಟದ ಕೆಲಸ. ಕೆಲವು ನಾಯಕರು ತಮ್ಮ ತಂದೆ ಮತ್ತು ತಾತನವರ ಪ್ರಭಾವದಿಂದ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಯಾರ ಸಹಕಾರವಿಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ದುಡಿದು ಹಲವು ವರ್ಷಗಳ ಕಾಲ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷಕ್ಕಾಗಿ ದುಡಿದು 2023 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೆ ನಡೆದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದವರು ನಿಖಿಲ್ ವಿ. ಶಂಕರ್.
* ನಿಖಿಲ್ ವಿ ಶಂಕರ್ ಅವರ ತಂದೆ ವಿ. ಶಂಕರ್ ಐಎಎಸ್ ಅಧಿಕಾರಿಯಾಗಿ ಸಾಮಾನ್ಯ ಜನರಲ್ಲಿ ಬೆರೆತು ಸಾಮಾನ್ಯರಂತೆ ಬದುಕಿ ಅಧಿಕಾರಿಗಳಾಗಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡಿದ್ದರು. ವಿ ಶಂಕರ್ ಅವರ ಮಗನೇ ನಿಖಿಲ್ ವಿ. ಶಂಕರ್. ತಂದೆಯಂತೆ ಸರಕಾರಿ ಅಧಿಕಾರಿಯಾಗಿ ನೌಕರನಾಗಿ ಕೆಲಸ ಮಾಡಬಹುದು. ಆದರೆ ಸರಕಾರಿ ನೌಕರಿಯಲ್ಲಿ ಕೆಲವೇ ಜನರ ಸೇವೆಗೈಯುವುದಕ್ಕಿಂತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಜನರಲ್ಲಿ ಬೆರೆತು ಸಹಾಯ ಸಹಕಾರದಿಂದ ಜನರ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಪರಿಹರಿಸಿ ಜನನಾಯಕರಾಗಬಹುದು ಎನ್ನುವ ಸದುದ್ದೇಶದಿಂದ ರಾಜಕೀಯಕ್ಕೆ ಇಣುಕಿದರು.
ಸರ್ವಧರ್ಮ, ಜಾತ್ಯತೀತತೆಯ ವ್ಯಕ್ತಿ ನಿಖಿಲ ವಿ ಶಂಕರ್. 2021 ರಲ್ಲಿ ರಾಜ್ಯ ಕಾಂಗ್ರೆಸ್ ಯುವ ಘಟಕದ ಚುನಾವಣೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಐಎಎಸ್ ಅಧಿಕಾರಿ ವಿ ಶಂಕರ್ ಯಾದಗಿರಿ ಜಿಲ್ಲೆಯಲ್ಲಿ ಅಪಾರ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದಾಗ ಅವರು ಮಾಡಿದ ಜನಪರ ಕೆಲಸಗಳು ನಿಖಿಲ್ ವಿ ಶಂಕರ್ ಅವರ ಗಮನ ಸೆಳೆಯಿತು. ಅದರ ಪ್ರಯುಕ್ತ ಯಾದಗಿರಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಆರಂಭಿಸಿದರು.ಸ್ವತಂತ್ರ ಹೋರಾಟ ನಾಯಕ ಕೊಲೂರು ಮಲ್ಲಪ್ಪಾಜಿಯವರ ಇತಿಹಾಸವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು.
ಅವರ ಸಮಾಧಿಯನ್ನು ತಮ್ಮ ಸ್ವಂತ ಹಣದಿಂದ ಸ್ಮಾರಕವನ್ನಾಗಿಸಿದರು. ಇಂತಹ ಹಲವಾರು ಜನಪರ ಕಾರ್ಯಗೈದರು. ರಾಜ್ಯಾದ್ಯಂತ ಶೈಕ್ಷಣಿಕವಾಗಿ ಧಾರ್ಮಿಕ ಕಾರ್ಯಗಳಿಗೆ ಶಿಕ್ಷಣಕ್ಕಾಗಿ ಬಡವರಿಗೆ ಹಲವಾರು ಬಾರಿ
ಸಹಾಯ ಮಾಡಿದ್ದಾರೆ.
ಕಲ್ಬುರ್ಗಿಯ ವಸತಿ ನಿಲಯದಲ್ಲಿ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 39 ಸಾವಿರ ವಿದ್ಯುತ್ ಬಿಲ್ ಕಟ್ಟಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರು. ಸುರಪುರದ ಕನಕ ಭವನಕ್ಕೆ 30 ಲಕ್ಷ ದೇಣಿಗೆ ನೀಡಿದರು.ವಡಗೇರದ ಹಂಚಿನಾಳ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಲಕ್ಷ ದೇಣಿಗೆ ನೀಡಿದರು.ಶಹಾಪುರದ ಭೀಮಕವಿಯ ಸಮಾಧಿ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು.ರಾಜ್ಯಾದ್ಯಂತ ಬಡವರಿಗೆ ಕಲಾವಿದರಿಗೆ ಹಣದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಬೆಂಗಳೂರಿನ ಬೀರಲಿಂಗೇಶ್ವರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಇಂತಹ ಜನಪರ ಕೆಲಸಗಳನ್ನು ಅರಿತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನಿಖಿಲ್ ವಿ. ಶಂಕರ್ ಅವರನ್ನು ಗುರುತಿಸಿ 2023 ರಲ್ಲಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು. 2024ರಲ್ಲಿ ಕಾಂಗ್ರೆಸ್ ಯುವ ಘಟಕದಕ್ಕೆ ನಡೆದ ಚುನಾವಣೆಯಲ್ಲಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸ್ವಲ್ಪದರಲ್ಲಿಯೆ ಟಿಕೆಟ್ ತಪ್ಪಿತು.ಇದನ್ನು ಮನಸ್ಸಿಗೆ ತೆಗೆದುಕೊಳ್ಳದ ನಿಖಿಲ್ ವಿ ಶಂಕರ್ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜನನಾಯಕರಾಗಲಿ ಎನ್ನುವ ಬಲವಾದ ನಂಬಿಕೆ ಈ ಕ್ಷೇತ್ರದ ಜನರ ಮನದಲ್ಲಿದೆ.