ಶಹಾಪುರ,,,
ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ನಗರದ ಚರಬಸವೇಶ್ವರ ಕಮಾನಿನಲ್ಲಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಡೊಳ್ಳು ಬಾರಿಸುವ ಮೂಲಕ ಕನಕ ಜಯಂತಿಗೆ ಚಾಲನೆ ನೀಡಿದರು.
ಕನಕದಾಸರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದ ಸಚಿವರು ಮಾತನಾಡಿ, ಕನಕದಾಸರ ಸಾಹಿತ್ಯ ತತ್ವ ಪದಗಳ ಮೂಲಕ ಜನರ ಮನದಾಳದಲ್ಲಿ ಇಂದಿಗೂ ನೆಲೆಸಿದ್ದಾರೆ. ಕನಕದಾಸರ ನಿತ್ಯ ಶುಭ್ರ ಸಂತ ವ್ಯಕ್ತಿತ್ವ ಹೊಂದಿದ್ದು, ಕೃಷ್ಣರಲ್ಲಿ ಚಿನ್ಮಯ ರೂಪವನ್ನು ಕಂಡಿದ್ದರು.ಜಗದೀಶ್ವರನನ್ನು ಕಾಣುವುದೇ ಜೀವನದ ಸಾರ್ಥಕತೆ ಎಂದು ನಂಬಿದ್ದರು. ಭಕ್ತನು ಪೂರ್ಣನಾಗದೆಯೇ ಭಗವಂತನ ದರ್ಶನ ಸಾಧ್ಯವಿಲ್ಲ. ಅಂತರಂಗದ ಕಣ್ಣು ತೆರೆಯದ ಹೊರತು ಪರಮಾತ್ಮನ ದರ್ಶನ ಸಾಧ್ಯವಿಲ್ಲ ಎಂದು ನಂಬಿದ್ದ ಕನಕದಾಸರ ತತ್ವಾದರ್ಶಗಳು ನಾವು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಹಪೂರ ತಾಲೂಕ ಕುರುಬ ಸಂಘದ ಅಧ್ಯಕ್ಷರಾದ ಡಾ. ಭೀಮಣ್ಣ ಮೇಟಿ ಮಾತನಾಡುತ್ತಾ,
ಕನಕದಾಸರು ಸಂತ ಪರಂಪರೆಯ ಸರ್ವ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರು. ಶರಣರು ಸಂತರು, ಜ್ಯೋತಿ ಸ್ವರೂಪರಾಗಿ ಲೋಕವನ್ನು ಬೆಳಗುತ್ತಾರೆ. ಅಂತಹ ಧಾರ್ಮಿಕರಲ್ಲಿ ಕುಲವನ್ನು ಬದಿಗೋತ್ತಿದವರು ಕನಕದಾಸರು.ಅವರ ನಿತ್ಯ ಶುಭ್ರಸಂತ ವ್ಯಕ್ತಿತ್ವ ಅರ್ಥವಾಗದು. ಅವರ ದಾಸ ಸಾಹಿತ್ಯ ವಿಶ್ವಕ್ಕೆ ಚಿರಪರಿಚಿತವಾದದ್ದು. ನಾವೆಲ್ಲರೂ ಅವರ ಆದರ್ಶವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.


ಮೆರವಣಿಗೆಯಲ್ಲಿ ಅಪಾರ ಜನಸ್ತೋಮ ದಿಂದ ಕೂಡಿದ ಹಾಲುಮತ ಸಮಾಜದವರು ಪಾಲ್ಗೊಂಡಿದ್ದರು. ಮುಖಂಡರಾದ ಡಾ. ಭೀಮಣ್ಣ ಮೇಟಿ, ಬಸವರಾಜಪ್ಪಗೌಡ ವಿಭೂತಿಗಳ್ಳಿ, ಗಿರಿಯಪ್ಪಗೌಡ ಬಾಣತಿಹಾಳ, , ಶರಬಣ್ಣ ರಸ್ತಾಪುರ, ಮಹೇಶ ರಸ್ತಾಪುರ, ರವಿ ರಾಜಾಪುರ, ಸಿದ್ದಪ್ಪ ಕನ್ಯಾಕುಳ್ಳೂರು, ಮಲ್ಲನಗೌಡ ತಿಪ್ಪನಟಗಿ, ರಾಯಪ್ಪ ಚೆಲುವಾದಿ, ಬಲಭೀಮ ಮಡ್ನಾಳ್, ಮುನಿಯಪ್ಪ ಗೌಡ ನಾಗನಟಗಿ ಸೇರಿದಂತೆ ಅಪಾರ ಜನಸ್ತೋಮದಿಂದ ಕೂಡಿದ ಮೆರವಣಿಗೆ ನಗರಸಭೆಯು ಸಾಗಿತ್ತು.