ಕರ್ನಾಟಕ ಅಹಿಂದ ಜನ ಸಂಘದ ಬೀದರ್ ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷೆ ಯಾಗಿ ಶ್ರೀದೇವಿ ನೇಮಕ

ಬೆಂಗಳೂರು :- ಕರ್ನಾಟಕ ಅಹಿಂದ ಜನ ಸಂಘದ ಬೀದರ್ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಶ್ರೀದೇವಿ ಗಂ‌/ ಸಂತೋಷ್ ರವರನ್ನು ನೇಮಕ ಮಾಡಲಾಗಿದೆ.ಅಹಿಂದ ಜನ ಸಂಘದ ಸಂಸ್ಥಾಪ • ಕರು ಮತ್ತು ರಾಜ್ಯಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ಶ್ರೀದೇವಿ ಗಂ/ ಸಂತೋಷ್ ಅವರನ್ನು ನೇಮಕ ಮಾಡಿ. ಅಹಿಂದ ಸಮುದಾಯದ ಜನರು ಸಾಮಾಜಿಕಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋ ಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.

ತಮ್ಮ  ನೇಮಕದ ಬಗ್ಗೆ ಹರ್ಷ ವ್ಯಕ್ತಪ ಡಿಸಿರುವ ಶ್ರೀದೇವಿ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.