ಶಹಾಪುರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ತಪಾಸಣೆಯಲ್ಲಿ ಹುಸಿ ಸಂದೇಶ ದೃಢ

ಶಹಾಪುರ,,
ನಗರದ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಕಲಾಪವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಜಿಲ್ಲಾ ನ್ಯಾಯಾಲಯದಿಂದ ಬಂದ ತುರ್ತು ಸೂಚನೆಯ ಮೇರೆಗೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ಅವರು ವಕೀಲರು, ಕಕ್ಷಿದಾರರು ಹಾಗೂ ಸಿಬ್ಬಂದಿಯನ್ನು ನ್ಯಾಯಾಲಯದ ಆವರಣದಿಂದ ಹೊರ ಹೋಗುವಂತೆ ಸೂಚಿಸಿದರು. ಇದರಿಂದ ನ್ಯಾಯಾಲಯ ಆವರಣದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕ ಉಂಟಾಯಿತು.
ಮಧ್ಯಾಹ್ನ 3.30 ಗಂಟೆಗೆ ನ್ಯಾಯಾಲಯದ ಕಲಾಪವನ್ನು ಪುನರಾರಂಭಿಸಲಾಯಿತು. ಯಾದಗಿರಿಯಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳವು ಶ್ವಾನದ ಸಹಾಯದಿಂದ ನ್ಯಾಯಾಲಯದ ಸಂಪೂರ್ಣ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿತು. ತಪಾಸಣೆ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಸಂದೇಶ ಎಂಬುದು ದೃಢಪಟ್ಟಿತು.
ಇದು ಹುಸಿ ಸಂದೇಶವಾಗಿದೆ ಎಂದು ನ್ಯಾಯಾಲಯದ ಸಿಬ್ಬಂದಿ, ವಕೀಲರು ನಿಟ್ಟುಸಿರು ಬಿಟ್ಟರು.

Leave a Reply

Your email address will not be published. Required fields are marked *