ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಓ ಅಮಾನತ್ತಿಗಾಗಿ ಧರಣಿ

ಶಹಾಪುರ : ನಗರದ ತಾಲೂಕು ಪಂಚಾಯಿತಿ ಮುಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಅವರು ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರನ್ನು ಕಚೇರಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿರುವುದಾಗಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು. 1989ರ ಅನುಸೂಚಿತ ಬುಡಕಟ್ಟು ದೌರ್ಜನ್ಯ ಕಾಯ್ದೆಯಲ್ಲಿ ಕೇಸ್ ದಾಖಲಿಸಬೇಕು. ತಾಲೂಕು ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.ಕೂಲಿ ಕಾರ್ಮಿಕರಿಗೆ ವೇತನ ಸಿಗುತ್ತಿಲ್ಲ‌. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನತಾ ಮನೆಗಳಿಗೆ ಪ್ರತಿ ಮನೆಗೆ ಮಂಜೂರಾತಿಗಾಗಿ ಹಣ ತೆಗೆದುಕೊಳ್ಳುತ್ತಿದ್ದಾರೆ.ಇಓ ಗುಂಡಾವರ್ತನೆ ಪ್ರದರ್ಶಿಸುತ್ತಿದ್ದಾರೆ.ಸ್ಪಂಧನೆ ದೊರೆಯುತ್ತಿಲ್ಲ. ಹೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡುವಂತೆ ಜಿಲ್ಲಾ ಉಪ ಕಾರ್ಯದರ್ಶಿಗಳವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಶಿವಪುತ್ರ ಜವಳಿ, ಶರಣು ದೋರನಹಳ್ಳಿ, ಶಿವು ದೋರನಹಳ್ಳಿ, ಡಿಎಸ್ಎಸ್ ಸಂಯೋಜಕ ಬಣದ ಜಿಲ್ಲಾಧ್ಯಕ್ಷ ರಾಯಪ್ಪ ಸಾಲಿಮನಿ, ಶೇಖರ್ ಬಡಿಗೇರ್, ಪ್ರದೀಪ್ ಅಣಬಿ, ಮೌನೇಶ್, ಸಿದ್ದು ಮುಂಡಾಸ್, ಮರೆಪ್ಪ ಕ್ರಾಂತಿ, ಸಂತೋಷ್ ಗೋಗಿ, ಅಯ್ಯಪ್ಪ ಗೊಂದೆನೂರು ಸೇರಿದಂತೆ ಇತರರು ಇದ್ದರು.