ನಾಗನಟಗಿ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಸಚಿವರ ಭೇಟಿ | ದೇವಸ್ಥಾನ ಕಾಂಪೌಂಡ್ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಭರವಸೆ

ಶಹಾಪುರ : ತಾಲೂಕಿನ ನಾಗನಟಗಿ ಗ್ರಾಮದಲ್ಲಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆ ಕಾರ್ಯಕ್ರಮವಿದ್ದು ಶುಕ್ರವಾರ ಕೊನೆಯ ದಿನ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಚಿವರು ದೇವರ ಕೃಪಾಶೀರ್ವಾದದಿಂದ ಈ ವರ್ಷ ಉತ್ತಮವಾದ ಮಳೆ ಬೆಳೆಯಾಗಿದ್ದು ರೈತರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ.

ರೈತರ ಮೊಗದಲ್ಲಿ ಈ ವರ್ಷ ಸಂತಸವಿದೆ. ಪ್ರಸ್ತುತ ವರ್ಷದಲ್ಲಿ ಎರಡನೇ ಬೆಳೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದ್ದು ಎರಡನೇ ಬೆಳೆಗೆ ನೀರನ್ನು ಬಿಡಲಾಗುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು. ನಾಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಕಾಂಪೌಂಡ್ ಹಾಗೂ ರೈತರ ಜಮೀನುಗಳಿಗೆ ಹೋಗಲು ಅನುಕೂಲವಾಗುವಂತೆ ಸಿಸಿ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಭೀಮನಗೌಡ ವಕೀಲರು ದರಿಯಾಪುರ, ನಾನೇಗೌಡ ಮೇಟಿ ಸೈದಾಪುರ, ಶರಣಗೌಡ ಬಿರಾದರ ಸೈದಾಪುರ, ನಿಂಗನಗೌಡ ದಳಪತಿ ನಾಗನಟಗಿ, ಅಂಬರೀಶ ಮಕಾಸಿ ನಾಗನಟಗಿ, ಗಂಗಪ್ಪ ಹೊಸಮನಿ, ಸೋಪಣ್ಣ ಸುರಪುರ, ಭೀಮಣ್ಣ ಹೊಸಮನಿ, ತಿರುಪತಿ ಬಾಣತಿಹಾಳ ಸೇರಿದಂತೆ ಗ್ರಾಮಸ್ಥರು ಇದ್ದರು

*********

ಅಭಿವೃದ್ಧಿಗೆ ಇನ್ನೊಂದು ಹೆಸರೇ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ. ರಾಜ್ಯಾದ್ಯಂತ ಐದು ಗ್ಯಾರಂಟಿಗಳ ನಡುವೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ನಾಗನಟಗಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದವರೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ”

ಶಾಂತಗೌಡ ನಾಗನಟಗಿ ಕಾಂಗ್ರೆಸ್ ಮುಖಂಡರು

**********

“ಸಚಿವರು ದೇವಸ್ಥಾನಗಳಿಗೆ ಭರಪೂರ ಅನುದಾನವನ್ನು ನೀಡಿದ್ದಾರೆ. ಪ್ರತಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಾ ಅವರ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುದಾನದ ಕೊರತೆಯಾಗದಂತೆ ಜಿಲ್ಲೆಯಾದ್ಯಂತ ಅನುದಾನ ಒದಗಿಸಿ ಕೊಟ್ಟಿದ್ದಾರೆ”

ಶಾಂತಕುಮಾರ ಕಾಡಂಗೇರ.ಬಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕೆಪಿವೈಸಿ(ಯೂಥ್ ಕಾಂಗ್ರೆಸ್) ಕಾಂಗ್ರೆಸ್ ಶಹಾಪುರ

About The Author