ಶಹಾಪುರ : ಕೊಪ್ಪಳದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ ದತ್ತಿನಿಧಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಶಹಾಪುರದ ಹಿರಿಯ ಪತ್ರಕರ್ತ ಟಿ. ನಾಗೇಂದ್ರ ಅವರಿಗೆ ಕೆ.ಯು. ಡಬ್ಲ್ಯೂ.ಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮುಂತಾದವರು ಪ್ರಶಸ್ತಿ ಪ್ರಧಾನ ಮಾಡಿದರು.ಪ್ರಶಸ್ತಿ ಪುರಸ್ಕೃತರಾದ ಟ.ನಾಗೇಂದ್ರ ಅವರಿಗೆ ಶಹಾಪುರ ತಾಲೂಕ ಹಾಗೂ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ರಾಘವೇಂದ್ರ ಕಾಮನಟಗಿ,ಪತ್ರಕರ್ತರಾದ ನಾರಾಯಣಚಾರ್ಯ ಸಗರ, ಮಲ್ಲಯ್ಯ ಪೊಲಂಪಲ್ಲಿ, ವಿಶಾಲ ಶಿಂಧೆ, ಬಸವರಾಜ ಸಿನ್ನೂರ, ಮಹೇಶ್ ಪತ್ತಾರ, ಡಾ.ರಾಘವೇಂದ್ರ ಹಾರಣಗೇರಾ, ಈರಣ್ಣ ಹಾದಿಮನಿ, ವೆಂಕಟೇಶ ಆಲೂರು, ಚಂದ್ರು ಕಟ್ಟಿಮನಿ ಮುಂಖಂಡರಾದ ಯಲ್ಲಯ್ಯ ನಾಯಕ, ವಸಂತ ಸುರಪುರಕರ್, ಮಾನಪ್ಪ ಹಡಪದ, ಮಾನಯ್ಯ, ಸಂಕೇತ ಮುಂತಾದವರು ಉಪಸ್ಥಿತರಿದ್ದರು.