ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ : 66 ಜನರಿಂದ ರಕ್ತದಾನ

ಶಹಾಪುರ : 76ನೇ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಅಂಗವಾಗಿ ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕ ನೌಕರರ ಸಂಘ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಕ್ತದಾನದಿಂದ ಹಲವಾರು ಜನರ ಪ್ರಾಣ ಉಳಿಸಬಹುದು. ಒಂದು ಹನಿ ರಕ್ತ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುತ್ತದೆ. ರಕ್ತದಾನ ಮಹಾದಾನವಾಗಿದ್ದು ರಕ್ತದಾನ ಮತ್ತೊಬ್ಬರಿಗೆ ಜೀವ ನೀಡುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷರಾದ ರಾಯಪ್ಪ ಚೆಲುವಾದಿ ಹೇಳಿದರು. ಒಬ್ಬ ಮಹಿಳೆ ಸೇರಿದಂತೆ 66 ಜನ ಯುವಕರು ರಕ್ತದಾನ ಮಾಡಿದರು.

ಶಿಬಿರದಲ್ಲಿ ತಾಲೂಕು ಆಡಳಿತ ಅಧಿಕಾರಿ ಡಾ.ಯಲ್ಲಪ್ಪ ಹುಲ್ಕಲ್ ದೇವೇಂದ್ರಪ್ಪ ಮೇಟಿ ಬಲಭೀಮ ಮಡ್ನಾಳ ಯಮನಪ್ಪ ಅಗಸ್ತಿಹಾಳ ದೇವು ಭೀ,ಗುಡಿ ಮಹೇಶ ರಸ್ತಾಪುರ ಸರಕಾರಿ ಆಸ್ಪತ್ರೆಯ ಪ್ರಯೋಗ ಶಾಲೆಯ ತಾಂತ್ರಿಕ ಅಧಿಕಾರಿ ರಾಚನಗೌಡ ಕರೆಡ್ಡಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯವರು ಸೇರಿದಂತೆ ಇತರರು ಇದ್ದರು.