ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಗೆಲುವಿಗೆ ಕಾರಣ ಹರ್ಷ

 ಶಾಂತಗೌಡ ನಾಗನಟಿಗಿ ಕಾಂಗ್ರೆಸ್ ಯುವ ಮುಖಂಡ
ಶಹಾಪುರ : ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬಡವರಿಗಾಗಿ ಜಾರಿಗೆ ತಂದ 5 ಗ್ಯಾರಂಟಿಗಳು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ಕಾಂಗ್ರೆಸ್ ಯುವ ಮುಖಂಡರಾದ ಶಾಂತಗೌಡ ನಾಗನಟಗಿ ಹೇಳಿದರು. ಸಂಡೂರು ಸಿಗ್ಗಾವಿ ಚನ್ನಪಟ್ಟಣ ಉಪಚುನಾವಣೆ ಪಲಿತಾಂಶದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಮತ್ತು ಅವರ ಅಭಿಮಾನಿ ಬಳಗದವರು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರು.ಅಲ್ಲಿನ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಎಂದು ಹರ್ಷ

ವ್ಯಕ್ತಪಡಿಸಿದರು.
*********************************
ಸಂಡೂರು ಸಿಗ್ಗಾವಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ನಮ್ಮ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅವರು ಕೂಡ ಉಪಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದರು. ಅದರ ಶ್ರಮ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪಿದ್ದು ಗೆಲುವಿಗೆ ಕಾರಣವಾಗಿವೆ. ಸರಕಾರ ಯಾವತ್ತೂ ಬಡವರ ಪರವಾಗಿರುತ್ತದೆ. ಅದರ ಫಲ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. 

 ಶಾಂತಕುಮಾರ ಕಾಡಂಗೇರಾ

 ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕೆಪಿವೈಸಿ ಕಾಂಗ್ರೆಸ್ ಶಹಪುರ