ಪವಾಡ ಪುರುಷ ಕರೆಗಾರ ನಿಂಗಯ್ಯಜ್ಜ :  ನಿಂಗಯ್ಯಜ್ಜನ ಕರೆ (ನಿಜ) ನುಡಿಗಳು

ಮುಂದುವರಿದ ಭಾಗ,

ನಿಂಗಯ್ಯಜ್ಜನ ಆಡಿದ ಮಾತುಗಳು ಎಂದಿಗೂ ಹುಸಿಯಾಗಲಿಲ್ಲ. ಅದಕ್ಕಾಗಿಯೇ ಆತನನ್ನು ಕರೆಗಾರ ನಿಂಗಯ್ಯ ಎಂದು ಕರೆಯುತ್ತಿದ್ದರು. ಸುರಪುರದ ದೀವಳಗುಡ್ಡದಿಂದ ಬಂದ ನಿಂಗಯ್ಯಜ್ಜನಿಗೆ ಬಸವಂತಪುರ ಗ್ರಾಮದ ಜನರು ಸ್ಥಳಾವಕಾಶ ಮಾಡಿಕೊಟ್ಟಿದ್ದರಂತೆ. ಅದೇ ಗ್ರಾಮದಲ್ಲಿಯೇ ನೆಲೆಸಿದರು ನಿಂಗಯಜ್ಜ. ಪವಾಡ ಪುರುಷ ನಿಂಗಯ್ಯಜ್ಜನ ನಾಲಿಗೆಯ ಮೇಲೆ ಸತ್ಯ ಹರಿದಾಡುತ್ತಿದ್ದವು ಸತ್ಯದ ನುಡಿಗಳು.
ಭಕ್ತರ ಜೀವಾಳವೇ ಆಸ್ತಿಯಾಗಿತ್ತು ನಿಂಗಯಜ್ಜನಿಗೆ. ಆ ಕುಟುಂಬ ಆಧ್ಯಾತ್ಮದ ನೆರಳಲ್ಲಿ ಬದುಕುತ್ತಿದ್ದರು.ಬಸವಂತಪುರ ಗ್ರಾಮ ಸೇರಿದಂತೆ ಹಲವು ಜಿಲ್ಲೆಗಳು ಹೊರ ರಾಜ್ಯಗಳಿಗೆ ಆತನ ಪವಾಡಗಳು ಹರಡಿದ್ದವು.ಆಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಬಸ್ ವ್ಯವಸ್ಥೆ ಇರಲಿಲ್ಲ. ನಡೆದುಕೊಂಡೆ ಹೋಗಬೇಕಿತ್ತು. ಅಂತಹ ಸಂದರ್ಭದಲ್ಲಿಯೇ ಸಾವಿರಾರು ಪವಾಡ ಮಾಡಿದ್ದರು ನಿಂಗಯ್ಯಜ್ಜನವರು. ತಂದೆ : ಖಂಡಪ್ಪ, ತಾಯಿ : ಶಿವಬಸ್ಸಮ್ಮ ರವರ ದಂಪತಿಗಳ ಪುತ್ರನಾಗಿ ಜನಿಸಿದ ನಿಂಗಯ್ಯಜ್ಜನ ಕುಟುಂಬದಲ್ಲಿ ಒಬ್ಬರು ಅವತಾರ ಪುರುಷರಾಗಿ ದೈವ ಸಂಭೂತರಾಗಿ ನಿಜ ಹೇಳಿಕೆ ಹೇಳುತ್ತಾರೆ. ಇದು ವಂಶಪಾರಂಪರ್ಯವಾಗಿ ಬೆಳೆದು ಬಂದಿರುತ್ತದೆ. ಅಂತಹ ಪುಣ್ಯಪುರುಷರಲ್ಲಿ ನಿಂಗಯಜ್ಜ ಒಬ್ಬರು.
ಭಕ್ತರು ಕೊಡುವ ರೇಷನ್ ಗಳಿಂದಲೇ ಜೀವನ ಸಾಗಿಸುತ್ತಿದ್ದರು.ಬಸವಂತಪುರ ಗ್ರಾಮದ ಕೆಲವು ಭಕ್ತ ಕುಟುಂಬಕ್ಕೆ ವರದಾನವನ್ನು ನೀಡಿದ್ದರು. ಅದನ್ನು ಅವರು ಮರೆತಂತೆ ಕಾಣುತ್ತಿದೆ.ಒಂದು ಸಾರಿ ಹೇಳಿದರೆ ಮಾತಿಗೆ ತಪ್ಪುವುದಿಲ್ಲ.ಅಂತಹ ಪವಾಡವೇ ಮಾಡಿದವರು ನಿಂಗಯಜ್ಜನವರು.ಪತ್ನಿ ಇಬ್ಬರು ಪುತ್ರಿಯರಿದ್ದರು.ಪತ್ನಿ ಭೀಮವ್ವ,ಚೆನ್ನಮ್ಮ ಮತ್ತು ಅಯ್ಯಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.ಎಲ್ಲರಿಗೂ ಗಂಡು ಸಂತತಿ ಬೇಕೆನಿಸುತ್ತದೆ. ಅದೇ ರೀತಿ ಪತ್ನಿ ಭೀಮವ್ವನಿಗೂ ಕೂಡ ಗಂಡು ಮಗು ಬೇಕೆನಿಸಿತು. ಸ್ವತಃ ನಿಂಗಯಜ್ಜನೇ ನಮಗೆ ಗಂಡು ಸಂತಾನವಾಗುವುದಿಲ್ಲ ಎಂದು ಹೇಳಿಯೇ ಬಿಟ್ಟಿದ್ದರು.ಅವರೇಳಿದರೆಂದರೆ ಅದು ಸತ್ಯ. ಅದೆಂದೂ ಸುಳ್ಳಾಗುವುದಿಲ್ಲ. ನಿಂಗಯ್ಯಜ್ಜ ದಂಪತಿಗಳಿಗೆ ಗಂಡು ಸಂತಾನವಾಯಿತು. ದುರಾದೃಷ್ಟ ಮಗು ಬದುಕಲಿಲ್ಲ. ನಿಂಗಯಜ್ಜ ಹೇಳಿದ ಹಾಗೆ ಗಂಡು ಸಂತತಿ ನಮಗಿಲ್ಲ ಎಂದು ಹೇಳಿದ್ದರು.ಅದೇ ರೀತಿ ಆಯಿತು.
ಮುಂದುವರಿಯುವುದು……

About The Author